ಕಲ್ಪವೃಕ್ಷ  ಸಂಶೋಧನೆ ಕೇಂದ್ರಕ್ಕೆ ಕಾಯಕಲ್ಪ ನಿರೀಕ್ಷೆ


Team Udayavani, Sep 25, 2021, 8:10 AM IST

ಕಲ್ಪವೃಕ್ಷ  ಸಂಶೋಧನೆ ಕೇಂದ್ರಕ್ಕೆ ಕಾಯಕಲ್ಪ ನಿರೀಕ್ಷೆ

ಕಾರ್ಕಳ: ಕಡಬ ತಾಲೂಕಿನ ಕಿದುವಿನಲ್ಲಿರುವ ಅಂತಾರಾಷ್ಟ್ರೀಯ ತೆಂಗು ಜೀನ್‌  ಬ್ಯಾಂಕ್‌ ದಕ್ಷಿಣ ಏಷ್ಯಾದ ಏಕೈಕ ತೆಂಗು ಅಭಿವೃದ್ಧಿ ಕೇಂದ್ರವಾಗಿದ್ದು, ಇದೀಗ ಇನ್ನಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ. ಸ್ಥಳೀಯ ಮೂಲದವರೇ ಆಗಿರುವ ಶೋಭಾ ಕರಂದ್ಲಾಜೆ ಅವರು ಕೇಂದ್ರದಲ್ಲಿ ರಾಜ್ಯ ಕೃಷಿ ಸಚಿವರಾಗಿರುವುದು ಇದಕ್ಕೆ ಕಾರಣ.

ತಮಿಳುನಾಡು, ಕೇರಳದ ಬಳಿಕ ಹೆಚ್ಚು ತೆಂಗು ಬೆಳೆಯುವ ರಾಜ್ಯ ಕರ್ನಾಟಕ. ಕರಾವಳಿ ಯಲ್ಲಂತೂ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಗಾರರಿದ್ದಾರೆ. ಕಿದು ಕೇಂದ್ರದಲ್ಲಿ ವಿಶ್ವದ 140 ತಳಿಗಳನ್ನು ಸಂರಕ್ಷಿಸಿರುವುದರ ಜತೆಗೆ ಉತ್ತಮ ತಳಿಗಳ ಅಭಿವೃದ್ಧಿ, ಸಸಿ, ಬೀಜ ವಿತರಣೆ ನಡೆಸಲಾಗುತ್ತಿದೆ.

ಇಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಅಡಿ ಯಲ್ಲಿ 1970ರಲ್ಲಿ ಆರಂಭಿಸಿ, ತೆಂಗು, ಅಡಿಕೆ ಮತ್ತು ಕೋಕೋಗಳ ತಳಿ ಉತ್ಪಾದನಾ ಕೇಂದ್ರ ಸ್ಥಾಪಿಸ ಲಾಯಿತು. 1972ರಲ್ಲಿ 121.41 ಹೆಕ್ಟೇರ್‌ (300 ಎಕರೆ) ಅರಣ್ಯ ಭೂಮಿ ಯನ್ನು ರಾಜ್ಯ ಸರಕಾರದಿಂದ 30 ವರ್ಷ ಅವಧಿಗೆ ಗುತ್ತಿಗೆಗೆ ಪಡೆದು ಬೀಜ ತೋಟ ವಾಗಿ ಅಭಿವೃದ್ಧಿ ಪಡಿಸಲಾಗಿತ್ತು. 1998 ರಲ್ಲಿ ಜೀನ್‌ ಬ್ಯಾಂಕ್‌ ಸ್ಥಾಪಿಸಲಾಯಿತು. 2001ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಿ ಕೊಕೊನೆಟ್‌ ಜೆನೆಟಿಕ್‌ ರಿಸೋರ್ಸ್‌ ನೆಟ್ವರ್ಕ್‌ (ಸಿಒಜಿಇಎನ್‌ಟಿ) ಆಗಿ ಅಭಿವೃದ್ಧಿ ಪಡಿಸಲಾಗಿದೆ.

ಲೀಸ್‌ ಅವಧಿ 2000ಕ್ಕೆ ಮುಗಿದಿದೆ. ಉನ್ನತ ಅಧಿಕಾರಿಗಳ ನಿಷ್ಕಾಳಜಿಯಿಂದ ಅರಣ್ಯ ಇಲಾಖೆ ಭೂಮಿಯನ್ನು ಮರಳಿ ನೀಡಬೇಕು ಅಥವಾ ಅನ್ಯ ಪ್ರದೇಶದಲ್ಲಿ ಅರಣ್ಯ ಬೆಳೆಯಲು 19.26 ಕೋ.ರೂ ನೀಡಬೇಕೆಂದು ಸೂಚಿಸಿತ್ತು. ನವೀಕರಿಸಲು ಅಧಿಕಾರಿಗಳು ಉತ್ಸಾಹದ ತೋರದ ಪರಿಣಾಮ ಕೇಂದ್ರವನ್ನು ಆಂಧ್ರ ಪ್ರದೇಶದ ಪೂರ್ವ ಗೋದಾವರಿಗೆ ಸ್ಥಳಾಂತರಿ ಸುವ ಪ್ರಯತ್ನಗಳೂ ನಡೆದಿದ್ದವು. ಸಕಾಲದಲ್ಲಿ ಉದಯವಾಣಿ ವರದಿ ಪ್ರಕಟಿಸಿ, ರೈತರ ಪರ ನಿಂತ ಪರಿಣಾಮ ಕೇಂದ್ರ ಸಚಿವರಾಗಿದ್ದ ಸದಾನಂದ ಗೌಡರು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದು ತಾತ್ಕಾಲಿಕ ತಡೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಪೂರಕವಾಗಿ ಹೋರಾಟಗಳೂ ನಡೆದಿದ್ದವು. ಗುತ್ತಿಗೆ ಒಪ್ಪಂದ ನವೀಕರಣ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಆಗಬೇಕಿರುವುದೇನು?:

ಭೂಗುತ್ತಿಗೆ ನವೀಕರಿಸುವುದು, ಎಫ್ಪಿಎ ಮೊತ್ತ ವಿನಾಯಿತಿ ಅಥವಾ ಸರಕಾರದಿಂದಲೇ ಭರಿಸುವುದು. ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದಂತೆ ಅರಣ್ಯ ಬೆಳೆಸುವುದರಿಂದ ಪರಿಸರಕ್ಕೆ ಆಗುವ ಲಾಭಕ್ಕೆ ಸರಿಸಮನಾಗಿ ಲೀಸ್‌ಗೆ ಪಡೆದುಕೊಂಡ ಸಂಸ್ಥೆ ಸಮನಾಂತರ ಉದ್ದೇಶಕ್ಕೆ ಆ ಭೂಮಿಯನ್ನು ಬಳಸುತ್ತಿದ್ದರೆ ಅಂತಹ ಭೂಮಿಯನ್ನು ಒಪ್ಪಂದದಲ್ಲಿ ನವೀಕರಿಸಲು ಅವಕಾಶವಿದೆ ಎಂಬ ಅಂಶದ ಜತೆಗೆ ರಿಯಾಯಿತಿಗೆ ಸುಪ್ರೀಂ ಕೊರ್ಟ್‌ ನೇಮಿಸಿದ ಎನ್‌ಪವರ್‌ವೆುಂಟ್‌ ಸಮಿತಿಗೆ ಮನದಟ್ಟು ಮಾಡಬೇಕಿದೆ. ಕೇಂದ್ರವು ಸಂಶೋಧನೆ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ. ಪರಿಸರಕ್ಕೆ ಪೂರಕವಾಗಿದೆ. ಕೇಂದ್ರವು ತೆಂಗು, ಅಡಿಕೆ ಮತ್ತು ಕೋಕೊ ಗುಣಮಟ್ಟದ ಅಗತ್ಯಗಳನ್ನು ಪೂರೈಸುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಪ್ರತಿವರ್ಷ ನೆಡುತೋಪುಗಳಿಗೆ ಬೀಜಗಳನ್ನು ಖರೀದಿಸುತ್ತಾರೆ. ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರು ಕೇಂದ್ರದ ಪ್ರಧಾನ ಗ್ರಾಹಕರಾಗಿದ್ದಾರೆ.

ಪ್ರಯೋಜನಗಳೇನು? :

ರಾಜ್ಯದ ವಿವಿಧ‌ ರೈತ ಗುಂಪುಗಳಿಗೆ ತರಬೇತಿ ನೀಡಲು ಸಂಸ್ಥೆ ಸಹಾಯಕವಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ರೈತ ಗುಂಪು ಕೇಂದ್ರಕ್ಕೆ ಭೇಟಿ ನೀಡುತ್ತಿದೆ. ವಿವಿಧ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅಗತ್ಯಗಳಿಗೆ ಕೇಂದ್ರವನ್ನು ಅವಲಂಬಿಸಿ¨ªಾರೆ. ದ.ಕ. ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆ ಗಳ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕ ಅಗತ್ಯಗಳಿಗಾಗಿ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಬಿಎಸ್ಸಿ (ಅಗ್ರಿಕಲ್ಚರ್‌), ಎಂಎಸ್ಸಿ (ಅಗ್ರಿಕಲ್ಚರ್‌) ಮತ್ತು ಕೃಷಿ ಕ್ಷೇತ್ರದ ಸಂಶೋಧನಾ ವಿದ್ಯಾರ್ಥಿಗಳು ಕೃಷಿ ಅಧ್ಯಯನಕ್ಕೆ ಭೇಟಿ ನೀಡುತ್ತಿದ್ದಾರೆ.

ಹೊಸದಿಲ್ಲಿಯ ಐಸಿಎಆರ್‌ನ ಇತ್ತೀಚಿನ ವರದಿಗಳ ಪ್ರಕಾರ, ದೇಶದ 120 ಐಸಿಎಆರ್‌ ಸಂಶೋಧನಾ ಸಂಸ್ಥೆಗಳಲ್ಲಿ ಸಿಪಿಸಿಆರ್‌ಐ 3ನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸಂಸ್ಥೆಗಳ ಪ್ರಾದೇಶಿಕ / ಉಪ ಕೇಂದ್ರಗಳಲ್ಲಿ ಆದಾಯ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಸ್ಥಳಿಯರಿಗೆ ಉದ್ಯೋಗ ಒದಗಿಸುತ್ತಿದೆ.

ತೆಂಗಿನ ಮರಗಳು:

ರಾಜ್ಯದಲ್ಲಿ :  6.60 ಕೋಟಿಗೂ ಅಧಿಕ

.. ಜಿಲ್ಲೆ:  40 ಲಕ್ಷ

ಉಡುಪಿ ಜಿಲ್ಲೆ :  35.50 ಲಕ್ಷ

ತೆಂಗು ಬೆಳೆಗಾರರು:

.. ಜಿಲ್ಲೆ :  ಸುಮಾರು 7 ಲಕ್ಷ

ಉಡುಪಿ ಜಿಲ್ಲೆ :  ಸುಮಾರು 6 ಲಕ್ಷ

ತೆಂಗು ಬೆಳೆಯುವ ಪ್ರದೇಶ:

ರಾಜ್ಯದಲ್ಲಿ :  4,40,514 ಹೆಕ್ಟೇರ್‌

ವಾರ್ಷಿಕ ತೆಂಗು ಬೆಳೆ

ರಾಜ್ಯದಲ್ಲಿ :  217.6 ಕೋಟಿ

ಸಿಪಿಸಿಆರ್‌ಐ ಕಿದು ಕೇಂದ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುವೆ. ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಿ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ.ಶೋಭಾ ಕರಂದ್ಲಾಜೆ,  ಕೇಂದ್ರ ಕೃಷಿ ಸಚಿವರು 

-ಬಾಲಕೃಷ್ಣ  ಭೀಮಗುಳಿ

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.