ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ: ಬಳಕೆಯಾಗದ ಅನುದಾನ-ಪ್ರಧಾನ


Team Udayavani, Oct 6, 2017, 7:30 AM IST

kannadakke-shastreeya.jpg

ಉಡುಪಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಕೂಗು ಎಲ್ಲೆಲ್ಲೂ ಕೇಳುತ್ತಿದೆ. ಆದರೆ ಇದರಿಂದ ಇದುವರೆಗೆ ಆದ ಲಾಭವಾದರೂ ಏನು ಎಂದರೆ ನಗು ಬರುತ್ತದೆ. “ಶಾಸ್ತ್ರೀಯ ಭಾಷೆ’ ಎಂದು ಹೆಸರಿಡಬೇಕೋ? ಬೇರೆ ಹೆಸರು ಇಡ
ಬೇಕೋ ಎಂಬ ಕುರಿತೇ ದೊಡ್ಡ ಚರ್ಚೆ ನಡೆಯಿತು. ಬಂದ 2 ಕೋ. ರೂ. ಅನುದಾನ ಬಳೆಕೆಯಾಗದೆ ವಾಪಸು ಹೋಗಿದೆ. ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕು ಎಂದು ಸ್ಕ್ಯಾನಿಂಗ್‌ ಯಂತ್ರವನ್ನು 70 ಲ.ರೂ. ವೆಚ್ಚದಲ್ಲಿ ತಂದರು. ಯಾವ ಸ್ಕ್ಯಾನಿಂಗ್‌ ಕೂಡ ನಡೆಯಲಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿ ರಾಮಕೃಷ್ಣ ಮತ್ತು ಹಿರಿಯ ಭಾಷಾ ತಜ್ಞ, ಭಾಷಾಂತರ ತಜ್ಞ ಡಾ|ಪ್ರಧಾನ ಗುರುದತ್‌ ಅವರು ಜತೆಯಾಗಿ ಹೋಗಿ ಯಾವ ಯಾವ ಹಂತಗಳಲ್ಲಿ ಏನೇನು ಕೆಲಸ ಮಾಡಬೇಕು? ಅನುದಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಅಧ್ಯಯನ ನಡೆಸಿದ್ದರು. ಈಗ ಹಣವನ್ನು ಮೈಸೂರು ವಿ.ವಿ.ಗೆ ಕೊಡಬೇಕೋ? ಬೆಂಗಳೂರು ವಿ.ವಿ.ಗೆ ಕೊಡಬೇಕೋ ಎಂಬಿತ್ಯಾದಿ ರಾಜಕೀಯ ಜಿಜ್ಞಾಸೆ ನಡೆಯುತ್ತಿದೆ. 

– ಮಟಪಾಡಿ ಕುಮಾರಸ್ವಾಮಿ

ಭಾಷಾಂತರ ಅಕಾಡೆಮಿ, ಬಳಿಕ ವಿಕಾಸಗೊಂಡ ಕುವೆಂಪು ಭಾಷಾ ಭಾರತೀ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ  ಡಾ| ಪ್ರಧಾನ ಗುರುದತ್‌ ಅವರು ಉಡುಪಿಗೆ ಆಗಮಿಸಿದ ಸಂದರ್ಭ “ಉದಯವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು  ಹಂಚಿಕೊಂಡರು.

ಇಂಗ್ಲಿಷ್‌ಗೆ ಸೇರಿಕೊಂಡ ಇಡ್ಲಿ, ದೋಸೆ…
ಪ್ರಪಂಚದ ಇತರ ಪ್ರಧಾನ ಭಾಷಿಕರಾದ ಚೀನಿಯರು ಅಮೆರಿಕದಲ್ಲಿ ನೆಲೆಸಿದರೂ ಇಂಗ್ಲಿಷ್‌ ಮೂಲಕವೇ ಕಾರ್ಯವಿಸ್ತಾರ ಮಾಡುತ್ತಿರುವ ಕಾರಣ ಸದ್ಯದಲ್ಲಿ ಇಂಗ್ಲಿಷ್‌ ಪ್ರಾಬಲ್ಯ ಅಬಾಧಿತವಾಗಿ ಮುಂದು ವರಿಯುತ್ತದೆ. ಫ್ರಾನ್ಸ್‌ನಲ್ಲಿ ಇಂಗ್ಲಿಷ್‌ಗೆ ಸ್ಥಾನ ಅಷ್ಟಕ್ಕಷ್ಟೆ ಇತ್ತು. ಈಗ ಬದಲಾಗಿದೆ. ಇಂಗ್ಲಿಷ್‌ ಈ ಮಟ್ಟದಲ್ಲಿ ಬೆಳೆಯಲು ಕಾರಣವೆಂದರೆ ಇಂಗ್ಲಿಷ್‌ನ ಈಗಿರುವ ಶೇ. 83 ಶಬ್ದಗಳು ಬೇರೆ ಭಾಷೆಗಳವು, ಶೇ. 17 ಮಾತ್ರ ಮೂಲದವು. ಕನ್ನಡದಿಂದಲೂ ಸುಮಾರು 2,000 ಶಬ್ದಗಳು ಇಂಗ್ಲಿಷ್‌ನಲ್ಲಿ ಸೇರಿಕೊಂಡಿವೆ. ಇಡ್ಲಿ, ದೋಸೆ, ಚಟ್ನಿಗಳೂ ಸೇರಿಕೊಂಡಿವೆ. ಸುಮಾರು 80 ವರ್ಷಗಳ ಹಿಂದೆ ದಿ  ರಾಯಲ್‌ ಸೊಸೈಟಿ ಆಫ್ ಗ್ರೇಟ್‌ ಬ್ರಿಟನ್‌ ಈ ಕುರಿತು ನಿಯಮಾವಳಿಗಳನ್ನು ಹಾಕಿಕೊಟ್ಟಿತು. ಆದರೆ ಜಗತ್ತಿನ ಇತರ ಯಾವುದೇ ದೇಶಗಳೂ ತಮ್ಮ ಭಾಷಾ ಉನ್ನತಿಗೆ ಈ ತೆರನಾಗಿ ಪ್ರಯತ್ನಿಸಲಿಲ್ಲ. 

ನಿಂತ ಯೋಜನೆ
1970ರ ದಶಕದಲ್ಲಿ “ದಿ ಪ್ರೊಡಕ್ಷನ್‌ ಆಫ್ ಟೆಕ್ಸ್ಟ್ ಬುಕ್ಸ್‌ ಇನ್‌ ರೀಜನಲ್‌ ಲ್ಯಾಂಗ್ವೇಜಸ್‌’ ಯೋಜನೆಯನ್ನು ಕೇಂದ್ರ ಸರಕಾರ ಹಾಕಿಕೊಂಡಿತು. ಸುಮಾರು 10 ವರ್ಷ ಪ್ರತಿ ಭಾಷೆಗೆ  2 ಕೋ.ರೂ. ಅನುದಾನ ದೊರಕಿತ್ತು. ಅನಂತರ ಯೋಜನೆಯೇ ನಿಂತು ಹೋಯಿತು. 

ಭಾಷಾಂತರ: ನಿರೀಕ್ಷಿತವಾಗಿಲ್ಲ
ಭಾಷಾಂತರ ಅಕಾಡೆಮಿ, ಬಳಿಕ ವಿಕಾಸಗೊಂಡ ಕುವೆಂಪು ಭಾಷಾ ಭಾರತೀ ಪ್ರಾಧಿಕಾರದಿಂದ ಬಹಳಷ್ಟು ಕೆಲಸಗಳು ನಡೆಯಬೇಕಿತ್ತಾದರೂ ಅದೂ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಕನ್ನಡದಿಂದ ಇಂಗ್ಲಿಷ್‌ ಅಥವ ಇನ್ನಿತರ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾಗಬೇಕು. ಇಂಗ್ಲಿಷ್‌ನಲ್ಲಿ ಸ್ವತಂತ್ರ ಕೃತಿಗಳು ಹೇಳಿ ಕೊಳ್ಳುವಂಥದ್ದಿಲ್ಲವಾದರೂ ಇಂಗ್ಲಿಷ್‌ ಈ ಮಟ್ಟದಲ್ಲಿ ಬೆಳೆಯಲು ಇದುವೇ ಕಾರಣ. ಕನ್ನಡದ ಸಾಹಿತಿಗಳ ಕೃತಿಗಳು ನಿರೀಕ್ಷಿತ ಮಟ್ಟದಲ್ಲಿ ಭಾಷಾಂತರಗೊಂಡಿಲ್ಲ. ರಾಜಕೀಯಪ್ರೇರಿತವಾಗಿ, ಅವರವರಿಗೆ ಬೇಕಾದಂತಹವರ ಕೃತಿಗಳು ಮಾತ್ರ ಭಾಷಾಂತರಗೊಂಡಿವೆ. ನಮ್ಮ ಎಷ್ಟೋ ಗ್ರಂಥಗಳು ಕೆಟ್ಟ ಭಾಷಾಂತರದಿಂದ ತಿರಸ್ಕೃತ ಗೊಂಡಿವೆ. ಅಮೆರಿಕದ ಸ್ಟಾನ್‌ಫ‌ರ್ಡ್‌ ವಿ.ವಿ. ಕುಮಾರವ್ಯಾಸನ ಭಾರತವನ್ನು ಭಾಷಾಂತರಿಸುತ್ತಿದೆ. ವೀರಪ್ಪ ಮೊಲಿಯವರ ರಾಮಾಯಣ ಮಹಾನ್ವೇಷಣಂ, ಎಸ್‌.ಎಲ್‌. ಭೈರಪ್ಪನವರ ಕೃತಿಗಳು ಹಿಂದಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ಕ್ರೈಸ್ತರ ಉದ್ದೇಶವೇ ಧರ್ಮಪ್ರಸಾರವಾದ ಕಾರಣ ಬೈಬಲ್‌ನಷ್ಟು ಭಾಷಾಂತರ ಇತರ ಧರ್ಮಗ್ರಂಥಗಳು ಆಗಲಿಲ್ಲ.

ವೇದ: ಶ್ಲಾಘನೆ
ವೇದದ ದೊಡ್ಡತನವನ್ನು  ವೇದವನ್ನು ಭಾಷಾಂತರಿಸಿದ ಮ್ಯಾಕ್ಸ್‌ ಮುಲ್ಲರ್‌ ಶ್ಲಾ ಸಿದ್ದಾದರೂ “ಭಾರತೀಯ ಸಂಸ್ಕೃತಿ, ಸಾಹಿತ್ಯದ ಪ್ರಾಚೀನತೆಯನ್ನು    ಉಲ್ಲೇಖೀ ಸಬಾರದು, ಉಲ್ಲೇಖೀಸಿದರೆ ಅದು ಬೈಬಲ್‌ಗಿಂತ ಮೊದಲಿನದ್ದು ಎಂದು ಗೊತ್ತಾಗುತ್ತದೆ’ ಎಂದು ಬಂಧುವೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದನ್ನು ತೆಲುಗಿನ ಪತ್ರಕರ್ತರೊಬ್ಬರು ಪುಸ್ತಕದಲ್ಲಿ ಉಲ್ಲೇ ಖೀಸಿದ್ದಾರೆ.

ಟಾಪ್ ನ್ಯೂಸ್

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

Manipal: ಮೆಸ್ಕಾಂ ಆವರಣದೊಳಗೆ ವ್ಯಕ್ತಿಯ ಶವ ಪತ್ತೆ

Manipal: ಮೆಸ್ಕಾಂ ಆವರಣದೊಳಗೆ ವ್ಯಕ್ತಿಯ ಶವ ಪತ್ತೆ

13

Malpe: ನಿರ್ವಹಣೆ ಇಲ್ಲದೆ ಕಮರಿದ ಮಲ್ಪೆ ಸೀವಾಕ್‌ ಉದ್ಯಾನ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Deepvali-MNG

Deepavali Dhamakha: ಓದುಗರ ಸಂತೃಪ್ತಿಯಿಂದ ಸಾರ್ಥಕ್ಯದ ಭಾವ: ಡಾ.ಸಂಧ್ಯಾ ಪೈ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.