ಫೆಬ್ರವರಿ ಒಳಗೆ ಪ್ರತಿ ಮನೆಗಳಿಗೂ ಬಟ್ಟೆ ಚೀಲ ವಿತರಣೆ !


Team Udayavani, Jan 10, 2019, 8:15 PM IST

cloth-bags-700.jpg

ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಪ್ಲಾಸ್ಟಿಕ್‌ ನಿಷೇಧ ಮಾಡುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದ್ಯ ಎಲ್ಲಾದರೂ ಪ್ಲಾಸ್ಟಿಕ್‌ ಬಳಕೆ ಕಂಡು ವಶಪಡಿಸಲಾಗುತ್ತದೆ. ಜತೆಗೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಟ್ಟೆ ಚೀಲ ಮನೆಗಳಿಗೆ ವಿತರಿಸಲಾಗುತ್ತಿದ್ದು, ಫೆಬ್ರವರಿ ಒಳಗಡೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಡಿ. 1ರಿಂದ ಪ್ಲಾಸ್ಟಿಕ್‌ ಬಳಕೆ ಕಂಡು ಬಂದರೆ ಅಂಥವರಿಗೆ ಇಂತಿಷ್ಟು ಶುಲ್ಕ ಪಾವತಿ ಮಾಡಬೇಕೆನ್ನುವ ನಿರ್ಧಾರಕ್ಕೆ ತಾಲೂಕು ಆಡಳಿತ ಬಂದಿತ್ತು. ಆ ಪ್ರಕಾರ ಹಂತ ಹಂತವಾಗಿ ಮುನ್ನಡೆಯಲಾಗುತ್ತಿದೆ.

ಸರಕಾರ 2016ರ ಎ.1ರಿಂದ ರಾಜ್ಯದಾದ್ಯಂತ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸುವ ಅಧಿಸೂಚನೆ ಹೊರಡಿಸಿದಂತೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ರೀತಿಯ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಫ್ಲೆಕ್ಸ್‌, ಬಾವುಟ, ಪ್ಲಾಸ್ಟಿಕ್‌ ಲೋಟ, ಪ್ಲಾಸ್ಟಿಕ್‌ ತಟ್ಟೆ, ಪ್ಲಾಸ್ಟಿಕ್‌ ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆಗಳು, ಪ್ಲಾಸ್ಟಿಕ್‌ ಭಿತ್ತಿಪತ್ರ, ಪ್ಲಾಸ್ಟಿಕ್‌ ತೋರಣ, ಥರ್ಮೊಕೋಲ್‌ ಮುಂತಾದ ವಸ್ತುಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಿಸುವುದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಕಳದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಬೇಕು ಎಂಬ ನಿಟ್ಟಿನಲ್ಲಿ 2018ರ ಆ. 22ರಂದು ಪ್ಲಾಸ್ಟಿಕ್‌ ನಿಷೇಧ ಕುರಿತು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಗ್ರಾ.ಪಂ. ಸಿಬಂದಿಗೆ ಈ ಕುರಿತಂತೆ ನಿರ್ದೇಶನ ನೀಡಿದ್ದರು.

ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮಗಳು
1. ಸೆ. 1ರಂದು ಒಂದೇ ದಿನ ಎಲ್ಲ ಗ್ರಾ.ಪಂ.ಗಳಲ್ಲಿ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ವಿಶೇಷ ಗ್ರಾಮಸಭೆ ನಡೆಸಲಾಗಿತ್ತು. ಅಂಗಡಿ ಮಾಲಿಕರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉದ್ಯಮಿಗಳು ಹಾಗೂ ಕಟ್ಟಡ ಮಾಲಿಕರು ಭಾಗವಹಿಸಿದ್ದರು. ಕಡ್ಡಾಯ ಪ್ಲಾಸ್ಟಿಕ್‌ ನಿಷೇಧ ಹಾಗೂ ಪರ್ಯಾಯ ಕ್ರಮಗಳ ಬಗ್ಗೆ ಚರ್ಚಿಸಿ ನಿಯಾಮವಳಿ ರಚಿಸಿ (ಬೈಲಾ) ನಿಯಮ ಉಲ್ಲಂಘಿಸಿದವರಿಗೆ ದಂಡನೆ ಇತ್ಯಾದಿ ನಿರ್ಣಯ ಕೈಗೊಳ್ಳಲಾಗಿತ್ತು.

2. ಸೆ. 6ರಂದು ಎಲ್ಲಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘ, ಯುವಕ-ಯುವತಿ ಮಂಡಳಿಗಳ ಸದಸ್ಯರು, ಶಾಲಾ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

3. ಅ. 2ರ ಗಾಂಧಿ ಜಯಂತಿಯಂದು ಬೃಹತ್‌ ರ್ಯಾಲಿಯೊಂದಿಗೆ ಪ್ಲಾಸ್ಟಿಕ್‌ ಮುಕ್ತ ಕಾರ್ಕಳಕ್ಕೆ ಚಾಲನೆ ನೀಡಲಾಗಿದ್ದು, ಕಾರ್ಕಳದ ಮುಖ್ಯ ರಸ್ತೆಯಲ್ಲಿ ಸ್ಥಬ್ದ ಚಿತ್ರದೊಂದಿಗೆ ರ್ಯಾಲಿ ನಡೆಸಲಾಗಿತ್ತು.

4. ಪ್ಲಾಸ್ಟಿಕ್‌ನಿಂದಾಗುವ ಸಮಸ್ಯೆ ಹಾಗೂ ಸ್ವತ್ಛ ಸುಂದರ ಕಾರ್ಕಳ ನಿರ್ಮಿಸುವ ಪರಿಕಲ್ಪನೆಯ ವಿವರಗಳ ಕರಪತ್ರ ಮುದ್ರಿಸಿ ಮನೆಗಳಿಗೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ವಿತರಿಸಲಾಗಿತ್ತು.

ಪ್ಲಾಸ್ಟಿಕ್‌ಗೆ ಪರ್ಯಾಯ ಬಳಕೆ ವಸ್ತುಗಳು
– ಪ್ಲಾಸ್ಟಿಕ್‌ ಚೀಲ: ಪೇಪರ್‌, ಬಟ್ಟೆ, ಜೂಟ್‌ ಚೀಲ.

– ಪ್ಲಾಸ್ಟಿಕ್‌/ ಪೇಪರ್‌ ಕಪ್‌: ಸ್ಟೀಲ್‌, ಗಾಜು, ಸೇರಾಮಿಕ್‌ ಕಪ್‌

– ಪ್ಲಾಸ್ಟಿಕ್‌/ ಪೇಪರ್‌ ಪ್ಲೇಟ್‌: ಎಲೆ, ಸ್ಟೀಲ್‌, ಹಾಳೆ, ಸೆರಾಮಿಕ್‌, ಫೈಬರ್‌ ಪ್ಲೇಟ್‌

– ಪ್ಲಾಸ್ಟಿಕ್‌ ಸ್ಪೂನ್‌: ಸ್ಟೀಲ್‌, ಮರದ ಸ್ಪೂನ್‌

-ಫ್ಲೆಕ್ಸ್‌: ಬಟ್ಟೆ ಬ್ಯಾನರ್‌

– ಪ್ಲಾಸ್ಟಿಕ್‌ ಬಂಟಿಂಗ್ಸ್‌: ಪೇಪರ್‌, ಬಟ್ಟೆಯ ಬಂಟಿಂಗ್ಸ್‌

– ಪ್ಲಾಸ್ಟಿಕ್‌ ಬಾವುಟ: ಬಟ್ಟೆ ಅಥವಾ ಪೇಪರ್‌ ಬಾವುಟ,

– ಪೆಟ್‌ ಬಾಟಲ್‌: ಸಭೆ ಸಮಾರಂಭಗಳಲ್ಲಿ ನೀರಿನ ಫಿಲ್ಟರ್‌ಗಳನ್ನು ಇಡುವುದು, ಪ್ರಯಾಣ ಸಂದರ್ಭ ಪುನರ್‌ ಬಳಕೆ ಮಾಡಬಹುದಾದ ನೀರಿನ ಬಾಟಲ್‌ಗ‌ಳನ್ನು ಬಳಸುವಂತೆ ಪ್ರೇರೇಪಿಸುವುದು.

– ಸಮಾರಂಭಗಳಲ್ಲಿ ಐಸ್‌ಕ್ರೀಂ: ಐಸ್‌ಕ್ರೀಂಗಳನ್ನು ಸ್ಟೀಲ್‌, ಹಾಳೆ ಬೌಲ್‌ಗ‌ಳಲ್ಲಿ ಸರ್ವ್‌ ಮಾಡುವುದು.

– ಡೆಕೊರೇಟಿವ್‌ ಪ್ಲಾಸ್ಟಿಕ್‌ ಹೂ: ನೈಸರ್ಗಿಕ ಹೂವು, ಪೇಪರ್‌, ಬಟ್ಟೆಯಿಂದ ಮಾಡಿದ ಹೂಗಳ ಬಳಕೆ.

– ಪ್ಲಾಸ್ಟಿಕ್‌ ಬೊಕ್ಕೆ: ನೈಸರ್ಗಿಕ ಹೂವಿನ ಬೊಕ್ಕೆ ನೀಡುವುದು.

– ಪ್ಲಾಸ್ಟಿಕ್‌ ಗಿಫ್ಟ್ ರ್ಯಾಪರ್‌/ಕವರ್‌ : ಪೇಪರ್‌ ಗಿಫ್ಟ್, ರ್ಯಾಪರ್‌/ಕವರ್‌

– ಯೂಸ್‌/ತ್ರೋ ಪೆನ್‌ : ರೀಪಿಲ್‌ ಹಾಕಬಹುದಾದ/ ಪುನರ್‌ ಬಳಕೆ ಮಾಡಬಹುದಾದ ಪೆನ್‌.

– ಪ್ಲಾಸ್ಟಿಕ್‌ ಬೈಂಡ್‌ ಶೀಟ್‌ : ಪೇಪರ್‌ ಅಥವಾ ಲೆದರ್‌ ಬೈಂಡ್‌

– ಊಟದ ಟೇಬಲ್‌ ಮೇಲೆ ಹರಡುವ ಪ್ಲಾಸ್ಟಿಕ್‌ ರೋಲ್‌ : ಟೇಬಲ್‌ ಮೇಲೆ ಪ್ಲಾಸ್ಟಿಕ್‌ ರೋಲ್‌ ಹರಡುವ ಅವಶ್ಯಕತೆ ಇರುವುದಿಲ್ಲ. ತೀರ ಅಗತ್ಯವಾದಲ್ಲಿ ಪೇಪರ್‌ ರೋಲ್‌ ಬಳಸಬಹುದು.

– ಊಟ ಪಾರ್ಸೆಲ್‌: ಸ್ಟೀಲ್‌ ಕಂಟೈನರ್‌ ಅಥವಾ ಪುನರ್‌ ಬಳಕೆ ಮಾಡಬಹುದಾದ ಇತರೇ ಕಂಟೈನರ್‌ ಬಳಕೆ ಮಾಡುವುದು.

– ಮೀನಿನ ಕೈ ಚೀಲ: ಸ್ಟೀಲ್‌ ಕಂಟೈನರ್‌ ಅಥವಾ ಪುನರ್‌ ಬಳಕೆ ಮಾಡಬಹುದಾದ ಇತರೇ ಕಂಟೈನರ್‌ ಬಳಕೆ ಮಾಡುವುದು.

– ಮಾಂಸ ಖರೀದಿ: ಅಲ್ಯೂಮಿನಿಯಂ ಫಾಯಲ್‌, ಕಂಟೈನರ್‌ ಬಳಕೆ

– ಥರ್ಮಕೋಲ್‌: ಕಾರ್ನ್ಸ್ಟ್ರಾಚ್‌ ಫೋಮ್‌/ಹನಿಕೋಂಬ್‌/ ಪೇಪರ್‌ ಇತ್ಯಾದಿ.

ಪ್ಲಾಸ್ಟಿಕ್‌ ಬಳಕೆ ಕಡಿಮೆ
ಪ್ಲಾಸ್ಟಿಕ್‌ ದೊರೆತರೆ ವಶಪಡಿಸಿಕೊಳ್ಳಲಾಗುತ್ತದೆ. ಸಂಪೂರ್ಣ ನಿಷೇಧಕ್ಕೆ ಯೋಜನೆ ಹಾಕಿಕೊಳ್ಳಲಾಗಿದ್ದು, ಅದರ ಪ್ರಕಾರ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಎಲ್ಲ ಪಂಚಾಯತ್‌ ವ್ಯಾಪ್ತಿಯಲ್ಲೂ ಸುಧಾರಣೆ ಆಗಿದೆ. ಪ್ಲಾಸಿಕ್‌ಗೆ ಪರ್ಯಾಯವಾಗಿ ಬಟ್ಟೆ ಬ್ಯಾಗ್‌ಗಳನ್ನು ಕೊಡಲಾಗುತ್ತಿದೆ. ಹಲವು ಮನೆಗಳಿಗೆ ಕೊಡಲು ಬಾಕಿ ಇದೆ. ಫೆಬ್ರವರಿ ಕೊನೆಯ ವೇಳೆಗೆ ಎಲ್ಲಾ ಮನೆಗಳಿಗೆ ನೀಡಲು ಪಿಡಿಒಗಳಿಗೆ ಸೂಚಿಸಲಾಗಿದೆ.
– ಮೇ| ಹರ್ಷ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ಸಹಕಾರ ಅಗತ್ಯ
ನಗರ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ನಗರದಲ್ಲಿ ಪ್ಲಾಸ್ಟಿಕ್‌ ಕಂಡಬಂದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. ಸ್ವಚ್ಛ ಸರ್ವೇಕ್ಷಣ-2019 ಕಾರ್ಕಳದಲ್ಲಿ ಜಾರಿಯಲ್ಲಿದ್ದು, ಅದಕ್ಕಾಗಿ ತಂಡ ರಚಿಸಲಾಗಿದೆ. ನಿಷೇಧಕ್ಕೆ ಎಲ್ಲರ ಸಹಕಾರ ಅಗತ್ಯ.
– ಮೇಬಲ್‌ ಡಿ’ಸೋಜಾ, ಪುರಸಭೆಯ ಮುಖ್ಯಾಧಿಕಾರಿ

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.