ಚರ್ಚ್ ರೋಡ್ ಕಾಮಗಾರಿ ನಿರ್ವಹಣೆ: ಜನರಿಗೆ ತಪ್ಪಿದ ಬವಣೆ
Team Udayavani, Jul 2, 2018, 6:00 AM IST
ಕುಂದಾಪುರ: ಇಲ್ಲಿನ ಚರ್ಚ್ ರೋಡ್ನಲ್ಲಿ ಚರಂಡಿ ಕಾಮಗಾರಿಯನ್ನು ತತ್ಕ್ಷಣ ನಿರ್ವಹಿಸಿ ಸರಿಪಡಿಸಲಾಗಿದೆ. ಕಾಮಗಾರಿ ನಿಧಾನಗತಿಯಿಂದಾಗಿ ಹಾಗೂ ಮಳೆಗಾಲದಲ್ಲಿ ಕಾಮಗಾರಿ ನಿರ್ವಹಿಸಿದ ಕಾರಣ ಜನರಿಗೆ ತೊಂದರಯಾಗುತ್ತಿತ್ತು.
ಚರಂಡಿ ಕಾಮಗಾರಿಯ ಸ್ಲಾಬ್ಗಳನ್ನು ರಸ್ತೆಯಲ್ಲೇ ದಿನಗಟ್ಟಲೆ ಹಾಕಿದ ಕಾರಣ ವಾಹನಗಳ ಓಡಾಟಕ್ಕೆ ತೊಂದರೆ ಯಾಗುತ್ತಿತ್ತು. ಚರಂಡಿ ತೆರೆದು ಸ್ಲಾಬ್ ಮುಚ್ಚದ ಕಾರಣ ಮನೆಯವರು ವಾಹನ ವನ್ನು ಮನೆಯಂಗಳದಿಂದ ರಸ್ತೆಗೆ ಇಳಿಸು ವಂತಿರಲಿಲ್ಲ. ಮನೆಯಂಗಳಕ್ಕೆ ಇತರ ವಾಹನ ತರುವಂತೆಯೂ ಇರಲಿಲ್ಲ.
ರವಿವಾರದಂದು ಬೆಳಗಿನ ಹೊತ್ತು ಈ ರಸ್ತೆಯಲ್ಲಿ ವಾಹನಗಳ ಓಡಾಟ ಜಾಸ್ತಿ ಯಾಗಿರುತ್ತದೆ. ಎಂ. ಕೋಡಿ ಕಡೆಗೆ ಇದೇ ರಸ್ತೆ ಮೂಲಕ ಹೆಚ್ಚಿನ ವಾಹನಗಳು ಹೋಗುತ್ತವೆ. ಇದೆಲ್ಲ ಕಾರಣದಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಉದಯವಾಣಿ ಜು. 1ರಂದು ಪ್ರಕಟಿಸಿತ್ತು. ರವಿವಾರ ಚರ್ಚ್ ರಸ್ತೆಗೆ ಭೇಟಿ ನೀಡಿದಾಗ ಕಾರ್ಮಿಕರ ತಂಡ ಕೆಲಸ ನಿರ್ವಹಿಸುತ್ತಿದ್ದುದು ಕಂಡು ಬಂತು. ಸ್ಲಾಬ್ಗಳನ್ನು ಚರಂಡಿ ಮುಚ್ಚಿ ಮನೆಗಳ ಬಳಿಗೆ ವಾಹನ ಸರಾಗವಾಗಿ ಹೋಗುವಂತೆ ಮಾಡಲಾಗಿತ್ತು. ಈ ಮೂಲಕ ಜನರ ಬವಣೆ ನೀಗಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.