7.50 ಲಕ್ಷದವರೆಗೂ ಕೊಲಾಟ್ರಲ್ ಫ್ರೀ ಶೈಕ್ಷಣಿಕ ಸಾಲ ಸೌಲಭ್ಯ
Team Udayavani, Jul 27, 2023, 7:07 AM IST
ಉಡುಪಿ: ವೈದ್ಯ, ಎಂಜಿನಿಯರಿಂಗ್ ಸೇರಿದಂತೆ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಅರ್ಹ ವಿದ್ಯಾರ್ಥಿಗಳು ಯಾವುದೇ ಅಡಮಾನ (ಕೊಲಾಟ್ರಲ್) ಇಲ್ಲದೆ 7.50 ಲಕ್ಷ ರೂ. ವರೆಗೂ ಶೈಕ್ಷಣಿಕ ಸಾಲ ಪಡೆಯಲು ಅವಕಾಶವಿದೆ.
ಕೋರ್ಸ್ ಅವಧಿ ಹಾಗೂ ಅನಂತರದ ಒಂದು ವರ್ಷ ಬಡ್ಡಿಯನ್ನು ಸಬ್ಸಿಡಿ ರೂಪದಲ್ಲಿ ಕೇಂದ್ರ ಸರಕಾರವೇ ಪಾವತಿಸಲಿದೆ ಎಂದು ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ (ಕೆನರಾ ಬ್ಯಾಂಕ್) ಮ್ಯಾನೇಜರ್ ಪಿ.ಎಂ. ಪಿಂಜಾರ, ರಿಟೈಲ್ ಅಸೆಟ್ ಹಬ್ ವಿಭಾಗದ ಡಿವಿಜನಲ್ ಮ್ಯಾನೇಜರ್ ಉಮೇಶ್ ಕೆ.ಆರ್., ಸೀನಿಯರ್ ಮ್ಯಾನೇಜರ್ ಸೂರಜ್ ಆರ್. ಉಪ್ಪೂರು ತಿಳಿಸಿದರು.
ಶೈಕ್ಷಣಿಕ ಸಾಲ ಸೌಲಭ್ಯ ಕುರಿತು ಉದಯವಾಣಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್‌ಇನ್‌ಗೆ ವಿವಿಧ ಪ್ರದೇಶದಿಂದ ಅನೇಕರು ಕರೆ ಮಾಡಿದ್ದರು.
7.5 ಲಕ್ಷ ರೂ. ಸಾಲ
ವಿದ್ಯಾರ್ಥಿಯ ಕುಟುಂಬದ ಆದಾಯ 4.50 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ ಆದಾಯ ಪ್ರಮಾಣ ಪತ್ರ ಸಹಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶೈಕ್ಷಣಿಕ ಸಾಲ ಪಡೆಯಬಹುದು. ಈ ಸೌಲಭ್ಯ ಯಾವುದೇ ಪದವಿ, ಸ್ನಾತ ಕೋತ್ತರ ಪದವಿ ಅಥವಾ ತಾಂತ್ರಿಕ ಕೋರ್ಸ್‌ಗಳಿಗೆ (ಸರ್ಟಿಫಿಕೆಟ್ ಕೋರ್ಸ್ ಹೊರತುಪಡಿಸಿ) ಅನ್ವಯ.
ಅಗತ್ಯ ದಾಖಲೆ
ವಿದ್ಯಾರ್ಥಿಯ ಆಧಾರ್, ಪಾನ್ ನಂಬರ್, ಕಾಲೇಜು ಅಥವಾ ವಿ.ವಿ.ಗೆ ಶುಲ್ಕ ಪಾವತಿಸಿದ ರಶೀದಿ ನೀಡಬೇಕು. ಟ್ಯೂಷನ್ ಫೀ, ಎಕ್ಸಾಂ ಫೀ, ಲ್ಯಾಬ್ ಫೀ, ಹಾಸ್ಟೆಲ್ ಫೀ, ವ್ಯಾನ್ ಫೀ (ಸಾರಿಗೆ ವ್ಯವಸ್ಥೆ) ಎಲ್ಲವೂ ಈ ಸಾಲದ ವ್ಯಾಪ್ತಿಗೆ ಪರಿಗಣಿತವಾಗುತ್ತದೆ.
ಪಾನ್ ಇಲ್ಲದಿದ್ದರೆ…
ಪಾನ್ ಇಲ್ಲದ ವಿದ್ಯಾರ್ಥಿ ಅಥವಾ 18 ವರ್ಷ ತುಂಬಿರದ ವಿದ್ಯಾರ್ಥಿಯೂ ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ತತ್‌ಕ್ಷಣ ಅಲ್ಲಿಯೇ ಪಡೆಯಲು ಅವಕಾಶ ಇರುತ್ತದೆ.
ಬಡ್ಡಿ ದರ ಹೇಗೆ?
ಕೋರ್ಸ್ ಪೂರ್ಣಗೊಂಡು ಒಂದು ವರ್ಷದೊಳಗೆ ಉದ್ಯೋಗ ದೊರೆತರೆ ಆಗ ಬಡ್ಡಿ ಪಾವತಿಸಬೇಕು. ಒಂದು ವರ್ಷದ ಬಳಿಕವೂ ಉದ್ಯೋಗ ಸಿಗದಿದ್ದರೂ ಬಡ್ಡಿ ಪಾವತಿಸಬೇಕು. ಬಡ್ಡಿ ದರವು ಆಯಾ ಬ್ಯಾಂಕ್‌ಗಳ ನೀತಿ ಅನುಸಾರ ಇರಲಿದೆ.
ದ್ವಿ-ಪದವಿಗೂ ಅನುಕೂಲ
ಕೇಂದ್ರ ಸರಕಾರ ಹಾಗೂ ಯುಜಿಸಿ ಏಕಕಾಲದಲ್ಲಿ ಎರಡು ಪದವಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಈ ಎರಡು ಕೋರ್ಸ್ ಗಳಿಗೂ ಪ್ರತ್ಯೇಕ ದಾಖಲೆ ಸಲ್ಲಿಸಿ ಸಾಲ ಪಡೆಯಬಹುದು. ಒಂದು ಪದವಿ, ಮತ್ತೂಂದು ಸರ್ಟಿಫಿಕೇಟ್ ಕೋರ್ಸ್ ಆಗಿದ್ದರೆ ಪದವಿಗೆ ಮಾತ್ರ ಸಾಲ ಲಭ್ಯ. ಪಿಎಚ್.ಡಿ ಅಥವಾ ಉನ್ನತ ಸಂಶೋಧನೆಗೆ ನಿರ್ದಿಷ್ಟ ವಿ.ವಿ.ಅಥವಾ ಕಾಲೇಜುಗಳಿಗೆ ಆಯ್ಕೆಯಾದರೆ ಅದಕ್ಕೂ ಸಾಲ ಲಭ್ಯ ವಿದೆ. ಐಐಟಿ, ಐಐಎಸ್ಸಿ, ಐಐಎಂ, ಎನ್‌ಐಟಿಕೆ ಸೇರಿದಂತೆ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಬಯಸು ವವರಿಗೆ ಈ ಸೌಲಭ್ಯ ಲಭ್ಯ.
ಮ್ಯಾನೇಜ್‌ಮೆಂಟ್ ಸೀಟಿನ ಕಥೆ
ನೀಟ್, ಸಿಇಟಿ ಅಥವಾ ಸರಕಾರ/ ಸರಕಾರದ ಅಧೀನ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತಮ್ಮ ಇಚ್ಛೆಯ ಕೋರ್ಸ್ ಲಭ್ಯ ವಾಗ ದಿದ್ದಾಗ ಕಾಲೇಜುಗಳ ಮ್ಯಾನೇಜ್‌ಮೆಂಟ್ ಕೋಟಾದಡಿ ಸಾಲ ಪಡೆಯ ಬಹುದು. ಆದರೆ ಈ ಸೌಲಭ್ಯ ನೇರವಾಗಿ ಮ್ಯಾನೇಜ್‌ಮೆಂಟ್ ಸೀಟ್ ಪಡೆಯುವವರಿಗೆ ಅನ್ವಯವಾಗದು.
ಹಂಚಿಕೆ ವಿವರ
2022-23ರಲ್ಲಿ ಉಡುಪಿ ಜಿಲ್ಲೆಯಲ್ಲಿ ಆದ್ಯತ ವಿಭಾಗದಲ್ಲಿ 100 ಕೋ.ರೂ. ಆದ್ಯತೇತರ ವಿಭಾಗದಲ್ಲಿ 41 ಕೋ.ರೂ. ಸೇರಿ 141 ಕೋ.ರೂ. ಸಾಲ ಒದಗಿಸಲಾಗಿದೆ. 2023-24ನೇ ಸಾಲಿಗೆ 194 ಕೋ.ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ.
ವಿದೇಶದಲ್ಲಿ ಶಿಕ್ಷಣ
ವಿದೇಶದಲ್ಲಿ ಶಿಕ್ಷಣ ಪಡೆಯಲೂ ಸಾಲ ಸೌಲಭ್ಯವಿದೆ. 7.50 ಲಕ್ಷಕ್ಕಿಂತಲೂ ಹೆಚ್ಚಿನ ಸಾಲ ಒಂದು ಕೋಟಿ ವರೆಗೂ ಲಭ್ಯವಿದೆ. ಆದರೆ ಅಷ್ಟಕ್ಕೂ ಅಡಮಾನ (ಕೊಲಾಟ್ರಲ್) ಭದ್ರತೆ ನೀಡಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿಯಲ್ಲಿ ಅಡಮಾನಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ್ದಾಗ ಹತ್ತಿರದ ಸಂಬಂಧಿ ಅಥವಾ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಸೊತ್ತುಗಳೂ ಸ್ವೀಕಾರ್ಹ. ಪರಿವರ್ತಿತ ಭೂಮಿ, ಕೃಷಿ ಭೂಮಿ, ಸ್ವಂತ ಕಟ್ಟಡ, ವಿಮ ಪಾಲಿಸಿ ಇತ್ಯಾದಿ ಪರಿಗಣಿತವಾಗುತ್ತದೆ.
ಸ್ಟಾರ್ಟ್‌ಅಪ್‌ಗೆ ಅನುಕೂಲ
ಕೋರ್ಸ್ ಅವಧಿ ಮುಗಿಯುತ್ತಿದ್ದಂತೆ ಸ್ಟಾರ್ಟ್‌ಅಪ್ ಮಾಡುವವರಿಗೆ ಎರಡು ವರ್ಷದ ಬಡ್ಡಿಯನ್ನು ಕೇಂದ್ರ ಸರಕಾರವೇ ಭರಿಸುತ್ತದೆ. ಈ ಅವಧಿಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯಬಹುದು.
ವಿದೇಶದಲ್ಲಿ ಶಿಕ್ಷಣ
ವಿದೇಶದಲ್ಲಿ ಶಿಕ್ಷಣ ಪಡೆಯಲೂ ಸಾಲ ಸೌಲಭ್ಯವಿದೆ. 7.50 ಲಕ್ಷಕ್ಕಿಂತಲೂ ಹೆಚ್ಚಿನ ಸಾಲ ಒಂದು ಕೋಟಿ ವರೆಗೂ ಲಭ್ಯವಿದೆ. ಆದರೆ ಅಷ್ಟಕ್ಕೂ ಅಡಮಾನ (ಕೊಲಾಟ್ರಲ್) ಭದ್ರತೆ ನೀಡಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿಯಲ್ಲಿ ಅಡಮಾನಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ್ದಾಗ ಹತ್ತಿರದ ಸಂಬಂಧಿ ಅಥವಾ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಸೊತ್ತುಗಳೂ ಸ್ವೀಕಾರ್ಹ. ಪರಿವರ್ತಿತ ಭೂಮಿ, ಕೃಷಿ ಭೂಮಿ, ಸ್ವಂತ ಕಟ್ಟಡ, ವಿಮ ಪಾಲಿಸಿ ಇತ್ಯಾದಿ ಪರಿಗಣಿತವಾಗುತ್ತದೆ.
ಸ್ಟಾರ್ಟ್‌ಅಪ್‌ಗೆ ಅನುಕೂಲ
ಕೋರ್ಸ್ ಅವಧಿ ಮುಗಿಯುತ್ತಿದ್ದಂತೆ ಸ್ಟಾರ್ಟ್‌ಅಪ್ ಮಾಡುವವರಿಗೆ ಎರಡು ವರ್ಷದ ಬಡ್ಡಿಯನ್ನು ಕೇಂದ್ರ ಸರಕಾರವೇ ಭರಿಸುತ್ತದೆ. ಈ ಅವಧಿಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಕುಟುಂಬದ ವಾರ್ಷಿಕ ಆದಾಯ (ಆದಾಯ ಪ್ರಮಾಣ ಪತ್ರ ಸಹಿತ) 4.50 ಲಕ್ಷಕ್ಕಿಂತ ಕಡಿಮೆಯಿದ್ದಲ್ಲಿ https://www.jansamarth.in/ ಹಾಗೂ 4.50ಕ್ಕಿಂತ ಹೆಚ್ಚಿದ್ದಲ್ಲಿ https://www.vidyalakshmi.co.in/ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಸಾಲ ಯೋಜನೆ ಸಂಬಂಧಿಸಿ ಗೊಂದಲ, ದಾಖಲಾತಿ ಸಮಸ್ಯೆ, ಬ್ಯಾಂಕ್‌ಗಳಲ್ಲಿ ಸರಿಯಾದ ಸ್ಪಂದನೆ ಸಿಗದೆ ಇದ್ದರೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು 0820-2521685ಗೆ ಅಥವಾ ಉಡುಪಿ ನಗರ ಕೆಎಂ ಮಾರ್ಗ, ಕೆಥೋಲಿಕ್ ಸೆಂಟರ್, ಸಿಂಡಿಕೇಟ್ ಟವರ್‌ನಲ್ಲಿರುವ ಬ್ಯಾಂಕ್ ಕಚೇರಿಗೆ ಭೇಟಿ ನೀಡಬಹುದು.
ಪಾಲಕರ ಸಿಬಿಲ್ ಅಂಕ ಪರಿಗಣಿಸುವಂತಿಲ್ಲ
ಕೆಲವು ಬ್ಯಾಂಕ್ ಗಳಲ್ಲಿ ಕೆಲವರು ಸರಿಯಾಗಿ ಹಿಂದಿನ ಸಾಲ ಮರು ಪಾವತಿ ಮಾಡಿರಲಾರರು. ಹಾಗೆಂದು ಅವರ ಮಕ್ಕಳು ಶೈಕ್ಷಣಿಕ ಸಾಲಕ್ಕೆ ಅರ್ಜಿ ಹಾಕಿದರೆ ತಂದೆ ತಾಯಿಗಳ ಸಿಬಿಲ್ ಸ್ಕೋರ್ ಆಧರಿಸಿ ನಿರಾಕರಿಸುವಂತಿಲ್ಲ. ಈ ಬಗ್ಗೆ ಇನ್ನೊಮ್ಮೆ ಎಲ್ಲ ಬ್ಯಾಂಕ್‌ಗಳಿಗೆ ಸ್ಪಷ್ಟ ಸೂಚನೆ ನೀಡಲಾಗುವುದು.
ಸಿಬಿಲ್ ಸ್ಕೋರ್ ಆತಂಕ ಬೇಡ
ವೈಯಕ್ತಿಕ ಸಾಲ ಸೌಲಭ್ಯ ಸಹಿತ ಸರಕಾರದ ಯೋಜನೆಗಳಿಂದ ಸಾಲವನ್ನು ಪಡೆದರೆ ಪ್ರತೀ ತಿಂಗಳು ಇಎಂಐ ಪಾವತಿ ಮಾಡುವುದರಿಂದ ಸಿಬಿಲ್ ಸ್ಕೋರ್ ಉತ್ತಮವಾಗಿರುತ್ತದೆ. ಒಂದು ವೇಳೆ ಒಂದು ತಿಂಗಳು ವಿಳಂಬವಾದಲ್ಲಿ ಅದು ಕಡಿಮೆಯಾಗುತ್ತದೆ. ಮತ್ತೆ ಪ್ರತೀ ತಿಂಗಳ ಇಎಂಐ ಪಾವತಿ ಸುಧಾರಣೆಯಾದಲ್ಲಿ ತಿಂಗಳೊಳಗೆ ಸ್ಕೋರ್ ಉತ್ತಮವಾಗುತ್ತದೆ. ಈ ಹಿಂದೆ ಸಿಬಿಲ್ ಸ್ಕೋರ್ ಸರಿಯಾಗಲು ಮೂರು ತಿಂಗಳು ತೆಗೆದುಕೊಳ್ಳುತ್ತಿತ್ತು. ಸಿಬಿಲ್ ಸ್ಕೋರ್ 750ಕ್ಕಿಂತ ಮೇಲಿದ್ದರೆ ಉತ್ತಮ. 700ಕ್ಕಿಂತ ಕಡಿಮೆಯಾದಲ್ಲಿ ಸಮಸ್ಯೆಯಾಗಲಿದೆ.
ಅರಿವು ಯೋಜನೆ
ರಾಜ್ಯ ಸರಕಾರ ಅರಿವು ಯೋಜನೆಗೆ ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿದೆ. ಸಾಲ ಸೌಲಭ್ಯ ಮಂಜೂರಾತಿ ಮಾಹಿತಿ ಪಡೆದವರಿಗೆ ಸೌಲಭ್ಯ ಸಿಗಲಿದೆ.
ಕರೆ ಮಾಡಿದವರು …
ಭದ್ರಾವತಿ ಗಣೇಶ್, ಕೊಪ್ಪದ ಸೌಮ್ಯಾ, ಬೈಕಾಡಿಯ ಸುರೇಶ್ ಕುಂದರ್, ಮಲ್ಪೆಯ ವಿಕ್ಟೋರಿಯಾ, ಬ್ರಹ್ಮಾವರದಿಂದ ರತ್ನಾ, ಉಡುಪಿಯಿಂದ ಸುಮಿತ್ರಾ, ಹರ್ಷಾ, ಸಚಿನ್, ರಾಮಚಂದ್ರ ಆಚಾರ್ಯ, ಶಾರದಾ, ಅಶ್ರಫ್, ಅಶೋಕ, ಕುಂದಾಪುರದಿಂದ ಶೇಖರ್, ಹೃತಿಕ್, ಶಿರ್ವದ ಸದಾನಂದ ಶೆಟ್ಟಿ, ಸಾಸ್ತಾನದಿಂದ ರೋಹನ್, ರಾಮಕೃಷ್ಣ ದೇವಾಡಿಗ, ಸಂತೆಕಟ್ಟೆಯ ಗೋಪಾಲ ಶೆಟ್ಟಿ, ಹಾವಂಜೆಯ ಮಿಥುನ್, ಬಂಟಕಲ್ಲು ಎಂಜಿನಿಯರಿಂಗ್ ಕಾಲೇಜಿನ ಡಾ| ಮಂಜುನಾಥ್, ಬೆಳ್ಮಣ್‌ನಿಂದ ಮಲ್ಲಿಕಾ ಶೆಟ್ಟಿ, ಪರೀಕ್ಷಿತಾ, ಹೆಮ್ಮಾಡಿಯ ರಾಘವೇಂದ್ರ, ಕೊಕ್ಕರ್ಣೆಯ ಗೋವಿಂದ ಶೆಟ್ಟಿ, ಹೆಬ್ರಿಯ ರಕ್ಷಿತ್ ಮೊದಲಾದವರು ಕರೆ ಮಾಡಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.