ಸರಕಾರ ರಚನೆಯ ಹುರುಪು! ಕರಾವಳಿ ಬಿಜೆಪಿ ಶಾಸಕರು ಬೆಂಗಳೂರಿಗೆ
Team Udayavani, Jul 9, 2019, 10:53 AM IST
ಉಡುಪಿ: ರಾಜ್ಯದ ಸಮ್ಮಿಶ್ರ ಸರಕಾರ ಡೋಲಾಯಮಾನ ಪರಿಸ್ಥಿತಿಯಲ್ಲಿರುವಾಗ ಹೊಸ ಸರಕಾರ ರಚನೆಯ ಹುರುಪು ಹೊತ್ತು ಕರಾವಳಿಯ ಬಹುತೇಕ ಎಲ್ಲ ಬಿಜೆಪಿ ಶಾಸಕರು ಬೆಂಗಳೂರಿಗೆ ಸೋಮವಾರ ದೌಡಾಯಿಸಿದ್ದಾರೆ.
ಸೋಮವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರೆಲ್ಲರೂ ಪಾಲ್ಗೊಂಡಿದ್ದಾರೆ. ಹೊಸ ಸರಕಾರ ಬಿಜೆಪಿ ನೇತೃತ್ವದಲ್ಲಿ ರಚನೆಗೊಂಡರೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಶಾಸಕರನ್ನು ಬಿಜೆಪಿ ಹೊಂದಿರುವುದರಿಂದ ಎರಡೂ ಜಿಲ್ಲೆಗಳಿಗೆ ಕನಿಷ್ಠ ಇಬ್ಬರಿಗಾದರೂ ಸಚಿವ ಪದವಿ ಸಿಗುವ ಸಾಧ್ಯತೆ ಇದೆ.
“ಶಾಸಕರ ರಾಜೀನಾಮೆ ಕುರಿತ ನಿರ್ಣಯ ಮಂಗಳವಾರಕ್ಕೆ ನಿಗದಿ ಪಡಿಸಲಾಗಿದೆ. ಕಾಂಗ್ರೆಸ್ನವರು ರಿವರ್ಸ್ ಕಮಲ ಮಾಡುತ್ತೇವೆ ಎಂದಿದ್ದು, ಕರಾವಳಿಯ ಎಲ್ಲ ಬಿಜೆಪಿ ಶಾಸಕರು ಒಟ್ಟಿಗೆ ಇದ್ದೇವೆ’ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ “ಉದಯವಾಣಿ’ಗೆ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.