ವಿಪಕ್ಷದ ಟೀಕೆಗೆ ನಮ್ಮ ಕೆಲಸಗಳೇ ಉತ್ತರ ಕೊಡಲಿದೆ: ಉಡುಪಿಯಲ್ಲಿ ಸಿಎಂ ಬೊಮ್ಮಾಯಿ
Team Udayavani, Apr 11, 2022, 12:52 PM IST
ಉಡುಪಿ: ಪ್ರಗತಿಪರ ರಾಜ್ಯವಾಗಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮಗೆ ಗೊತ್ತಿದೆ. ಅದನ್ನು ಮಾಡಿಸಿ ತೋರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅವಧಿಯಲ್ಲಿ ಹತ್ತಾರು ಹಿಂದೂ ಯುವಕರ ಕೊಲೆಯಾಗಿದೆ. ಆ ಸಂಸ್ಥೆಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರದಿಂದ ಕೈ ಬಿಡಲಾಗಿದೆ. ಆಗ ಅವರು ಬುದ್ಧಿ ಕಳೆದುಕೊಂಡಿದ್ದಾರಾ? ಆ ಸಂಸ್ಥೆಗಳನ್ನು ಬ್ಯಾನ್ ಮಾಡುವ ಬಗ್ಗೆ ಮುಂದೆ ಗೊತ್ತಾಗಲಿದೆ. ವಿಪಕ್ಷದವರ ಟೀಕೆಗೆ ನಮ್ಮ ಆ್ಯಕ್ಷನ್ (ಕೆಲಸಗಳು) ಉತ್ತರ ಕೊಡಲಿದೆ ಎಂದರು.
ಇದನ್ನೂ ಓದಿ:ಯಾರೋ ಟೀಕೆ ಮಾಡುತ್ತಾರೆಂದು ಸಿಎಂ ಲಾಠಿ ಹಿಡಿದು ನಿಲ್ಲಲು ಸಾಧ್ಯವಿಲ್ಲ: ಬಿ.ಸಿ.ಪಾಟೀಲ್
ಇಂಧನ ಸಚಿವ ಸುನೀಲ್ ಕುಮಾರ್, ಸಾರಿಗೆ ಸಚಿವ ಶ್ರೀರಾಮುಲು ಅವರು ಸಿಎಂ ಜೊತೆಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಉ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕರು, ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.