“ನೀ ಒಬ್ಬಂಟಿ ಅಲ್ಲ’ ಜಾಗೃತಿ ಸಾರುವ ಮರಳು ಶಿಲ್ಪ
ಮದ್ಯ ವ್ಯಸನಿಗಳ ಮಕ್ಕಳಿಗೆ ಸಾಂತ್ವನ
Team Udayavani, Feb 10, 2020, 7:00 AM IST
ಮಲ್ಪೆ: ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಅವರ ಬದುಕಿಗೆ ಭರವಸೆ ನೀಡುವ “ನೀ ಒಬ್ಬಂಟಿ ಅಲ್ಲ’ ಎನ್ನುವ ದೃಶ್ಯದ ಮೂಲಕ ಜನಜಾಗೃತಿ ಸಾರುವ ಮರಳು ಶಿಲ್ಪ ರಚನೆ ರವಿವಾರ ಮಲ್ಪೆ ಬೀಚ್‌ನಲ್ಲಿ ನಡೆಯಿತು.
ಉಡುಪಿಯ ಡಾ| ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಉಡುಪಿ-ಮಣಿಪಾಲ, ಐಎಂಎ ಉಡುಪಿ ಕರಾವಳಿ ಸಹಯೋಗದಲ್ಲಿ ಆಯೋಜಿಸಿದ ಈ ಮರಳು ಶಿಲ್ಪ ಸುಮಾರು ಹತ್ತು ಅಡಿ ಅಗಲ ಮತ್ತು ನಾಲ್ಕೂವರೆ ಅಡಿ ಎತ್ತರವಿದ್ದು, ಚೂರಾದ ಮದ್ಯದ ಬಾಟಲಿಯಂತೆ ದುಃಖತಪ್ತ ಮಕ್ಕಳಿಗೆ ಭರವಸೆಯ ಸಾಂತ್ವನ ಹೇಳುವ ಎರಡು ಕೈಗಳನ್ನು ಮರಳಿನಲ್ಲಿ ಮೂಡಿಸಲಾಗಿತ್ತು.
ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ ನೇತೃತ್ವದಲ್ಲಿ ರಾಘವೇಂದ್ರ, ಜೈ ನೇರಳೆಕಟ್ಟೆ ಮರಳು ಶಿಲ್ಪವನ್ನು ನಿರ್ಮಿಸಿದ್ದಾರೆ.
ಶಿಲ್ಪವನ್ನು ಮಾನವ ಹಕ್ಕುಗಳ ಹೋರಾಟಗಾರ ರವೀಂದ್ರನಾಥ್ ಶಾನುಭಾಗ್ ಉದ್ಘಾಟಿಸಿದರು. ಬಾಳಿಗಆಸ್ಪತ್ರೆಯ ಡಾ| ವಿರೂಪಾಕ್ಷ ದೇವರಮನೆ, ರೋಟರಿ ಕ್ಲಬ್ ಉಡುಪಿ-ಮಣಿಪಾಲದ ರಾಜವರ್ಮ ಅಡಿಗ, ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.