ಅಪಘಾತ ವಲಯವಾದ ಚಿಲಿಂಬಿ ರಸ್ತೆ
ರಸ್ತೆ ಅಭಿವೃದ್ಧಿಯಾದ ಬಳಿಕ ವಾಹನಗಳ ವೇಗದ ಸಂಚಾರ ; ತಡೆಬೇಲಿ, ಸೂಚನ ಫಲಕಗಳಿಲ್ಲದೆ ಅಪಾಯಕ್ಕೆ ಆಹ್ವಾನ
Team Udayavani, Jul 8, 2019, 5:06 AM IST
ಕಾರ್ಕಳ: ಮಂಗಳೂರು-ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿ 165ರ ಸಾಣೂರು ಬಳಿಯ ಚಿಲಿಂಬಿಯಲ್ಲಿ ವಾಹನಗಳ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು ಆತಂಕಕ್ಕೀಡು ಮಾಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸಿವೆ. ಬೆಳುವಾಯಿಯಿಂದ ಎಸ್.ಕೆ. ಬಾರ್ಡರ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಹನ ಚಾಲಕರು, ದ್ವಿಚಕ್ರ ಸವಾರರು ವೇಗವಾಗಿ ಹೋಗುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ.
ತಿರುವು
ಈ ರಸ್ತೆ ಅನೇಕ ತಿರುವು-ಮುರುವು ಹೊಂದಿದೆ. ಏರು -ತಗ್ಗುವಿನಿಂದಲೂ ಕೂಡಿದೆ. ಸಾಣೂರು ರಸ್ತೆಯ ಒಂದು ಬದಿ ಪ್ರಪಾತವಿದೆ. ಹೀಗಾಗಿ ಎಚ್ಚರಿಕೆಯಿಂದಲೇ ತಮ್ಮ ವಾಹನ ಚಲಾಯಿಸಿದಲ್ಲಿ ಸಂಭವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.
ಬೆಳುವಾಯಿ ಹಾಗೂ ಸಾಣೂರು ಕಡೆಗಳಿಂದ ವೇಗವಾಗಿ ಬರುವ ವಾಹನಗಳು ಚಿಲಿಂಬಿ ಸಮೀಪಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಗೋಡೆಗಪ್ಪಳಿಸುವುದು, ಕೆಲವೊಮ್ಮೆ ಎದುರುಗಡೆಯಿಂದ ಬರುವ ವಾಹನಕ್ಕೆ, ಅಥವಾ ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆಯುತ್ತಿವೆ. ನೂತನ ರಸ್ತೆಯಾಗಿರುವುದರಿಂದ ತೈಲಾಂಶವಿರುವುದೂ ಅವಘಡಕ್ಕೆ ಒಂದು ಕಾರಣವೆಂದು ಸ್ಥಳೀಯರು ಹೇಳುತ್ತಾರೆ.
ತಡೆಬೇಲಿ ಅಗತ್ಯ
ರಸ್ತೆಯ ಒಂದು ಭಾಗದಲ್ಲಿ ತಡೆಬೇಲಿಯನ್ನಾದರೂ ಮಾಡುವುದು ಉತ್ತಮ. ಅಪಘಾತ ವಲಯ ಸೂಚನ ಫಲಕವನ್ನು ಅಳವಡಿಸಬೇಕು. ರಿಫ್ಲೆಕ್ಟರ್‌ಗಳನ್ನು ಅಂಟಿಸುವುದರಿಂದಲೂ ರಾತ್ರಿ ವೇಳೆ ಚಾಲಕರಿಗೆ ಎಚ್ಚರಿಕೆ ನೀಡುವುದಕ್ಕೆ ನೆರವಾಗುತ್ತದೆ.
ಸುರಕ್ಷತೆ ಅಗತ್ಯ
ಸುರಕ್ಷಿತ ಪ್ರಯಾಣಕ್ಕೆ ಇಲಾಖೆಯವರು ಸೂಚನ ಫಲಕ, ತಡೆಬೇಡಿಲಿಗಳನ್ನು ಅಳವಡಿಸಬೇಕು. ರಸ್ತೆ ಅಭಿವೃದ್ಧಿಗೊಂಡ ಬಳಿಕ ವಾಹನ ಚಾಲಕರು ಅತಿ ವೇಗದಲ್ಲಿ ತಮ್ಮ ವಾಹನವನ್ನು ಚಲಾಯಿಸದೆ ವೇಗಕ್ಕೆ ಕಡಿವಾಣ ಹಾಕುವುದು ಉತ್ತಮ.
-ಗಣೇಶ್ ನಾಯಕ್,
ಸಾಣೂರು ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.