ಶಿರ್ವ: ಸರಕಾರಿ ಜಾಗದಲ್ಲಿದ್ದ ಅಕ್ರಮ ನಿರ್ಮಾಣದ ಕಟ್ಟಡ ತೆರವು
Team Udayavani, Apr 4, 2022, 3:58 PM IST
ಶಿರ್ವ: ಕಾಪು ತಾಲೂಕು ಶಿರ್ವ ಗ್ರಾಮದ ಸ.ನಂ.441/1ಬಿ1ಬಿಪಿ1 ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅನಧಿಕೃತ ಕಟ್ಟಡವನ್ನು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿಯವರ ಆದೇಶದಂತೆ ಕಂದಾಯ ಇಲಾಖೆ,ಶಿರ್ವ ಗ್ರಾ.ಪಂ. ಆಡಳಿತ ಮತ್ತು ಶಿರ್ವ ಪೊಲೀಸರ ಸಹಕಾರದೊಂದಿಗೆ ಎ. 4 ರಂದು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಶಿರ್ವ ಪೊಲೀಸ್ ಠಾಣೆಯ ಬಳಿ ಸ.ನಂ.441/1ಬಿ1ಬಿಪಿ1 ಸರಕಾರಿ ಜಾಗದಲ್ಲಿ ಹಾವೇರಿ ಜಿಲ್ಲೆಯ ಪದ್ಮಾಬಾಯಿ ಕೋಂ ಪ್ರಿಯಾ ನಾಯಕ್ ಅವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಸರಕಾರಿ ಜಮೀನು ಒತ್ತುವರಿ ಮಾಡಿದ ಬಗ್ಗೆ ಶಿರ್ವ ಗ್ರಾಮ ಕರಣಿಕರು ನೀಡಿದ ವರದಿಯನ್ನು ಕಾಪು ಕಂದಾಯ ನಿರೀಕ್ಷಕರು ಕಾಪು ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದರು. ಒತ್ತುವರಿ ಮಾಡಲಾಗಿದ್ದ ಸರಕಾರಿ ಜಮೀನನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಕಚೇರಿಯಿಂದ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರಿಗೆ ನೋಟೀಸು ನೀಡಲಾಗಿದ್ದರೂ,ಜಮೀನನ್ನು ತೆರವುಗೊಳಿಸಿರಲಿಲ್ಲ.
ಒತ್ತುವರಿ ಸರಕಾರಿ ಜಮೀನನ್ನು ತೆರವುಗೊಳಿಸಿಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡುವ ಸಲುವಾಗಿ ಕಾಪು ತಹಶೀಲ್ದಾರ್ ಅವರು ಕಾಪು ಕಂದಾಯ ನೀರೀಕ್ಷಕರಿಗೆ ನೀಡಿದ ಆದೇಶದಂತೆ ಅಕ್ರಮ ಕಟ್ಟಡವನ್ನು ಸೋಮವಾರ ತೆರವುಗೊಳಿಸಲಾಗಿದೆ.
ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್ ಪಾಟ್ಕರ್, ಪಂ. ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್,ಶಿರ್ವ ಗ್ರಾಮ ಕರಣಿಕ ವಿಜಯ್, ಸಹಾಯಕ ಭಾಸ್ಕರ್, ಶಿರ್ವ ಠಾಣೆಯ ಪೊಲೀಸ್ ಸಿಬಂದಿ,ಗ್ರಾ.ಪಂ. ಸದಸ್ಯರು,ಶಿರ್ವ ಗ್ರಾ.ಪಂ. ಸಿಬಂದಿಗಳಾದ ಪ್ರೇಮನಾಥ್, ಪ್ರವೀಣ್ ಸಾಲಿಯನ್ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.