ಬಸ್ಸು ನಿರ್ವಾಹಕನಿಂದಲೇ ಪ್ರಯಾಣಿಕರಿಗೆ ಸ್ವಚ್ಛತೆ ಪಾಠ
ಸ್ವಚ್ಛತೆಗೆ ವಿನೂತನ ಪರಿಕಲ್ಪನೆ ; ಬಸ್ ಒಳಗೆ ಕಸದ ಡಬ್ಬಿ ಅಳವಡಿಕೆ
Team Udayavani, Jan 23, 2020, 6:12 AM IST
ಉಡುಪಿ: ಸ್ವಚ್ಛ ಭಾರತ ಅಭಿಯಾನಕ್ಕೆ ಇಂದು ಗರಿಷ್ಠ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಘ ಸಂಸ್ಥೆಗಳು, ಆಡಳಿತ ನೈರ್ಮಲ್ಯದ ಜಾಗೃತಿಯನ್ನು ಜನರಿಗೆ ನೀಡುತ್ತ ಬಂದಿದ್ದಾರೆ. ಇದಷ್ಟೇ ಅಲ್ಲ ಸ್ವಚ್ಛತೆ ಬಗ್ಗೆ ಇಲ್ಲೊಬ್ಬರು ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರೂ ಆಂದೋಲನದ ಭಾಗವಾಗಬೇಕು ಎಂದು ಸಂದೇಶ ಸಾರಿದ್ದಾರೆ.
ಇವರು ಉಡುಪಿಯಿಂದ ಧರ್ಮಸ್ಥಳಕ್ಕೆ ಸಂಚರಿಸುವ ವಿಶಾಲ ಎಕ್ಸ್‌ಪ್ರೆಸ್ ಬಸ್‌ನ ನಿರ್ವಾಹಕ ದೇವದಾಸ್ ಸಾಲ್ಯಾನ್. ಬಸ್ ಒಳಗೆ ಕಸದ ಡಬ್ಬಿ ಅಳವಡಿಸಿ ಸ್ವಚ್ಛತೆಗೆ ಗಮನ ಹರಿಸಿದ್ದಾರೆ.
ಸ್ವಚ್ಛತೆಗೆ ಆದ್ಯತೆ
ಬಸ್‌ನಲ್ಲೂ ಕಸದ ನಿರ್ವಹಣೆ ಆಗಬೇಕು, ಎಸೆಯಬಾರದು ಎಂಬ ಉದ್ದೇಶದಿಂದ ವಿಭಿನ್ನ ಮಾದರಿಯ ಕಸದ ತೊಟ್ಟಿಯನ್ನು ಬಸ್‌ನ ಮುಂಭಾಗ, ಹಿಂಭಾಗದ ಬಾಗಿಲಿನ ಪಕ್ಕದಲ್ಲಿ ಅಳವಡಿಸಿದ್ದಾರೆ. 2 ವರ್ಷಗಳ ಹಿಂದೆ ಹಳೆಯ ಪೈಂಟ್ ಡಬ್ಬಕ್ಕೆ ಸ್ಟಿಕ್ಕರ್ ಹಾಕಿ ಬಸ್‌ನಲ್ಲಿ ಇಡಲಾಗಿತ್ತು. ಇದಕ್ಕೆ ಸ್ಪಂದನೆ ಬಂದ ಹಿನ್ನೆಲೆಯಲ್ಲಿ ಈ ಕಸದ ಡಬ್ಬಿಬೆಂಗಳೂರಿನಿಂದ ತರಿಸ ಲಾಗಿದೆ. ಸಂಗ್ರಹವಾದ ಕಸವನ್ನು ನಗರಸಭೆಯ ಕಸದಬುಟ್ಟಿಗೆ ಹಾಕಲಾಗುತ್ತದೆ.
ಪ್ರಯಾಣಿಕರು ಸೂಚನ ಫಲಕ ನೋಡಿ ಕಸವನ್ನು ಬಸ್‌ನ ಕಿಟಕಿಯಿಂದ ಹೊರಹಾಕುವುದು ಕಡಿಮೆಯಾಗಿದೆ ಎನ್ನುತ್ತಾರೆ ದೇವದಾಸ್ ಅವರು.
ಪ್ರಯಾಣಿಕರ ಮೆಚ್ಚುಗೆ ದೂರದ ಕಡೆಗಳಿಗೆ ತೆರಳುವ ಬಸ್‌ಗಳಲ್ಲಿ ಕಸದ ಬುಟ್ಟಿ ಅಗತ್ಯ ಇರುವುದನ್ನು ತಿಳಿದುಕೊಂಡಿದ್ದೆ. ಪೈಂಟ್ ಡಬ್ಬದಿಂದ ಆರಂಭಿಸಿ ಈಗ ಹಿಂಬದಿ ಮತ್ತು ಮುಂಬದಿಯ ಬಾಗಿಲಿನ ಮೇಲೆ ಈ ಕಸದ ಡಬ್ಬಿಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಬಸ್‌ಗಳಲ್ಲೂ ಇದೆ ಮಾದರಿ ಜಾರಿಯಾದರೆ ಮತ್ತಷ್ಟು ಸ್ವಚ್ಛ ಜಾಗೃತಿಯಾಗಲು ಸಾಧ್ಯವಿದೆ.
-ದೇವದಾಸ್ ಸಾಲ್ಯಾನ್,
ಬಸ್ಸು ನಿರ್ವಾಹಕರು
ಪ್ರಯಾಣಿಕರ ಮೆಚ್ಚುಗೆ
ದೂರದ ಕಡೆಗಳಿಗೆ ತೆರಳುವ ಬಸ್‌ಗಳಲ್ಲಿ ಕಸದ ಬುಟ್ಟಿ ಅಗತ್ಯ ಇರುವುದನ್ನು ತಿಳಿದುಕೊಂಡಿದ್ದೆ. ಪೈಂಟ್ ಡಬ್ಬದಿಂದ ಆರಂಭಿಸಿ ಈಗ ಹಿಂಬದಿ ಮತ್ತು ಮುಂಬದಿಯ ಬಾಗಿಲಿನ ಮೇಲೆ ಈ ಕಸದ ಡಬ್ಬಿಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಬಸ್‌ಗಳಲ್ಲೂ ಇದೆ ಮಾದರಿ ಜಾರಿಯಾದರೆ ಮತ್ತಷ್ಟು ಸ್ವಚ್ಛತೆ ಜಾಗೃತಿಯಾಗಲು ಸಾಧ್ಯವಿದೆ.
-ದೇವದಾಸ್ ಸಾಲ್ಯಾನ್,
ಬಸ್ಸು ನಿರ್ವಾಹಕರು
ಸ್ವಚ್ಛತೆಯ ಜಾಗೃತಿ
ಪ್ರಯಾಣಿಕರಿಗೆ ಸ್ವಚ್ಛತೆ ಹಾಗೂ ಡೆಸ್ಟ್ ಬಿನ್ ಬಳಸುವ ಸಲುವಾಗಿಯೇ ಘೋಷಣೆ (ಅನೌಸ್Õಮೆಂಟ್)ಕೂಡ ದೇವದಾಸ್ ಅವರೇ ಸ್ವತಃ ರೆಕಾರ್ಡ್ ಮಾಡಿದ್ದಾರೆ! ಪ್ರಯಾಣದ ಮಧ್ಯೆ ಈ ಘೋಷಣೆಯನ್ನು ಕೇಳಿಸಿ ಜಾಗೃತಿ ಮೂಡಿಸಲಾಗುತ್ತದೆ. ಇಷ್ಟೇ ಅಲ್ಲದೆ ಸೀಟ್‌ಗಳ ಹಿಂಬದಿಯಲ್ಲಿ ಸ್ವಚ್ಛತೆಯ ಸೂಚನ ಫಲಕ ಮತ್ತು ಚಾಲಕರ ಹಿಂದಿನ ಸೀಟ್‌ನ ಮೇಲೆ ದೊಡ್ಡ ಸೂಚಕ ಫಲಕ ಆಳವಡಿಸಲಾಗಿದೆ. ಈ ವಿನೂತನ ಪ್ರಯೋಗದ ಪೋಸ್ಟರ್‌ಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.