ಮತ್ತೆ ಬಂದಿದೆ “ಉದಯವಾಣಿ’ಯ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Team Udayavani, Oct 18, 2022, 1:20 PM IST
ಮಣಿಪಾಲ : ಕರಾವಳಿ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ’ ಮತ್ತೆ ಆರಂಭವಾಗಲಿದೆ. ಉದಯವಾಣಿ ದಿನಪತ್ರಿಕೆಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಲವಾರು ವರ್ಷಗಳಿಂದ ಆಯೋಜಿಸಿ ಕೊಂಡು ಬರುತ್ತಿರುವ ಈ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು, ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಯು ಉಡುಪಿಯ ಆರ್ಟಿಸ್ಟ್‌ಸ್ ಫೋರಂ ಸಹಯೋಗದೊಂದಿಗೆ ನಡೆದುಕೊಂಡು ಬರುತ್ತಿದೆ.
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಮತ್ತು ಪಾಲಕ ಪೋಷಕರ ಅನುಕೂಲಕ್ಕೆ ತಕ್ಕಂತೆ ಉಭಯ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಎರಡೂ ಜಿಲ್ಲೆಗಳ 15 ತಾಲೂಕುಗಳಲ್ಲಿ ಹಮ್ಮಿಕೊಂಡಿದ್ದು, ಮೊದಲ ಹಂತದ ತಾಲೂಕು ಮಟ್ಟದ ಸ್ಪರ್ಧೆಯು ಅ. 22ರಿಂದ 30ರ ತನಕ ನಡೆಯಲಿದೆ.
ಮೂರು ವಿಭಾಗ
1ರಿಂದ 3, 4ರಿಂದ 7, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬೇಕು. ಮೊದಲೆರಡು ವಿಭಾಗಗಳಲ್ಲಿ ಐಚ್ಛಿಕ ವಿಷಯಗಳ ಮೇಲೆ ಚಿತ್ರ ಬಿಡಿಸಬಹುದು. ಕೊನೆಯ ವಿಭಾಗಕ್ಕೆ ಸ್ಥಳದಲ್ಲಿಯೇ ವಿಷಯ ನೀಡಲಾಗುವುದು. ಡ್ರಾಯಿಂಗ್ ಶೀಟ್ ಒದಗಿಸಲಾಗುವುದು. ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ಯಾವ ತಾಲೂಕಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೋ ಅದೇ ತಾಲೂಕಿನಿಂದ ಸ್ಪರ್ಧೆಗೆ ಭಾಗವಹಿಸಬೇಕು. ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಸಮಾಧಾನಕರ ಬಹುಮಾನಗಳಿವೆ.
ತಾಲೂಕಿನ ವಿಜೇತರಿಗೆ ಜಿಲ್ಲಾ ಮಟ್ಟದ ಸ್ಪರ್ಧೆ
ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಉಭಯ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಹ್ವಾನಿಸಲಾಗುವುದು. ಎಲ್ಲ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ಮತ್ತು ವಿಶೇಷ ಉಡುಗೊರೆ ನೀಡಲಾಗುವುದು. ಬಹುಮಾನ ವಿಜೇತ ಚಿತ್ರಗಳನ್ನು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಉಭಯ ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಯು ನ. 6ರಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲ್‌ನಲ್ಲಿ ನಡೆಯಲಿದ್ದು ಸ್ಪರ್ಧೆಯ ಅನಂತರ ತಾಲೂಕು ಮಟ್ಟದ ಹಾಗೂ ಉಭಯ ಜಿಲ್ಲಾ ಮಟ್ಟದ ಬಹುಮಾನ ವಿತರಿಸಲಾಗುವುದು.
ಅ. 22 ಅಪರಾಹ್ನ 3 ರಿಂದ 5
ಬೆಳ್ತಂಗಡಿ ತಾಲೂಕು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾ ಭವನ ಸಂತೆಕಟ್ಟೆ ಬೆಳ್ತಂಗಡಿ
ಬಂಟ್ವಾಳ ತಾಲೂಕು : ತಿರುಮಲ ವೆಂಕಟರಮಣ ಕಲ್ಯಾಣ ಮಂಟಪ ಬಂಟ್ವಾಳ
ಬೈಂದೂರು ತಾಲೂಕು : ದೇವಕಿ ಆರ್. ಸಭಾಂಗಣ, ಹೊಟೇಲ್ ಪರಿಚಯ, ಉಪ್ಪುಂದ
ಕುಂದಾಪುರ ತಾಲೂಕು : ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ
ಅ. 23 ಬೆಳಗ್ಗೆ 10 ರಿಂದ 12
ಸುಳ್ಯ ತಾಲೂಕು : ಕೆವಿಜಿ ಕಾನೂನು ಮಹಾವಿದ್ಯಾಲಯ (ಚೆನ್ನಕೇಶವ ದೇವಸ್ಥಾನದ ಬಳಿ)
ಕಡಬ ತಾಲೂಕು : ಸೈಂಟ್ ಜೋಕಿಂ ವಿದ್ಯಾ ಸಂಸ್ಥೆ ಕಡಬ
ಹೆಬ್ರಿ ತಾಲೂಕು : ಎಸ್‌ಆರ್ ಪಬ್ಲಿಕ್ ಸ್ಕೂಲ್,ಹೆಬ್ರಿ
ಕಾರ್ಕಳ ತಾಲೂಕು : ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು,
ಅ. 23 ಅಪರಾಹ್ನ 3ರಿಂದ 5
ಬ್ರಹ್ಮಾವರ ತಾಲೂಕು : ಬಂಟರ ಭವನ, ಬ್ರಹ್ಮಾವರ ಬಸ್ ನಿಲ್ದಾಣದ ಎದುರು
ಕಾಪು ತಾಲೂಕು : ಸಭಾಭವನ, ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಕಾಪು
ಪುತ್ತೂರು ತಾಲೂಕು : ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ
ಅ. 29 ಅಪರಾಹ್ನ 3
ಮಂಗಳೂರು ತಾಲೂಕು : ಕೆನರಾ ಪ್ರೌಢಶಾಲೆ, ಉರ್ವ
ಅ. 30 ಬೆಳಗ್ಗೆ 10 ರಿಂದ 12
ಮೂಲ್ಕಿ ತಾಲೂಕು : ವ್ಯಾಸ ಮಹರ್ಷಿ ಪ್ರೌಢಶಾಲೆ ಮೂಲ್ಕಿ
ಮೂಡುಬಿದಿರೆ ತಾಲೂಕು : ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾಗಿರಿ
ಅ. 30 ಅಪರಾಹ್ನ 3 ರಿಂದ 5
ಉಳ್ಳಾಲ ತಾಲೂಕು : ವಿದ್ಯಾರತ್ನಾ ಆಂಗ್ಲಮಾಧ್ಯಮ ಶಾಲೆ, ದೇರಳಕಟ್ಟೆ
ಉಡುಪಿ ತಾಲೂಕು : ಶ್ರೀ ಮಹಾಕಾಳಿ ಜನಾರ್ದನ ದೇವಸ್ಥಾನ, ಅಂಬಲಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Demand: ಕೊರೆವ ಚಳಿಯಲ್ಲೂ ಮುಂದುವರಿದ ‘ಆಶಾ’ ಕಾರ್ಯಕರ್ತೆಯರ ಮುಷ್ಕರ
ಎಂಟು ಅಧಿಕಾರಿಗಳಿಗೆ ಸೇರಿದ 38 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ: 21 ಕೋಟಿ ರೂ. ಆಸ್ತಿ ಪತ್ತೆ
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.