ಕುಡಾರಿಕೋ ಕೂಡು ರಸ್ತೆಯಲ್ಲಿ ಸಂಚಾರವೇ ಸರ್ಕಸ್!
Team Udayavani, Jun 5, 2019, 6:10 AM IST
ಬೆಳ್ಮಣ್: ಹಾಳೆಕಟ್ಟೆಯಿಂದ ಕಲ್ಯಾ ಮಾರ್ಗವಾಗಿ ನಿಟ್ಟೆ ಗ್ರಾಮವನ್ನು ಸಂಪರ್ಕಿಸುವ ಕುಡಾರಿಕೋ ಕೂಡುರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.
ಕಲ್ಯಾ ಗ್ರಾಮದಿಂದ ನಿಟ್ಟೆಯವರೆಗಿನ ಸುಮಾರು 5 ರಿಂದ 6 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದೆ. ಇದು ಡಾಮರು ರಸ್ತೆಯಾದರೂ ಜಲ್ಲಿ ಎದ್ದು ಬರೀ ಮಣ್ಣಿನ ರಸ್ತೆಯಂತಾಗಿದೆ. ಈ ರಸ್ತೆಯಲ್ಲಿ ಸಂಚಾರ ನಡೆಸುವ ಪ್ರತಿಯೊಂದು ವಾಹನ ಸವಾರರು ನಿತ್ಯ ಸಂಕಟ ಆನುಭವಿಸುತ್ತಿದ್ದಾರೆ.
ಪ್ರಾ.ಆ. ಕೇಂದ್ರಕ್ಕೆ ಹತ್ತಿರದ ರಸ್ತೆ
ಹಾಳೆಕಟ್ಟೆಯಿಂದ ಕಲ್ಯಾ ಮಾರ್ಗವಾಗಿ ನಿಟ್ಟೆಯ ಆರೋಗ್ಯ ಕೇಂದ್ರವನ್ನು ತಲುಪಲು ಬಹು ಹತ್ತಿರದ ದಾರಿಯಾದ ಪರಿಣಾಮ ಹೆಚ್ಚಿನ ಜನರು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ರಸ್ತೆ ಕೆಟ್ಟ ಕಾರಣದಿಂದಾಗಿ ಈ ಭಾಗದ ಜನ ಮಾತ್ರ ಇಲಾಖೆಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಎರಡು ಪಂಚಾಯತ್ ವ್ಯಾಪ್ತಿಯ ರಸ್ತೆ
ಕುಡಾರಿಕೋ ಕೂಡು ರಸ್ತೆ ಕಲ್ಯಾ ಮತ್ತು ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದಾಗಿಯೇ ರಸ್ತೆ ದುರಸ್ತಿಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಜನ ಹೇಳುತ್ತಾರೆ. ಗ್ರಾ.ಪಂ.ಗಳ ಗಡಿಯಂತಿರುವ ಭಾಗದಲ್ಲಿ ರಸ್ತೆಗೆ ಇಂದಿಗೂ ಡಾಮರು ಹಾಕಿಲ್ಲ. ಪ್ರಸ್ತುತ ಹಾಳೆಕಟ್ಟೆಯಿಂದ ನಿಟ್ಟೆಯವರೆಗೂ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೆ„ಕ್ ಸವಾರರಿಗೆ ಈ ರಸ್ತೆ ತೀರ ಅಪಾಯಕಾರಿ ರಸ್ತೆಯಾಗಿದೆ.
ಘನ ವಾಹನಗಳ ಆರ್ಭಟ
ರಸ್ತೆಯ ಈ ದುರವಸ್ಥೆಗೆ ಇಲ್ಲಿ ಸಂಚರಿಸುವ ಘನ ವಾಹನಗಳ ಆರ್ಭಟವೂ ಕಾರಣ ಎನ್ನಲಾಗುತ್ತಿದ್ದು ಈ ಬಗ್ಗೆಯೂ ಎಚ್ಚರಿಕೆ ನೀಡಬೇಕೆಂಬ ಬೇಡಿಕೆ ಇದೆ. ತೀರ ಹದಗೆಟ್ಟ ಈ ರಸ್ತೆಯ ಬಗ್ಗೆ ಜನಪ್ರತಿನಿ ಗಳು ಒಂದಿಷ್ಟೂ ಲಕ್ಷé ವಹಿಸಿಲ್ಲ. ಮುಂದಾದರೂ ಇದಕ್ಕೆ ಕಾಯಕಲ್ಪ ಒದಗಿಸಬೇಕೆನ್ನುವುದು ಜನಾಗ್ರಹವಾಗಿದೆ.
ವರ್ಷ ಕಳೆದರೂ ದುರಸ್ತಿಯಿಲ್ಲ
ಈ ಭಾಗಲ್ಲಿ ಘನವಾಹನಗಳು ನಿತ್ಯ ಸಂಚಾರ ನಡೆಸುತ್ತಿದ್ದು ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದೆ. ರಸ್ತೆ ಹದಗೆಟ್ಟು ಹಲವು ವರ್ಷಗಳು ಕಳೆದರೂ ಇಲ್ಲಿವರೆಗೂ ಡಾಮರು ಹಾಕಿಲ್ಲ.
– ಸುರೇಶ್, ಸ್ಥಳೀಯರು
ಅನುದಾನಕ್ಕೆ ಪ್ರಯತ್ನ
ಈ ರಸ್ತೆಯ ದುರವಸ್ಥೆಯ ಬಗ್ಗೆ ಮಾಹಿತಿ ಇದೆ. ಅನುದಾನದ ಕುರಿತು ಪ್ರಯತ್ನಿಸಲಾಗುವುದು.
-ಸುಮಿತ್ ಶೆಟ್ಟಿ, ಜಿ.ಪಂ. ಸದಸ್ಯ
ಪ್ರಯೋಜನವಾಗಿಲ್ಲ
ಅಗತ್ಯವಿರುವ ಈ ರಸ್ತೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆಯಲಾಗುತ್ತಿದೆ. ಸಾಕಷ್ಟು ಬಾರಿ ಸಂಬಂಧ ಪಟ್ಟ ಅ ಧಿಕಾರಿಗಳಿಗೆ ತಿಳಿಸಿದ್ದರು ಪ್ರಯೋಜನವಾಗಿಲ್ಲ.
-ಪ್ರಭಾಕರ, ಗ್ರಾಮಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.