ಹಿತ್ತಲ ಗಿಡ ಮರೆಯದಿರೋಣ
Team Udayavani, Aug 23, 2021, 4:00 AM IST
ಉಡುಪಿಗೆ ಆ. 19ರಂದು ಆಗಮಿಸಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರು ಖಾದ್ಯತೈಲ ಉತ್ಪಾದನೆಯ ಕೊರತೆ ಇದೆ. ಇದರ ಉತ್ಪಾದನೆ ಹೆಚ್ಚಿಸಲು ಸರಕಾರ ಪ್ರೋತ್ಸಾಹ ನೀಡಲಿದೆ ಎಂದು ಹೇಳುವಾಗ, ಕರಾವಳಿಯವರು ತೆಂಗಿನೆಣ್ಣೆಯನ್ನು ಬಳಸುವುದರಿಂದ ಭಾಗ್ಯವಂತರು. ಇಲ್ಲಿ ತಾಜಾ ಖಾದ್ಯತೈಲ ಸಿಗುತ್ತಿದೆ ಎಂದರು. ಹೊರ ರಾಷ್ಟ್ರಗಳಿಂದ ಪಾಮ್‌ಆಯಿಲ್ ತರಿಸಿ ಕಲಬೆರಕೆ ಮಾಡಿ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆಂದೂ ಶೋಭಾ ಕರಂದ್ಲಾಜೆಯವರು ಕಳವಳ ವ್ಯಕ್ತಪಡಿಸಿದ್ದರು.
ಕರಾವಳಿಯಲ್ಲಿ ತೆಂಗಿನೆಣ್ಣೆ ಬಳಕೆ ಲಾಗಾಯ್ತಿನಿಂದ ಬಂದಿರುವುದು ಸತ್ಯ. ಇಂದಿಗೂ ಒಂದಿಷ್ಟು ಮಟ್ಟಿಗೆ ಚಾಲ್ತಿಯಲ್ಲಿರುವುದೂ ಸತ್ಯ. ಈಗ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ತಿಂಡಿತಿನಿಸುಗಳ ಅಂಗಡಿಗಳಿಗೆ ಹೋಗಿ ಅಲ್ಲಿರುವ ಎಣ್ಣೆಯಲ್ಲಿ ಹುರಿದ ತಿಂಡಿಗಳನ್ನು ಕೇಳಿದರೆ ಅವುಗಳಲ್ಲಿ ಶೇ.99ರಷ್ಟು ತಿನಿಸುಗಳು ಪಾಮ್‌ಆಯಿಲ್‌ನಲ್ಲಿ ಮಾಡಿದ್ದಾಗಿರುತ್ತದೆ. ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿಯೂ ಪಾಮ್‌ಆಯಿಲ್‌ನಲ್ಲಿ ಹುರಿದ ತಿನಿಸುಗಳನ್ನು ಉಣ ಬಡಿಸುತ್ತಿದ್ದಾರೆ. ಸಚಿವರು ಬೆಟ್ಟು ಮಾಡಿದ ದೇಶದ ನಾನಾ ಭಾಗಗಳಲ್ಲಿರುವ ಕಲಬೆರಕೆ ಎಣ್ಣೆ ಕರಾವಳಿಯಲ್ಲಿಯೂ ದಾಳಿ ಮಾಡುತ್ತಿದೆ ಎಂಬುದು ವಾಸ್ತವ.
ತೆಂಗಿನೆಣ್ಣೆಯನ್ನು ಹಿಂದೊಮ್ಮೆ ವೈದ್ಯಕೀಯ ಲೋಕ ಟೀಕಿಸಿತ್ತು. ತೆಂಗಿನೆಣ್ಣೆ ಆರೋಗ್ಯಕ್ಕೆ ಉತ್ತಮ ಎಂದು ಹೆಸರಾಂತ ವೈದ್ಯ ಡಾ|ಬಿ.ಎಂ.ಹೆಗ್ಡೆಯವರು ಪ್ರತಿಪಾದನೆ ಮಾಡಿದ ಅನಂತರ ನೇತ್ಯಾತ್ಮಕ ಪ್ರಚಾರ ಸ್ವಲ್ಪ ಕಳಚಿ ಬಿತ್ತು ಎನ್ನಬಹುದು. ಈಗ ತೆಂಗಿನೆಣ್ಣೆ ಬದಲು ಬೇರೆ ಎಣ್ಣೆಗಳು ಚಾಲ್ತಿಗೆ ಬರಲು ಕಾರಣ ತಿನಿಸುಗಳು ಕೆಡದಂತೆ ಇರುವ ದೀರ್ಘಾವಧಿ. ಯಾವತ್ತೂ ನೇತ್ಯಾತ್ಮಕ ಶಕ್ತಿಗಳು ಬಲಿಷ್ಠ ಆಗಿರುವುದು ನಿಸರ್ಗದ ಒಂದು ನಿಯಮ. ಕೃಷಿಯಲ್ಲಿಯೂ ಕೀಟ ಬಾಧೆ ನಿವಾರಿಸಲು ರಾಸಾಯನಿಕ ಕ್ರಿಮಿನಾಶಕ ಬಳಸುತ್ತಾರೆ. ಕೀಟಗಳು ನಿವಾರಣೆಯಾಗುವ ಜತೆಗೆ ಕ್ರಿಮಿನಾಶಕದ ಅಂಶಗಳು ಆಹಾರಧಾನ್ಯದಲ್ಲಿಯೂ ಸೇರುತ್ತವೆ, ಅವುಗಳೇ ನಮ್ಮ ದೇಹಕ್ಕೂ ಸೇರಿ ಆರೋಗ್ಯವನ್ನೂ ಕೆಡಿಸುತ್ತವೆ ಎನ್ನುವುದು ವಾಸ್ತವ. ರಾಸಾಯನಿಕ ಕ್ರಿಮಿನಾಶಕದ ಬದಲು ಸಾವಯವ ಮಾದರಿ ಕ್ರಿಮಿನಾಶಕ ಬಳಸಿದರೆ ಇದರ ಅಡ್ಡ ಪರಿಣಾಮ ರಾಸಾಯನಿಕದಂತೆ ಇರುವುದಿಲ್ಲ. ಅದೇ ರೀತಿ ತೆಂಗಿನೆಣ್ಣೆಯಲ್ಲಿ ಹುರಿದ ತಿಂಡಿಗಳು ಹಾಳಾಗದೆ ಇರುವ ದಿನಗಳು ಕಡಿಮೆ ಇರಬಹುದು, ಇತರ ಕಲಬೆರಕೆ ಎಣ್ಣೆಗಳಲ್ಲಿ ಮಾಡಿದ ತಿನಿಸುಗಳು ಹೆಚ್ಚು ದಿನ ಹಾಳಾಗದೆ ಇರಬಹುದು. ಆರೋಗ್ಯದ ದೃಷ್ಟಿಯಿಂದ ತೆಂಗಿನೆಣ್ಣೆಯಲ್ಲಿ ಮಾಡಿದ ತಿನಿಸುಗಳೇ ಉತ್ತಮ ಎಂಬ ವಾಸ್ತವ ಅಂಶವನ್ನು ಅರಿತರೆ ಇತರ ಸಣ್ಣಪುಟ್ಟ ಸಮಸ್ಯೆಗಳು ನಗಣ್ಯವಾಗದೆ ಇರದು.
ಕರಾವಳಿಯ ಬಹುತೇಕ ಮನೆಗಳಲ್ಲಿ ತೆಂಗಿನ ಮರಗಳಿದ್ದರೂ ತೆಂಗಿನೆಣ್ಣೆ ತಿನಿಸುಗಳು ಕಡಿಮೆಯಾಗಲು ಜನಸಾಮಾನ್ಯರೇ ಮುಖ್ಯ ಕಾರಣ ಎನ್ನದೆ ವಿಧಿ ಇಲ್ಲ. ಜನರಿಗೆ ತಮ್ಮದೇ ಆರೋಗ್ಯ ಕಾಳಜಿ ಬೇಡವಾದರೆ ಇನ್ನಾರಿಗೆ ಬೇಕಾಗುತ್ತದೆ? ಗ್ರಾಹಕರು ತೆಂಗಿನೆಣ್ಣೆಯ ತಿನಿಸುಗಳನ್ನು ಹೆಚ್ಚು ಹೆಚ್ಚು ಪಡೆದುಕೊಂಡರೆ ಸಹಜವಾಗಿ ಮಾರುಕಟ್ಟೆಯಲ್ಲಿ ಇದೇ ಬಗೆಯ ತಿನಿಸುಗಳು ಲಗ್ಗೆ ಇರಿಸುತ್ತವೆ. ಗ್ರಾಹಕರು ಆರೋಗ್ಯರುಚಿಯನ್ನು ಕಾಣದೆ ಹೋದರೆ ಮಾರುಕಟ್ಟೆಯೂ, ಉತ್ಪಾದಕರೂ ಆರೋಗ್ಯರುಚಿಯನ್ನು ಸಹಜವಾಗಿ ಅವಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಚಿವೆ ಶೋಭಾ ಅವರ ಆರೋಗ್ಯಪೂರ್ಣ ಮಾತನ್ನು ನಮ್ಮ ಆರೋಗ್ಯದ ದೃಷ್ಟಿಯಿಂದ ಸತ್ಯಗೊಳಿಸಬೇಕಾಗಿದೆ. ಇಂದು ನಾವು ಬಳಸುವ ದಿನನಿತ್ಯದ ದೀಪದ ಎಣ್ಣೆ, ತುಪ್ಪ ಇತ್ಯಾದಿಗಳಿಗೂ ಈ ಮಾತನ್ನು ಅನ್ವಯಗೊಳಿಸಬೇಕಾಗಿದೆ.
-ಸಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.