ಒಂದು ವಾರದೊಳಗೆ ಸಂಸದರ ಕಚೇರಿ ಆರಂಭ: ಬಿ.ವೈ.ರಾಘವೇಂದ್ರ
Team Udayavani, Jun 27, 2019, 5:15 AM IST
ಬೈಂದೂರು: ಕೇಂದ್ರ ಸರಕಾರ ರೈತರಿಗೆ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೆಲವು ಯೋಜನೆಗಳಿಗೆ ಅಧಿಕಾರಿಗಳ ಸಮರ್ಪಕ ಸ್ಪಂದನೆಯಿಲ್ಲದೆ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರಕಾರ ಪ್ರತಿಯೊಂದು ಕ್ರಿಯಾ ಯೋಜನೆಗಳು ಸಮರ್ಪಕವಾಗಿ ಜನರಿಗೆ ದೊರೆಯಬೇಕು. ಸಬೂಬುಗಳನ್ನು ಹೇಳಿಕೊಂಡು ಕೆಲಸದ ಗತಿಯನ್ನು ಕುಂಠಿತಗೊಳಿಸದಿರಿ ಎಂದು ಅಧಿಕಾರಿ ಗಳಿಗೆ ಕಿವಿಮಾತು ಹೇಳಿದರು.
ಕುಡಿಯುವ ನೀರಿನ ಅಭಾವ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಾಡುತ್ತಿದೆ. ಶಾಶ್ವತ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಶೀಘ್ರ ಕಾಮಗಾರಿ ನಡೆಸಲು ಅಧಿಕಾರಿಗಳು ಪ್ರಯತ್ನಿಸಿದಾಗ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದರು.
ಇದಕ್ಕೆ ಉತ್ತರಿಸಿದ ಎಂಜಿನಿಯರ್ ರಾಜ್‌ಕುಮಾರ್ ಈಗಾಗಲೇ 9 ಕಡೆ ಬಹುಗ್ರಾಮ ಯೋಜನೆಯ ಪ್ರಸ್ತಾವ ನೀಡಲಾಗಿದೆ. ಪ್ರಸ್ತುತ ಈ ಯೋಜನೆ ಜಲಧಾರೆ ಯೋಜನೆ ಎಂದು ಹೆಸರು ಬದಲಾಗಿದೆ. ಬೈಂದೂರು ಕ್ಷೇತ್ರದಲ್ಲಿ ನಾಡ ಗ್ರಾಮದಲ್ಲಿ ಮಾತ್ರ ಮಂಜೂರಾಗಿದೆ ಎಂದರು.
ತಹಶೀಲ್ದಾರ್ ಬಿ.ಪಿ ಪೂಜಾರ್ ಕಂದಾಯ ಮಾಹಿತಿ ನೀಡಿ 94/ಸಿ ಒಟ್ಟು 4,000 ಅರ್ಜಿಗಳು ಬಂದಿದ್ದು 1,200 ಅರ್ಜಿ ಬಾಕಿ ಇವೆ.
ತಾಲೂಕಿನಲ್ಲಿ ಒಟ್ಟು 18 ಗ್ರಾಮಗಳಲ್ಲಿ ನಂದನವನ ಮತ್ತು ಬಡಾಕೆರೆಯಲ್ಲಿ ಸ್ಮಶಾನಗಳಿಗೆ ಜಾಗ ನಿಗದಿಯಾಗಿಲ್ಲ. ಉಳಿದ ಕಡೆ ಸ್ಥಳ ಮೀಸಲಿರಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಒಟ್ಟು 25,000 ರೈತರಿದ್ದಾರೆ. ಅದರಲ್ಲಿ 5,000 ಡಾಟಾ ಎಂಟ್ರಿ ಮುಗಿದಿದೆ ಎಂದರು.
ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದೆ ಎಂದಾಗ ಸಂಸದರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ನಿಗದಿತ ದಿನದೊಳಗೆ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
ಕೊಲ್ಲೂರು ಪ್ರವಾಸಿ ಮಂದಿರವನ್ನು ಆಧುನಿಕ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಲು ಅಧಿಕಾರಿಗಳಿಗೆ ತಿಳಿಸಿದರು.
ಹೆದ್ದಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಂಸದರು:
ಬೈಂದೂರು ಕ್ಷೇತ್ರದಲ್ಲಿ ಬಹುತೇಕ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಸಮಸ್ಯೆ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಹೆದ್ದಾರಿ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದಿರುವುದನ್ನು ನಾನು ಸಹಿಸುವುದಿಲ್ಲ. ಕಳೆದ ಬಾರಿ ಸಂಸದರ ಸಭೆಯಲ್ಲಿ ನಡೆದ ಯಾವುದೇ ಬದಲಾವಣೆಗೆ ಈ ವರೆಗೆ ಚಾಲನೆ ನೀಡಿಲ್ಲ.ಶಿರೂರಿನಲ್ಲಿ ಟೋಲ್ಗೇಟ್ ಆರಂಭ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಸರ್ವಿಸ್ ರೋಡ್‌ಗಳನ್ನು ನಿರ್ಮಿಸಿಲ್ಲ. ಹೀಗಾಗಿ ಸರ್ವಿಸ್ ರೋಡ್‌ಗಳನ್ನು ಪೂರ್ಣಗೊಳಿಸದೆ ಟೋಲ್ ಪ್ರಕ್ರಿಯೇ ಆರಂಭಿಸಿದರೆ ಜನರ ಬೆಂಬಲಕ್ಕೆ ನಿಂತು ಹೋರಾಡಬೇಕಾಗುತ್ತದೆ. ಟೋಲ್ ಸುತ್ತ ಸ್ಥಳೀಯರಿಗೆ ರಿಯಾಯಿತಿ ಕೊಡುವ ಕುರಿತು ಬೇಡಿಕೆ ಬಂದಿದ್ದು ಮುಂಚಿತವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ,ರಾಜ್ಯದ ವಿಪಕ್ಷ ನಾಯಕರ ಆಪ್ತ ಕಾರ್ಯದರ್ಶಿ ರಾಜಪ್ಪ, ಕುಂದಾಪುರ ಡಿ.ವೈ.ಎಸ್.ಪಿ. ಬಿ.ಪಿ. ದಿನೇಶ್ ಕುಮಾರ್, ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.