ಮೇಘ ದೂತ ಹವಾಮಾನ ಮುನ್ಸೂಚಿ ಆ್ಯಪ್‌

ಬ್ರಹ್ಮಾವರದ ಹವಾಮಾನ ಮನ್ಸೂಚಿ ಘಟಕದಿಂದ ಉಡುಪಿ, ದ.ಕ ಜಿಲ್ಲೆಗಳಿಗೆ ಮಾಹಿತಿ

Team Udayavani, Mar 6, 2020, 4:48 AM IST

ಮೇಘ ದೂತ ಹವಾಮಾನ ಮುನ್ಸೂಚಿ ಆ್ಯಪ್‌

ಉಡುಪಿ: ಭಾರತೀಯ ಹವಾಮಾನ ಇಲಾಖೆ ಅಭಿವೃದ್ಧಿಪಡಿಸಿರುವ “ಮೇಘದೂತ’ ಹವಾಮಾನ ಸೂಚಿ ಆ್ಯಪ್‌ ಮೂಲಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಭಾಗಕ್ಕೆ ಹವಾಮಾನ ಮಾಹಿತಿ ನೀಡುವ ಕೆಲಸ ಆರಂಭಿಸಿದೆ. ಬ್ರಹ್ಮಾವರ ಗ್ರಾಮೀಣ ಕೃಷಿ ಹವಾಮಾನ ಮನ್ಸೂಚನ ಘಟಕದ ಮೂಲಕ ಮಾಹಿತಿ ನೀಡಲಾಗುತ್ತಿದೆ.

ಸ್ಮಾರ್ಟ್‌ಫೋನ್‌ಲ್ಲೇ ಹವಾಮಾನ ಆಧಾರಿತ ಕೃಷಿ, ಮೀನುಗಾರಿಕೆ ಹವಾಮಾನ ಬದಲಾವಣೆಯ ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ಪಡೆಯಬಹುದು. ವಾರದ ಹವಾಮಾನವನ್ನು ನಿಖರವಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಪ್‌ಡೇಟ್‌ ಮಾಡಿಕೊಡುತ್ತದೆ. ಒಟ್ಟು 10 ಭಾಷೆಗಳಲ್ಲಿ ಮಾಹಿತಿಯನ್ನು ಪಡೆಯಬಹುದು.

ಬಳಕೆ ಹೇಗೆ?
ಮೊದಲ ಬಾರಿಗೆ ಬಳಸುವವರು ಗೂಗಲ್‌ ಪ್ಲೇಸ್ಟೋರ್‌, ಗೂಗಲ್‌ ಕ್ರೋಮ್‌ ಅಥವಾ ಇತರ ಬ್ರೌಸರ್‌ನಲ್ಲಿ https/[email protected] ಟೈಪ್‌ ಮಾಡಿದಾಗ ಮೇಘದೂತ್‌ ಆ್ಯಪ್‌ನ ಹೋಂ ಪೇಜ್‌ ಬರುತ್ತದೆ ಇಲ್ಲಿ ಇನ್‌ಸ್ಟಾಲ್‌ಗೆ ಕ್ಲಿಕ್‌ ಮಾಡಬೇಕು. ಆ್ಯಪ್‌ ಡೌನ್ಲೋಡ್ ಆದರ ಬಳಿಕ ನೊಂದಣಿ ಮಾಡಲು ಭಾಷೆಯ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ ನೋಂದಣಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿದಾಗ ನೋಂದಣಿಯಾಗಿರುವುದಾಗಿ ಮೊಬೈಲ್‌ ಪರದೆಯ ಮೇಲೆ ಹೆಸರು ಮೂಡುತ್ತದೆ. ಇದಾದ ನಂತರ ಲಾಗಿನ್‌ ಆಗಬಹುದು.

ನಾಲ್ಕು ಹಂತದ ಮಾಹಿತಿ
ಹಿಂದಿನ 10 ದಿನಗಳ ಹವಾಮಾನ ವರದಿಯ ಮಾಹಿತಿಯನ್ನು ಪಡೆಯಬಹುದು. ಪ್ರತಿ ದಿನದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಹಾಗೂ ಮಳೆಯ ಪ್ರಮಾಣ ಕುರಿತಾದ ಮಾಹಿತಿಯು ಲಭ್ಯವಿರುತ್ತದೆ. ಮುಂದಿನ 5 ದಿವಸಗಳ ಗರಿಷ್ಠ ಮತ್ತು ಕನಿಷ್ಠ ತಾಪಮಾನ , ಆದ್ರತೆ, ಮಳೆ ಪ್ರಮಾಣ, ಮೋಡಗಳ ಮಾಹಿತಿ, ಗಾಳಿಯ ದಿಕ್ಕು ಮತ್ತು ವೇಗಗಳ ಕುರಿತು ಮುನ್ಸೂಚನೆಯ ಮಾಹಿತಿಯನ್ನು ಪಡೆಯಬಹುದು.

ರಾಜ್ಯ ಹಾಗೂ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಾಗ ಆಯಾ ಜಿಲ್ಲೆಗೆ ಅನುಗುಣವಾದ ಪ್ರಸ್ತುತ ಮುನ್ಸೂಚನಾ ಹವಾಮಾನ (ಗರಿಷ್ಠ ಮತ್ತು ಕನಿಷ್ಠ ತಾಪಮಾನ, ಮಳೆಯ ಪ್ರಮಾಣ) ಆಧಾರಿತ ಕೃಷಿ ಹಾಗೂ ಜಾನುವಾರು ಸಲಹೆಗಳನ್ನು ಪಡೆಯಬಹುದು.

ಅನುಕೂಲ
ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಹವಾಮಾನ ಮುನ್ಸೂಚನೆ ಆಧರಿಸಿ ನೀಡುವ ಸಲಹೆ ಅನುಸರಿಸುವುದು ಅವಶ್ಯ. ಇದರಿಂದ ಬೆಳೆ ನಷ್ಟವನ್ನು ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ. ಈ ಆ್ಯಪ್‌ ಕೃಷಿಕರು, ಮೀನುಗಾರರು, ಜನಸಾಮಾನ್ಯರಿಗೆ ಅನುಕೂಲವಾಗಲಿದೆ.
-ರಂಜಿತ್‌. ಟಿ. ಎಚ್‌., ತಾಂತ್ರಿಕ ಅಧಿಕಾರಿ

ಲಾಭ ಹೇಗೆ
ದೇಶೀಯವಾಗಿ ಅಭಿವೃದ್ಧಿಗೊ ಳಿಸಿರುವುದರಿಂದಾಗಿ ನಿಖರ ಮಾಹಿತಿ ದೊರೆಯಲಿದೆ. ಮುಖ್ಯವಾಗಿ ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಅಗತ್ಯವಾದ ವಾತಾವರಣವನ್ನು ತಿಳಿಯಲು ಹಾಗೇ ಕೃಷಿ ಚಟುವಟಿಕೆಗೆ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಜಾನುವಾರು, ಕೋಳಿ, ಕುರಿ ಸಾಕಾಣಿಕೆ, ರೇಷ್ಮೆ ಕೃಷಿಯ ಮಾಹಿತಿಯನ್ನೂ ಒಳಗೊಂಡಿದೆ. ಋತುವಿಗೆ ಅನುಗುಣವಾಗಿ ಜಾನುವಾರುಗಳಲ್ಲಿ ಬರಬಹುದಾದ ಕಾಯಿಲೆ, ಲಸಿಕೆ ಜತೆಗೆ ಯಾವ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂಬ ಮಾಹಿತಿಯೂ ಇರಲಿದೆ.

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.