ಸಿಆರ್‌ಝಡ್‌ ನೋಟಿಫಿಕೇಶನ್‌ ಮೂಲ ನಿವಾಸಿಗಳಿಗೇ ಅಡ್ಡಿ


Team Udayavani, Sep 23, 2018, 10:31 AM IST

crz.jpg

ಪಡುಬಿದ್ರಿ: ಪರಿಸರ ಇಲಾಖೆ 2011ರಲ್ಲಿ (ಮೂಲತಃ 1991ರಲ್ಲಿ ) ಜಾರಿಗೆ ತಂದಿರುವ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ನೋಟಿಫಿಕೇಶನ್‌ ಸಮುದ್ರ ತೀರದ ಮೂಲ ನಿವಾಸಿಗಳಿಗೇ ತಮ್ಮ ಮೂಲ ಸೌಲಭ್ಯಗಳನ್ನು ಪಡೆಯಲು ಅಡ್ಡಿ ಮಾಡುತ್ತಿದೆ ಎಂದು ಮೀನುಗಾರ ಸಮುದಾಯ ಆಕ್ಷೇಪಿಸುತ್ತಿದೆ.  ಸಿಆರ್‌ಝಡ್‌ನ‌ ಆಶಯ ಭಾರತದ “ಕರಾ ವಳಿಯು ನಿಮಗೇ ಸಂಬಂಧಿಸಿದ್ದು’ ಎನ್ನುವುದು. ವಿಶಾಲ ಅರ್ಥದಲ್ಲಿ ಇದು ಭಾರತೀಯ ರಿಗಾದರೂ ಕರಾವಳಿಯನ್ನೇ ನೆಚ್ಚಿ ಬದುಕುತ್ತಿರುವ ಮೀನುಗಾರ ಸಮುದಾಯ ಇದರ ನೇರ ಅಡ್ಡ ಪರಿಣಾಮಗಳನ್ನು ಅನುಭವಿಸುವಂತಾಗಿದೆ.

ಮೂಲ ಆಶಯ – ವಾಸ್ತವ
ಸಿಆರ್‌ಝಡ್‌ ಮೂಲ ಆಶಯಗಳಲ್ಲಿ ಕರಾವಳಿಯ ಮೂಲ ನಿವಾಸಿಗಳ ಜೀವನ ಕ್ರಮವನ್ನು
ಬೆಂಬಲಿಸುವುದೂ ಒಂದು. ಜೈವಿಕ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಕರಾವಳಿಯಲ್ಲಿ ಸಮರ್ಥವಾಗಿ ಅರ್ಥ ವ್ಯವಹಾರವನ್ನು ಬೆಂಬಲಿಸಲು ಈ ನೋಟಿಫಿಕೇಶನ್‌ ಒತ್ತು ನೀಡುತ್ತದೆ. ಆದರೆ ಈ ನೋಟಿಫಿಕೇಶನ್‌ನಿಂದಾಗಿ ಮನೆ ದುರಸ್ತಿಗೊಳಿಸುವುದಕ್ಕೂ ಪರವಾನಿಗೆ ಸುಲಭ ವಾಗಿ ಲಭಿಸುತ್ತಿಲ್ಲ. ಸವಲತ್ತುಗಳು ಲಭಿಸುವುದಕ್ಕೂ ಅಡ್ಡಗಾಲಾಗಿ ಕಾಡುತ್ತಿದೆ. 

ಸಿಆರ್‌ಝಡ್‌ ವಿಭಾಗಗಳು
ಸಿಆರ್‌ಝಡ್‌ನ‌ಲ್ಲಿ 1, 2, 3 ಹಾಗೂ 4 ವಿಭಾಗಗಳಿವೆ. ವಿಭಾಗ 1ರಲ್ಲಿ ಸಮುದ್ರದ ಉಬ್ಬರ ಮತ್ತು ಇಳಿತದ ನಡುವಣ ಮೂಲ ನಿವಾಸಿಗಳು ವಾಸಿಸುವ ಭೂಭಾಗವು ಸೇರಿದ್ದು, ಪರಿಸರ ಸೂಕ್ಷ್ಮ ಜೈವಿಕ ವಲಯವನ್ನು ಹೊಂದಿದೆ. 2ನೇ ವಿಭಾಗವು ಸಮುದ್ರ ತೀರದ ಅಭಿವೃದ್ಧಿ ಹೊಂದಿದ ಪ್ರದೇಶ. ಮನೆ, ಇತರ ಕಟ್ಟಡಗಳು ಮತ್ತು ನಗರ ಭಾಗವನ್ನು ಹೊಂದಿರುತ್ತದೆ. 3ನೇ ವಿಭಾಗದಲ್ಲಿ ಅಭಿವೃದ್ಧಿಯಾಗದ ಭೂಭಾಗ, ಗ್ರಾಮೀಣ ಪ್ರದೇಶಗಳು, ಪರಿಸರ ಸೂಕ್ಷ್ಮವಲ್ಲದ ಪ್ರದೇಶ ಸೇರಿದ್ದು, ಸಮುದ್ರದ ಉಬ್ಬರ ರೇಖೆಯಿಂದ 0 – 200 ಮೀ. (ಅಭಿವೃದ್ಧಿ ಹೊಂದದ ಪ್ರದೇಶ) ಹಾಗೂ 200 – 500 ಮೀ.ವರೆಗಿನ ಎಂಬುದಾಗಿ ಎರಡು ಉಪವಿಭಾಗಗಳನ್ನು ಹೊಂದಿದೆ. 4ನೇ ವಿಭಾಗ ಸಮುದ್ರದ ಇಳಿತದ ರೇಖೆಯಿಂದ ಸಮುದ್ರದಲ್ಲಿ 12 ನಾಟಿಕಲ್‌ ಮೈಲುಗಳ ಪ್ರದೇಶವನ್ನು ಹೊಂದಿರುತ್ತದೆ.  

ಬದುಕು ಕಟ್ಟುವ ವಾತಾವರಣ ನಿರ್ಮಾಣವಾಗಲಿ
ಸಿಆರ್‌ಝಡ್‌ ವಲಯದಲ್ಲಿ ವಾಸಿಸುವ ಮೀನುಗಾರ ಸಮುದಾಯದವರಿಗೆ ಹಳೆ ಮನೆ ದುರಸ್ತಿ ಮಾಡುವುದಕ್ಕೆ ಪರವಾನಿಗೆ ಅಥವಾ ಸಿಆರ್‌ಝಡ್‌ ಎನ್‌ಒಸಿ ಪಡೆದುಕೊಳ್ಳಲು ವರ್ಷಗಳೇ ಕಾಯಬೇಕಾದ ಪರಿಸ್ಥಿತಿ ಇದೆ. ಭೂ ಪರಿವರ್ತನೆ ಆಗುವುದಿಲ್ಲ. ಹೊಸ ಮನೆಗೆ ಪರವಾನಿಗೆ ಲಭ್ಯವಾಗುವುದಿಲ್ಲ. ಮತ್ಸಾéಶ್ರಯ ಯೋಜನೆ ದಕ್ಕಸಿಕೊಳ್ಳಲೂ ತೊಂದರೆ ಎದುರಾಗುತ್ತಿವೆ. ಅಲ್ಲದೆ ಇಲ್ಲಿನ ಮೂಲ ನಿವಾಸಿ ಮೀನುಗಾರರಿಗೆ ಸರಕಾರದ ಯಾವುದೇ ಸೌಲಭ್ಯ ಸಿಗದು. ಕೇಂದ್ರದ ಪ್ರಧಾನ ಮಂತ್ರಿ ಆವಾಸ್‌, ಇಂದಿರಾ ಆವಾಸ್‌, ಬಸವ ವಸತಿ ಯೋಜನೆಗಳಿಂದ ಮೀನುಗಾರರು ವಂಚಿತರಾಗಿದ್ದಾರೆ. ಮೀನುಗಾರ ಸಮುದಾಯಕ್ಕೆ ಬದುಕು ಕಟ್ಟುವಂತಹ ವಾತಾವರಣದ ನಿರ್ಮಾಣವಾಗಲಿ. ಇದು ಸರಕಾರದ ಜವಾಬ್ದಾರಿಯೂ ಹೌದು ಎಂದು ಬಡಾ ಗ್ರಾಮ ಉಚ್ಚಿಲದ ಕರಾವಳಿ ರಕ್ಷಣಾ ವೇದಿಕೆಯ ಶಿವಕುಮಾರ್‌ ಆರ್‌. ಹೇಳುತ್ತಾರೆ. 

ಆದ್ಯತೆಗಳು
ಸಿಆರ್‌ಝಡ್‌ ಪ್ರದೇಶದಲ್ಲಿ ಮೀನುಗಳ ಸಂತಾನ ವೃದ್ಧಿಗೆ ಮೊದಲ ಆದ್ಯತೆ. ಘನ ಹಾಗೂ ಶುದ್ಧೀಕರಿಸದ ದ್ರವ ತ್ಯಾಜ್ಯಗಳನ್ನು ಇಲ್ಲಿ ವಿಸರ್ಜಿಸುವುದಕ್ಕೆ ನಿಷೇಧವಿದೆ. ಸಿಆರ್‌ಝಡ್‌ 2ರಲ್ಲಿ ನಿರ್ಮಾಣಗಳ ದುರಸ್ತಿ ಮತ್ತು ಪುನರ್‌ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಪರವಾನಿಗೆಯೊಂದಿಗೆ ಅವಕಾಶ ಇದೆ. ಸಿಆರ್‌ಝಡ್‌ 3ರಲ್ಲಿ ಸ್ಥಳೀಯ ಮೀನುಗಾರ ಸಮೂಹಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ. ಯಾವುದೇ ಹೊಸ ನಿರ್ಮಾಣಗಳಿಗೆ ಇಲ್ಲಿ ಅವಕಾಶವಿಲ್ಲ. ಇವೆಲ್ಲವುಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರಾವಳಿಗರ ಸಮುದಾಯದ ಮೂವರು ಸದಸ್ಯರಿರುವ ಕರಾವಳಿ ನಿಯಂತ್ರಣ ವಲಯ ಆಡಳಿತ ವ್ಯವಸ್ಥೆ ಕಣ್ಗಾವಲು ಇರಿಸುತ್ತದೆ.

ಸಿಆರ್‌ಝಡ್‌ನ‌ ಹೊಸ ನೋಟಿಫಿಕೇಶನ್‌ನಂತೆ ಸಿಆರ್‌ಝಡ್‌ನ‌ ಹಳೇ ನಕಾಶೆಯ ಅವಧಿ ಮುಗಿದು, ಅದು ಪರಿಷ್ಕರಣೆ ಆಗುವವರೆಗೆ ಭೂ ಪರಿವರ್ತನೆ, ಎನ್‌ಒಸಿ ಅವಕಾಶ ನೀಡುವಂತಿಲ್ಲವೆಂದು ಗ್ರೀನ್‌ ಟ್ರಿಬ್ಯೂನಲ್‌ ಆದೇಶ ಹೊರಡಿಸಿತ್ತು. ಈಗ ಸಿಆರ್‌ಝಡ್‌ ಭೂಪಟವು ತಯಾರಾಗಿದೆ. ಅದು ಜಿಲ್ಲಾಡಳಿತದ ಕೈಸೇರಿದ್ದು, ಇನ್ನು 1991ರ ಹಿಂದಿನ ಮೂಲ ನಿವಾಸಿಗಳ ಭೂ ಪರಿವರ್ತನೆ, ಎನ್‌ಒಸಿಗಳ ನೀಡಿಕೆ ಕುರಿತಾಗಿ ಸಭೆಯೊಂದನ್ನು ಕರೆಯಲಾಗುವುದು. ಸಭೆಯ ತೀರ್ಮಾನದಂತೆ ಮುಂದೆ ಕ್ರಮಗಳನ್ನು ಸಡಿಲಿಸಲಾಗುವುದು. ಸರಕಾರದ ಸವಲತ್ತು ಪಡೆಯಲು ಈಗಲೂ ಅಡ್ಡಿ ಇಲ್ಲ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

* ಆರಾಮ

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.