![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
![Manipal: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ: ಫೆ. 22-26: “ಶಿವಪಾಡಿ ವೈಭವ’](https://www.udayavani.com/wp-content/uploads/2025/02/sha-415x304.jpg)
Team Udayavani, Sep 28, 2021, 3:03 PM IST
ಕಾಪು : ಸೇವೆ ಮತ್ತು ಸಮರ್ಪಣೆ ಅಭಿಯಾನದಡಿಯಲ್ಲಿ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಪುಮಂಡಲ ಯುವಮೋರ್ಚ ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮತ್ತು ತಂಡದಿಂದ ನಡೆದ ಕಾಪು – ಶಿರ್ವ ಮುಖ್ಯ ರಸ್ತೆ ಬದಿಯಲ್ಲಿದ್ದ ಬಸ್ ನಿಲ್ದಾಣ ಸ್ವಚ್ಚತಾ ಕಾರ್ಯಕ್ರಮ ಕ್ಕೆ ಮೆಚ್ವುಗೆ ವ್ಯಕ್ತವಾಗಿದೆ.
ಹಲವು ವರ್ಷಗಳ ಹಿಂದೆ ಚಂದ್ರನಗರ – ಪಾದೂರು ಬಳಿ ದಾನಿಗಳ ಸಹಾಯದಿಂದ ಕಟ್ಟಿಸಿದ ಈ ಬಸ್ ನಿಲ್ದಾಣ ವಿಪರೀತ ಕಳೆ, ಪಾಚಿಗಳಿಂದ ಕೂಡಿದ್ದು, ಪ್ರಯಾಣಿಕರು ಬಸ್ ನಿಕ್ದಾಣದಲ್ಲಿ ಕುಳಿತುಕೊಳ್ಳಲೂ ಅಸಹ್ಯ ಪಡುವಂತಾಗಿತ್ತು.
ಪ್ರಧಾನ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಎಲ್ಲೆಡೆ ಸ್ವಚ್ಚತಾ ಕಾರ್ಯಕ್ರಮ ನಡೆಯುವುದನ್ನು ಗಮನಿಸಿದ ಯುವಮೋರ್ಚ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಈ ಬಸ್ ನಿಲ್ದಾಣದ ಕಟ್ಟಡ ಸ್ವಚ್ಚಗೊಳಿಸುವ ನಿರ್ಧಾರಕ್ಕೆ ಬಂದು ಈ ಬಗ್ಗೆ ತಮ್ಮ ಸ್ನೇಹಿತರೊಡನೆ ಚರ್ಚಿಸಿದ್ದರು.
ಬೆಳಿಗ್ಗೆ ಸ್ವಚ್ಚತಾ ಕೆಲಸವನ್ನು ಆರಂಭಿಸಿ, ಮಧ್ಯಾಹ್ನದ ಒಳಗೆ ಸಾಧ್ಯವಾದಷ್ಟು ಸ್ವಚ್ಚಗೊಳಿಸಿ ಕಟ್ಟಡದ ಮೇಲಿದ್ದ ರಾಶಿ ರಾಶಿ ಪಾಚಿಯನ್ನು ಸುತ್ತ ಹರಡಿದ್ದ ಕಳೆಗಿಡಗಳನ್ನು ಕಡಿದು ಜನಮೆಚ್ಚುಗೆ ಗಳಿಸಿದ್ದಾರೆ. ಇವರ ಕೆಲಸವನ್ನು ನೋಡಿ ರಸ್ತೆಯಲ್ಲು ವಾಹನದಲ್ಲಿ ಸಾಗುವ ಹಲವರು ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದೇಶದ್ಯಾಂತ ಬಿಜೆಪಿ ಕಾರ್ಯಕರ್ತರು ಹಳ್ಳಿ ಹಳ್ಳಿಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ನಮ್ಮಂತಹ ಕಾರ್ಯಕರ್ತರಿಗೆ ಇದು ಹೆಮ್ಮೆಯ ವಿಚಾರವಾಗಿದೆ. ಮತ್ತಷ್ಟು ಕೆಲಸ ಮಾಡಲು ಇಂತಹ ಕೆಲಸಗಳೇ ಸ್ಫೂರ್ತಿಯಾಗಿದೆ ಎಂದು ಯುವಮೋರ್ಚಾ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.
ಯುವಕರ ಶ್ರಮಾಧಾನ ಕೆಲಸವನ್ನು ತಿಳಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಅವರು ಸ್ಥಳಕ್ಕೆ ತೆರಳಿ, ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಮತ್ತಷ್ಟು ಸೇವೆ ಮತ್ತು ಸಮರ್ಪಣೆ ಸಮಾಜ ಕ್ಕಾಗಿ ಮಾಡಬೇಕೆಂದು ವಿನಂತಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.