ವಂಡ್ಸೆ: ಸ್ವಚ್ಛತಾ ಹಿ ಸೇವಾ ಜನಾಂದೋಲನ ಸಮಾರೋಪ
Team Udayavani, Oct 3, 2018, 1:50 AM IST
ಕೊಲ್ಲೂರು: ಸ್ವಚ್ಛ ಭಾರತ್ ಮಿಷನ್, ಜಿ.ಪಂ. ಉಡುಪಿ, ಗ್ರಾ.ಪಂ. ವಂಡ್ಸೆ ಇವುಗಳ ನೇತೃತ್ವದಲ್ಲಿ ಅ. 2ರಂದು ಗಾಂಧಿ ಜಯಂತಿ ಪ್ರಯುಕ್ತ ಸ್ವತ್ಛತಾ ಹಿ ಸೇವಾ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ, ಸ್ವಚ್ಛತಾ ಅರಿವು ಜನಜಾಗೃತಿ ಜಾಥಾ, ಗ್ರಾಮ ಸ್ವತ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮ ಸಭೆ ಕೂಡ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸ್ವತ್ಛತೆಯೇ ಸೇವೆ ಎಂದು ಪ್ರತಿಯೊಬ್ಬರೂ ಭಾವಿಸಬೇಕಾಗಿದೆ. ಈಗಾಗಲೇ ಸ್ವತ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಎಸ್.ಎಲ್.ಆರ್.ಎಂ. ಮೂಲಕ ವಂಡ್ಸೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಗೊಂಡಿದೆ. ಇದು ನಿರಂತರವಾಗಲಿ ಎಂದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ವಿ.ಕೆ. ಶಿವರಾಮ ಶೆಟ್ಟಿ, ಸಂಜೀವ ಪೂಜಾರಿ, ಶ್ರೀನಿವಾಸ ಪೂಜಾರಿ, ಗ್ರಾ.ಪಂ. ಸದಸ್ಯರಾದ ಗುಂಡು ಪೂಜಾರಿ, ಉದಯ ನಾಯ್ಕ, ಸಿಂಗಾರಿ, ಲಕ್ಷ್ಮೀ, ಮಲ್ಲಿಕಾ, ಮಾತೃಭೂಮಿ ಯುವ ಸಂಘಟನೆ ಆತ್ರಾಡಿ ಅಧ್ಯಕ್ಷ ರಮೇಶ ಪೂಜಾರಿ ಬಳಿಹಿತ್ಲು, ಕಾರ್ಯದರ್ಶಿ ದಿನೇಶ ಬಳಗೇರಿ, ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ ಇದರ ಅಧ್ಯಕ್ಷ ಮಹೇಶ ಗಾಣಿಗ ಅಬ್ಬಿ, ಮೇಲ್‌ಪೇಟೆ ಫ್ರೆಂಡ್ಸ್‌ನ ಗುರುರಾಜ್, ಯುವಶಕ್ತಿ ಮಿತ್ರ ಮಂಡಳಿ ಶಾರ್ಕೆ ಅಧ್ಯಕ್ಷ ಸತೀಶ ಆರ್. ಚಂದನ್, ವಿಜಯ ಮಕ್ಕಳ ಕೂಟದ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ, ವಂಡ್ಸೆ ಸ.ಮಾ.ಹಿ.ಪ್ರಾ. ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜುನಾಥ ಗಾಣಿಗ, ತೆಂಕೊಡಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ ಶಾರ್ಕೆ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಎಸ್.ಎಲ್.ಆರ್.ಎಂ. ಮೇಲ್ವಿಚಾರಕಿ ವಿಜಯಲಕ್ಷ್ಮೀ, ಗೋವರ್ಧನ ಜೋಗಿ, ಅನುಸೂಯ, ಅಂಬಿಕಾ, ವಂಡ್ಸೆ ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ, ಪಿಡಿಒ ರೂಪ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ಶಿಕ್ಷಕ ಗಣೇಶ ದೇವಾಡಿಗ, ಆರೋಗ್ಯ ಸಹಾಯಕಿ ಪಾರ್ವತಿ ಪಟಗಾರ್, ಮಹಮ್ಮದ್ ಫಾರೂಕ್, ಸಂಜೀವ ಉಪಸ್ಥಿತರಿದ್ದರು.
ವಂಡ್ಸೆ ಪೇಟೆಯಲ್ಲಿ ಸ್ವಚ್ಛತೆಯೇ ಸೇವೆ ಧ್ಯೇಯದಡಿ ಜಾಥಾ, ಸ್ವಚ್ಛತಾ ಕಾರ್ಯ ನಡೆಯಿತು. ಮೇಲ್‌ಪೇಟೆ ಫ್ರೆಂಡ್ಸ್, ಮಾತೃಭೂಮಿ ಯುವ ಸಂಘಟನೆ, ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ, ಯುವಶಕ್ತಿ ಮಿತ್ರ ಮಂಡಳಿ ಶಾರ್ಕೆ ಇದರ ಸದಸ್ಯರು, ಗ್ರಾ.ಪಂ. ಸಿಬಂದಿ, ಎಸ್.ಎಲ್.ಆರ್.ಎಂ. ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.