Udupi ಬಿಷಪರಿಂದ ಕ್ರಿಸ್‌ಮಸ್ ಸಂದೇಶ: ಬೆಳಕು ನಮ್ಮಲ್ಲಿರುವ ಶಾಶ್ವತ ಕತ್ತಲನ್ನು ದೂರಮಾಡಲಿ
Team Udayavani, Dec 23, 2023, 10:13 PM IST
ಉಡುಪಿ: ಕ್ರಿಸ್ತ ಜಯಂತಿಯ ಆಚರಣೆಯಲ್ಲಿ ನಾವು ಬೆಳಕಿಗೆ, ದೀಪಾಲಂಕಾರಕ್ಕೆ ಮಹತ್ವ ಕೊಡುತ್ತೇವೆ. ಗೋದಲಿ, ಕ್ರಿಸ್‌ಮಸ್ ಟ್ರೀ, ನಕ್ಷತ್ರದಲ್ಲಿ ಬೆಳಗಿದ ಬೆಳಕು ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಬೆಳಕಿನ ಹಬ್ಬ ದೀಪಾವಳಿಯಂತೆ ಕೆಲವೇ ದಿನಗಳಿಗೆ ಸೀಮಿತವಾಗಿದ್ದು ಆನಂತರ ಪುನಃ ಕತ್ತಲು ಆವರಿಸುತ್ತದೆ.
ಬೆಳಕು ಬೇಕು ಎಂದಾಗಲೆಲ್ಲ ನಾವು ದೀಪವನ್ನು ಹೊತ್ತಿಸಿ ಕತ್ತಲೆಯನ್ನು ಹೋಗಲಾಡಿಸಬೇಕಾಗಿದೆ. ದೇವರಿಂದ ಹೊರಹೊಮ್ಮಿದ ನಿಜ ಬೆಳಕು ಮಾತ್ರ ಈ ಕತ್ತಲೆಯನ್ನು ಹೋಗಲಾಡಿಸಬಲ್ಲದು. ಇದು ಆಧ್ಯಾತ್ಮಿಕ ಜ್ಯೋತಿ. “ಕತ್ತಲಿನಲ್ಲಿ ಸಂಚರಿಸುತ್ತಿದ್ದ ಜನರಿಗೆ ಒಂದು ಮಹಾಜ್ಯೋತಿ ಕಾಣಿಸಿತು. ಮರಣದ ನೆರಳಿನಲ್ಲಿ ನೆಲೆಸಿದ ನಾಡಿನಲ್ಲಿ ಆ ಜ್ಯೋತಿ ಪ್ರಜ್ವಲಿಸಿತು’ (ಯೆಶಾಯಾ 9:2). ಈ ದೀರ್ಘ ದರ್ಶನ ದೇಹಾಂಬರವಾಗಿ ಈ ಲೋಕದಲ್ಲಿ ಜನ್ಮತಳೆದು ಪ್ರಭು ಕ್ರಿಸ್ತರಲ್ಲಿ ಪ್ರತ್ಯಕ್ಷವಾಯಿತು. “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ’ (ಯೋವಾ 8:12) “ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ’ ಎಂದರು ಪ್ರಭು ಯೇಸು.
ಮಾನವರೆಲ್ಲರನ್ನು ಬೆಳಗಿಸಲು ಈ ಲೋಕಕ್ಕೆ ಆಗಮಿಸಿದ ಬೆತ್ಲೆಮಿನ ಬಾಲ ಯೇಸು ನಮ್ಮ ಮಾನಸಿಕ ಮತ್ತು ಆತ್ಮಿಕ ಅಂಧಕಾರವನ್ನು ನೀಗಿಸಿ ನಮ್ಮನ್ನು ಸತ್ಯಮಾರ್ಗದಲ್ಲಿ ನಡೆಸಲಿ. ಇದೇ ಕ್ರಿಸ್ತ ಜಯಂತಿಯ ಶುಭಾಶಯಗಳು ಮತ್ತು ಹೊಸ ವರ್ಷದ ಹಾರೈಕೆಗಳು.
– ಡಾ| ಜೆರಾಲ್ಡ್ ಐಸಾಕ್ ಲೋಬೊ, ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.