ಶುಚಿಯಾಗುತ್ತಿದೆ ಕೋಡಿ ಕಡಲತಡಿ

Team Udayavani, Mar 30, 2019, 6:30 AM IST

kodi-kadalatadi

ಕುಂದಾಪುರ: ಕಸದ ರಾಶಿಯಿಂದ ತುಂಬಿ ತುಳುಕುತ್ತಿದ್ದ ಕೋಡಿ ಕಡಲತಡಿಯನ್ನು ಸ್ವತ್ಛ ಕುಂದಾಪುರ ಪರಿಕಲ್ಪನೆಯಲ್ಲಿ ತಂಡವೊಂದು ಶುಚಿಗೊಳಿಸುತ್ತಿದೆ. ಈ ಮೂಲಕ ಈಗಾಗಲೇ ಒಂದಷ್ಟು ಪ್ರವಾಸಿಗರನ್ನು ಸೆಳೆಯುತ್ತಿರುವ ಕೋಡಿ ಇನ್ನಷ್ಟು ಮನಮೋಹಯಕವಾಗಿ ಕಂಡು ಸಮುದ್ರದಲೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರದೆಡೆಗೆ ಬರುವಂತೆ ಮಾಡಿದೆ.

ಸ್ವತ್ಛ ಕುಂದಾಪುರ
ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಆರಂಭವಾದದ್ದು ಕೆಲವು ಯುವಕರ ಕನಸಾಗಿ. ಒಂದಷ್ಟು ಯುವಕರು ಪ್ಲಾಸ್ಟಿಕ್‌, ಬಾಟಲಿ ಮುಂತಾದ ಕರಗಿಹೋಗದ ಕಸದ ರಾಶಿಗಳನ್ನ ಮಣ್ಣಿನಿಂದ ಬೇರ್ಪಡಿಸಲು ಯೋಚಿಸಿದರು. ಇದಕ್ಕೆ ಕುಂದಾಪುರದ ಹಲವು ಮಿಡಿಯುವ ಹೃದಯಗಳು ಜತೆಗೂಡಿದವು. ಭರತ್‌ ಬಂಗೇರ ಅವರ ನೇತೃತ್ವದಲ್ಲಿ ಆರಂಭವಾದ ಅಭಿಯಾನದಲ್ಲಿ ಹಲವರು ಸೇರಿ, ಅಮಲಾ ಸ್ವತ್ಛಭಾರತ ಅಭಿಯಾನದವರೂ ಜತೆಯಾದರು. ಒಂದು ಅಭಿಯಾನದಂತೆ ಶುರುವಾಗಿ ಎಫ್ಎಸ್‌ಎಲ್‌ನ ಸ್ವಯಂ ಸೇವಕರು, ಹಲವಾರು ಕಾಲೇಜು ವಿದ್ಯಾರ್ಥಿಗಳು, ಬೇರೆ ಬೇರೆ ಸಂಘಟನೆಯ ರೂವಾರಿಗಳು, ಸಮಾನಮನಸ್ಕ ನಾಗರಿಕರು ಸೇರಿದರು.

ಹೇಗೆ ಕಾರ್ಯಾಚರಣೆ
ಪ್ರತಿ ರವಿವಾರ ಸಂಜೆ ಒಂದಷ್ಟು ಒಳ್ಳೆಯ ಕೆಲಸ ಮಾಡಲು ಮುಂದಾಗಿವೆ. ಇಂದಿನ ಯುವಕರಿಗೆ ಸಾಮಾಜಿಕ ಪ್ರಜ್ಞೆ ಇಲ್ಲ ಅನ್ನುವುದು ಸುಳ್ಳು ಮಾಡಿ ಸೂರ್ಯಾಸ್ತದ ಆಹ್ಲಾದದ ವೇಳೆ ಹಿತಕಾರಿ ಕೆಲಸದ ಮೂಲಕ ಮನಸ್ಸಿಗೆ ನೆಮ್ಮದಿ ಹರುಷ ಎರಡೂ à ಕಾರ್ಯಕ್ರಮದಲ್ಲಿರುತ್ತದೆ. ಎಲ್ಲರ ಗುರಿಯೊಂದೇ ಕುಂದಾಪುರದ ಸ್ವತ್ಛತೆ. ಹೆಚ್ಚಾಗಿ ಸಾಯಂಕಾಲ 4-4.30ಗೆ ರವಿವಾರ ಶುರುವಾಗುವ ಈ ಅಭಿಯಾನಕ್ಕೆ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಫೇಸ್‌ ಬುಕ್‌ ಪೇಜ್‌ನಲ್ಲಿ ವ್ಯಾಪಕ ಪ್ರಚಾರ ನೀಡಲಾಗುತ್ತದೆ. ಎಲ್ಲಿ ಎಷ್ಟೊತ್ತಿಗೆ ಸೇರುವುದು ಎಂದು ಫೇಸ್‌ಬುಕ್‌ ಹಾಗೂ ವಾಟ್ಸಪ್‌ನಲ್ಲಿ ಸೂಚಿಸಲಾಗುತ್ತದೆ.

ನಗರಾಡಳಿತ ಸಹಕಾರ
ಕುಂದಾಪುರದ ಹಲವು ಕಡೆ, ಸಮುದ್ರ ಕಿನಾರೆಗಳೇ ಮುಖ್ಯವಾಗಿಟ್ಟುಕೊಂಡು ಮಾಡಿದ ಹಲವು ವಾರಗಳ ಈ ಅಭಿಯಾನಕ್ಕೆ ಸಾಥ್‌ ಕೊಟ್ಟವರು ಕುಂದಾಪುರ ಪುರಸಭೆ ಹಾಗೂ ಹಲವು ಪಂಚಾಯತ್‌ಗಳು. ದಿನಕ್ಕೆ ಸೇರಿರುವ ಸ್ವಯಂಸೇವಕರ ಅನುಗುಣವಾಗಿ 300-800 ಕೆಜಿಯಷ್ಟು ಕಸಗಳನ್ನ ಒಟ್ಟುಮಾಡುತ್ತಾರೆ. ಪ್ಲಾಸ್ಟಿಕ್‌ ಕಸ, ಬಾಟಲಿಗಳನ್ನ ಮಾತ್ರ ಸ್ವಯಂಸೇವಕರು ಎತ್ತುತ್ತಾರೆ. ತಾನೇ ತಾನಾಗಿ ಕರಗಿಹೋಗುವ ಕಸಗಳನ್ನ ಎತ್ತುವುದಿಲ್ಲ. ಇವೆರಡೂ ಕಸದ ರಾಶಿಗಳನ್ನ ಬೇರೆ ಬೇರೆಯಾಗಿ ಹೆಕ್ಕಿ ಬೇರೆ ಬೇರೆ ಚೀಲಗಳಲ್ಲಿ ತುಂಬಿ ಪಂಚಾಯತ್‌ ಮತ್ತು ಪುರಸಭೆಗೆ ನೀಡಲಾಗುತ್ತದೆ.

ನೂರಿನ್ನೂರು ಮೀ.ನಲ್ಲಿ 15-20 ಗೋಣಿ ಚೀಲದಷ್ಟು ಜಮೆಯಾಗುತ್ತಿದ್ದ ಮದ್ಯದ ಬಾಟಲಿಗಳ ರಾಶಿ, ಪ್ಲಾಸ್ಟಿಕ್‌ ಗ್ಲಾಸುಗಳನ್ನ ನೋಡಿದರೆ, ನಮ್ಮ ಸಮುದ್ರ ಕಿನಾರೆಯಲ್ಲಿ ಏನು ನಡೆಯುತ್ತಿದೆ ಅನ್ನೋ ಅನುಮಾನ ಬರುತ್ತದೆ ಎನ್ನುತ್ತಾರೆ ಭಾಗವಹಿಸಿದ ಸ್ವಯಂ ಸೇವಕರು. ಸಮುದ್ರ ಕಿನಾರೆಗಳಲ್ಲಿ ಪ್ಲಾಸ್ಟಿಕ್‌ ತುಂಬಾ ಅಪಾಯಕಾರಿ, ಅವು ಬಿಸಿಲಿಗೆ ಉಪ್ಪುನೀರಿನ ಹವೆಗೆ ತುಂಬಾ ಮೃದುವಾಗಿ ಬಿಡುತ್ತವೆ, ಎತ್ತಲು ಹೋದಾಗ ಚೂರುಚೂರಾಗುತ್ತವೆ.

ಸಾಮಾನ್ಯಜ್ಞಾನವಿಲ್ಲದ ಜನ ತಮ್ಮ ಕುಡಿತದ ಚಟಕ್ಕೆ ಕುಂದಾಪುರದ ಸಮುದ್ರ ಕಿನಾರೆಗಳನ್ನ ಗುರಿಯಾಗಿಸುವುದು ಖೇದಕರ. ಮನೆಯ ಕಸದ ರಾಶಿಗಳನ್ನು ಸಮುದ್ರ ಕಿನಾರೆಗಳಲ್ಲಿ ಹಾಕುವುದು ಕೂಡಾ ಕಂಡುಬಂದಿದೆ. ಸಮುದ್ರ ಕಿನಾರದಿಂದ ತೆಗೆಯುವ ಕೆಲಸಕ್ಕೆ ಸ್ವಯಂಸೇವಕರ ಉತ್ಸಾಹ ಕಾರಣವಾದರೆ, ಅದಕ್ಕೆ ತಣ್ಣೀರು ಎರಚುವಂತೆ ಅದೇ ಜಾಗದಲ್ಲಿ ಮತ್ತೆರಡು ದಿನಗಳಲ್ಲಿ ಬಾಟಲಿ ರಾಶಿಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಉತ್ತರ ಕುಂದಾಪುರ ಪರಿಸರದ ಜನರೇ ನೀಡಬೇಕಿದೆ.

ಕುಂದಾಪುರದ ಸ್ವತ್ಛತೆ ನಮ್ಮ ಪಾಲಿನದಲ್ಲವೇ?
ನಮ್ಮೂರು ನಮ್ಮ ಹೆಮ್ಮೆ, ಸ್ವತ್ಛ ಸಮುದ್ರ ಕಿನಾರೆಗಳು ನಮಗೇ ಸುಖ, ನಮ್ಮೂರಿನ ಸ್ವಚ್ಚತೆ ನಮ್ಮೆಲ್ಲರ ಕರ್ತವ್ಯ. ಇವೇ ಕೆಲವು ಅನಿಸಿಕೆಗಳಿಗೆ ಉತ್ತರ ಸ್ವತ್ಛ ಕುಂದಾಪುರ. ನಮ್ಮ ಸಮುದ್ರ ಕಿನಾರೆಗಳು ನಮ್ಮ ಹೆಮ್ಮೆ ಆಗಬೇಕೇ ವಿನಃ ಕಸದ ರಾಶಿಗಳಲ್ಲ. ಕುಡಿತ, ಅನೈತಿಕ ಚಟುವಟಿಕೆಗಳು ಸಮುದ್ರ ಕಿನಾರೆಗಳಲ್ಲಿ ನಡೆಯದಂತೆ ತಡೆಯುವುದು ಆಡಳಿತ ಹಾಗೂ ಪರಿಸರದ ಜನರ ಕರ್ತವ್ಯವಾಗಬೇಕು. ಪ್ರತಿ ಮನೆಯವರೂ ಈ ಸ್ವತ್ಛ ಕುಂದಾಪುರ ಅಭಿಯಾನದಲ್ಲಿ ಭಾಗಿಯಾದರೆ ಈ ಅಭಿಯಾನ ಯಶಸ್ಸು ಕಾಣುತ್ತದೆ. ನಮ್ಮ ಕುಂದಾಪುರ ಸ್ವತ್ಛ ಭಾರತಕ್ಕೆ ಮಾದರಿಯಾದೀತು.
-ಡಾ| ರಶ್ಮಿ ಕುಂದಾಪುರ, ವೈದ್ಯರು ಹಾಗೂ ಸ್ವತ್ಛ ಕುಂದಾಪುರ ತಂಡದ ಸ್ವಯಂಸೇವಕರು

ಟಾಪ್ ನ್ಯೂಸ್

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

1-wewwewq

Tamil actor ವಿಶಾಲ್‌ಗೆ ಅನಾರೋಗ್ಯ?: ಅಭಿಮಾನಿಗಳಿಗೆ ಆತಂಕ

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.