ಚಿಲಿಂಬಿ: ತ್ಯಾಜ್ಯ ಎಸೆದವರಿಂದಲೇ ಸ್ಥಳ ಸ್ವಚ್ಛಗೊಳಿಸಿದ ಯುವಕರು!
Team Udayavani, Aug 4, 2019, 5:51 AM IST
ಬಿಸಾಡಲಾಗಿದ್ದ ತ್ಯಾಜ್ಯವನ್ನು ಹೆಕ್ಕಿ ಪುನಃ ವಾಹನಕ್ಕೆ ತುಂಬಿರುವುದು.
ಪಳ್ಳಿ: ಕಾಂತಾವರ ಗ್ರಾ. ಪಂ. ವ್ಯಾಪ್ತಿಯ ಕಾರ್ಕಳ ಮೂಡಬಿದಿರೆ ಹೆದ್ದಾರಿಯ ಚಿಲಿಂಬಿ ಬಳಿ ತ್ಯಾಜ್ಯ ಎಸೆಯುತ್ತಿದ್ದವರಿಂದಲೇ ತ್ಯಾಜ್ಯ ತುಂಬಿಸಿ ವಾಪಸ್ ಕಳುಸಿದ ಘಟನೆ ಇತ್ತೀಚೆಗೆ ನಡೆದಿದೆ.
ತೀರ್ಥಹಳ್ಳಿಯ ಕ್ಯಾಟರಿಂಗ್ ಸಂಸ್ಥೆಯೊಂದು ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿ ಊಟದ ಉಳಿದ ತ್ಯಾಜ್ಯವನ್ನು ತುಂಬಿಸಿ ಚಿಲಿಂಬಿ ರಸ್ತೆ ಬಳಿ ಎಸೆದು ಹೋಗಿದ್ದರು. ಬೇರೆ ಬೇರೆ ಕಡೆಯ ತ್ಯಾಜ್ಯಗಳನ್ನು ಚಿಲಿಂಬಿ ಬಳಿ ಎಸೆದು ಹೋಗುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳಿತ್ತು. ಈ ಬಗ್ಗೆ ಸ್ಥಳೀಯ ಯುವಕರು ಸಾಕಷ್ಟು ನಿಗಾ ವಹಿಸಿದ್ದರು.
ಸ್ಥಳಾಂತರಿಸುವಂತೆ ಸೂಚನೆ
ಇತ್ತೀಚೆಗೆ ಎಸೆದ ತ್ಯಾಜ್ಯ ಗಳ ಚೀಲದಲ್ಲಿ ಕ್ಯಾಟರಿಂಗ್ ಸಂಸ್ಥೆಯೊಂದರ ಟಿಶ್ಯೂ ಪೇಪರ್ ಲಭಿಸಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್‌ನ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದ ಯುವಕರ ತಂಡವು ಕರೆ ಮಾಡಿ ಕ್ಯಾಟರಿಂಗ್ ಸಂಸ್ಥೆ ಮಾಲಕರನ್ನು ತರಾಟೆ ತೆಗೆದುಕೊಂಡರಲ್ಲದೆ ತ್ಯಾಜ್ಯವನ್ನು ಚಿಲಿಂಬಿಯಿಂದ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಜು. 31 ರಾತ್ರಿ ಕ್ಯಾಟರಿಂಗ್ ಸಂಸ್ಥೆ ಮಾಲಕರು ತ್ಯಾಜ್ಯವನ್ನು ತುಂಬಿಸಿ ಕೊಂಡೊಯ್ದಿದ್ದಿದ್ದಾರೆ.
7,000 ರೂ. ದಂಡ
ಈ ಸಂದರ್ಭ ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಕಾನೂನು ಉಲ್ಲಂಘಿಸಿದ್ದಕ್ಕಾಗಿ ಕ್ಯಾಟರಿಂಗ್ ಸಂಸ್ಥೆಗೆ 7,000 ರೂ. ದಂಡ ವಿಧಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಬಂಗ್ಲೆ ಫ್ರೆಂಡ್ಸ್, ಬಾರಾಡಿ ಫ್ರೆಂಡ್ಸ್ ಯುವಕರು ಸಹಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.