ವಿದ್ಯಾವಂತರ ಜಿಲ್ಲೆಯಲ್ಲೂ ಬಾಲ್ಯ ವಿವಾಹ ! 5 ವರ್ಷಗಳಲ್ಲಿ 12 ಬಾಲ್ಯವಿವಾಹ !
96 ಪ್ರಕರಣ ಪತ್ತೆ; 84 ವಿವಾಹಕ್ಕೆ ತಡೆ
Team Udayavani, Oct 12, 2022, 7:10 AM IST
ಉಡುಪಿ: ವಿದ್ಯಾವಂತ ಜಿಲ್ಲೆ ಗಳೆಂಬ ಅಭಿದಾನಕ್ಕೆ ಒಳಗಾಗಿರುವ ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಬಾಲ್ಯ ವಿವಾಹಗಳು ನಡೆಯುತ್ತವೆ !
ಸರಕಾರಿ ಅಂಕಿ ಅಂಶಗಳ ಪ್ರಕಾರ 2017-18ರಿಂದ 22ರ ವರೆಗೆ ಎರಡು ಜಿಲ್ಲೆಗಳಲ್ಲಿ 96 ಪ್ರಕರಣಗಳು ಬೆಳಕಿಗೆ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದ 66 ಪ್ರಕರಣ ಗಳಲ್ಲಿ 57 ಪ್ರಕರಣಗಳನ್ನು ಕೊನೆಯ ಕ್ಷಣ ದಲ್ಲಿ ಪತ್ತೆಹಚ್ಚಿ ತಡೆಯ ಲಾಗಿದೆ. ಉಡುಪಿ ಜಿಲ್ಲೆಯಲ್ಲಿ 30 ಪ್ರಕರಣಗಳ ಪೈಕಿ 27 ಪ್ರಕರಣಗಳಲ್ಲಿ ತಡೆಯಲಾಗಿದೆ. ವಿವಿಧ ಇಲಾಖೆ ಹಾಗೂ ಸಮಾಜದ ಜಾಗೃತಿ ಕಾರ್ಯದ ಮಧ್ಯೆಯೂ ಉಭಯ ಜಿಲ್ಲೆಗಳಲ್ಲಿ 12 ಬಾಲ್ಯ ವಿವಾಹ ನಡೆದಿದ್ದು, ಎಫ್ಐಆರ್‌ಗಳು ಆಗಿವೆ.
58 ಸಾವಿರ ಅಧಿಕಾರಿಗಳು
ಬಾಲ್ಯ ವಿವಾಹ ತಡೆಗೆ ರಾಜ್ಯ, ಜಿಲ್ಲೆ, ತಾಲೂಕು, ಗ್ರಾ.ಪಂ. ವ್ಯಾಪ್ತಿಯಲ್ಲಿ 58 ಸಾವಿರ ಅಧಿಕಾರಿ ಗಳನ್ನು ಬಾಲ್ಯ ವಿವಾಹ ನಿಷೇಧ ಅಧಿ ಕಾರಿಗಳೆಂದು ಸರಕಾರ ಗುರು ತಿಸಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸಹಿತ 10 ಇಲಾಖೆಯ ಅಧಿಕಾರಿಗಳಿಗೆ ಹೊಣೆ ವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳು,ಬೀದಿ ನಾಟಕ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಅಥವಾ ಹತ್ತಿರುವ ಪೊಲೀಸ್ ಠಾಣೆಗೆ ದೂರು ನೀಡಿದರೆ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಶಿಕ್ಷಣಕ್ಕೆ ಕುಂದು
ಹಲವೆಡೆ ಹೆಣ್ಣು ಮಕ್ಕಳಿಗೆ 16-17 ವರ್ಷಕ್ಕೆ ಮದುವೆ ಮಾಡುತ್ತಾರೆ. ಅನೇಕರು ಆರ್ಥಿಕ, ಕೌಟುಂಬಿಕ ಕಾರಣದಿಂದಲೂ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡು ತ್ತಾರೆ. ಇದರಿಂದ ಅವರು ಶಿಕ್ಷಣದ ಅವಕಾಶದಿಂದ ವಂಚಿತ ರಾಗು ತ್ತಾರೆ. ಸಣ್ಣ ವಯಸ್ಸಿನಲ್ಲಿ ಹೊಣೆ ಯೊಂದಿಗೆ ಶೋಷಣೆಯೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ತಡೆಯಬೇಕಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿ ಯೊಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.