ವಿವಿಧೆಡೆ ನಾಗರ ಪಂಚಮಿ ಸಂಭ್ರಮ
Team Udayavani, Aug 6, 2019, 6:31 AM IST
ಕಾರ್ಕಳ/ಅಜೆಕಾರು/ಬೆಳ್ಮಣ್: ಕಾರ್ಕಳ ತಾಲೂಕಿ ನಾದ್ಯಂತ ಆ. 5ರಂದು ನಾಗರ ಪಂಚಮಿ ಆಚರಿಸಲಾಯಿತು.
ತಾಲೂಕಿನ ಪ್ರಮುಖ ನಾಗ ಸಾನ್ನಿಧ್ಯ ದೇವಸ್ಥಾನಗಳಾದ ನಿಂಜೂರು ಹಾಗೂ ಸೂಡದಲ್ಲಿ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ತನು-ತಂಬಿಲ ಅರ್ಪಿಸಿದರು. ಕಾರ್ಕಳ ಶಿವತಿಕೆರೆ ದೇವಸ್ಥಾನ, ಪರಪು ನಾಗ ಬ್ರಹ್ಮ ಸ್ಥಾನ, ಕುಕ್ಕುಂದೂರು ದೇವಸ್ಥಾನ, ಸಾಂತ್ರಬೆಟ್ಟು ನಾಗ ಸ್ಥಾನ, ಪೆರ್ವಾಜೆ ದೇವಸ್ಥಾನ, ಅನಂತಪದ್ಮನಾಭ ದೇವಸ್ಥಾನ ಕಾರ್ಕಳ, ನಂದಳಿಕೆ ದೇವಸ್ಥಾನ, ಕೆರ್ವಾಶೆ ದೇವಸ್ಥಾನ, ಅಂಡಾರು ಕರಿಯಾಲು ಮತ್ತು ಕರ್ವಾಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಮೂಲ ನಾಗ ಬನಕ್ಕೆ ತೆರಳುವ ಭಕ್ತರಿಂದಾಗಿ ಸಾರಿಗೆ ಬಸ್ಸುಗಳು ದಿನವಿಡೀ ತುಂಬಿ ತುಳುಕುತ್ತಿದ್ದವು. ನಾಗ ದೇವರಿಗೆ ಪ್ರಿಯವಾದ ಹಾಲು, ಸೀಯಾಳಗಳ ಮಾರಾಟ ನಗರದಲ್ಲಿ ಬಿರುಸಿನಿಂದ ಸಾಗಿತ್ತು. ಕೆಲವೆಡೆ ಹಾಲಿಗಾಗಿ ಸರತಿ ಸಾಲು ಕಂಡು ಬಂದರೆ, ಕೆಲವರಿಗೆ ಸೀಯಾಳ ಸಿಗದೆ ಅಂಗಡಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಮಧ್ಯಾಹ್ನದ ವೇಳೆಗೆ ಬಹುತೇಕ ಭಕ್ತರ ಪೂಜಾಕಾರ್ಯಗಳು ನಡೆದರೆ, ದೂರದೂರಿನಿಂದ ಮೂಲ ಬನಕ್ಕೆ ಬರುವವರ ಪೂಜೆ ಸಂಜೆವರೆಗೂ ನಡೆದವು. ದಿನವಿಡೀ ಮಳೆ ಬರುತ್ತಿದ್ದರಿಂದ ಪೂಜಾ ಕಾರ್ಯಗಳಿಗೆ ಸ್ವಲ್ಪಮಟ್ಟಿಗೆ ಅಡೆತಡೆಯೂ ಉಂಟಾಯಿತು.
ನಂದಳಿಕೆ ದೇಗುಲ
ಐತಿಹಾಸಿಕ ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇಗುಲದ ನಾಗ ಸನ್ನಿಧಿಯಲ್ಲಿ ಸೋಮವಾರ ನಾಗರ ಪಂಚಮಿ ಆಚರಿಸಲಾಯಿತು. ಭಕ್ತರು ತನು, ತಂಬಿಲ ಸಲ್ಲಿಸಿದರು. ದೇವಾಲಯದ ಪಡು ನಾಗಬನ, ಮೂಡು ನಾಗಬನ ಹಾಗೂ ಬಲ್ಲೇಶ್ವರ ನಾಗಬನದಲ್ಲಿ ವಿಶೇಷ ಪೂಜೆಗಳು ನಡೆದವು. ನಂದಳಿಕೆ ಚಾವಡಿ ಅರಮನೆ ಸುಂದರ್‌ರಾಮ್ ಹೆಗ್ಡೆ, ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಪ್ರಧಾನ ಅರ್ಚಕ ಹರೀಶ್ ತಂತ್ರಿ, ದೇವಾಲಯದ ವ್ಯವಸ್ಥಾಪಕ ರವಿರಾಜ್ ಭಟ್ ಉಪಸ್ಥಿತರಿದ್ದರು.
ಬೆಳ್ಮಣ್: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಾಗಸನ್ನಿಧಿಯಲ್ಲಿ ನಾಗರ ಪಂಚಮಿ ಪೂಜೆ ಅರ್ಚಕ ಸೂಡ ಶ್ರೀಶ ಭಟ್ ಅವರ ನೇತೃತ್ವದಲ್ಲಿ ನೆರವೇರಿತು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮತ್ತು ಸಾವಿರಾರು ಭಕ್ತರು ಪೂಜೆ ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.