ಶಿರೂರು ಟೋಲ್‌ ಆರಂಭಕ್ಕೆ ಕಂಪೆನಿಯಿಂದ ತರಾತುರಿ ಸಿದ್ಧತೆ

ಹೆದ್ದಾರಿ ಹೋರಾಟ ಸಮಿತಿಯಿಂದ ಕಾರ್ಡ್‌ ಅಭಿಯಾನ, ಬೃಹತ್‌ ಪ್ರತಿಭಟನೆ ತಯಾರಿ

Team Udayavani, Dec 20, 2019, 5:55 AM IST

TOLL-BAINDOOR-1

ಬೈಂದೂರು: ಶಿರೂರು ಗಡಿಭಾಗದಲ್ಲಿ ಸ್ಥಾಪಿಸಿರುವ ಉಡುಪಿ ಜಿಲ್ಲೆ ಚತುಷ್ಪಥ ಹೆದ್ದಾರಿ ಟೋಲ್‌ಗೇಟ್‌ ಆರಂಭಕ್ಕೆ ತರಾತುರಿಯ ತಯಾರಿ ನಡೆಯುತ್ತಿದೆ. ಟೋಲ್‌ ಆರಂಭಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಂಡು ಸದ‌Âದ ಮಟ್ಟಿಗೆ ತಾತ್ಕಾಲಿಕವಾಗಿ ಆರಂಭಿಸಿ ಬಳಿಕ ಶಾಶ್ವತಗೊಳಿಸಬೇಕೆನ್ನುವ ತಯಾರಿಯನ್ನು ಐ.ಆರ್‌.ಬಿ. ಕಂಪೆನಿ ನಡೆಸುತ್ತಿದ್ದು ಹೆದ್ದಾರಿ ಹೋರಾಟ ಸಮಿತಿ ಸಾರ್ವಜನಿಕರ ಸಹಕಾರದೊಂದಿಗೆ ಬೃಹತ್‌ ಹೋರಾಟಕ್ಕೆ ಸಿದ್ದತೆ ನಡೆಯುತ್ತಿದೆ.

ಕಾರ್ಡ್‌ ಅಭಿಯಾನ, ಪ್ರತಿಭಟನೆಗೆ ಸಿದ್ಧತೆ
ಕಳೆದ ಒಂದೂವರೆ ವರ್ಷದಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಕಾಮಗಾರಿ ನಡೆಸುತ್ತಿರುವ ಕಂಪೆನಿ ಜನರ ಬೇಡಿಕೆಗಳಿಗೆ ಕ್ಯಾರೇ ಎಂದಿಲ್ಲ.ಮಾತ್ರವಲ್ಲದೆ ಪ್ರತಿ ಗ್ರಾಮ ಪಂಚಾಯತ್‌ಗಳು,ಸಂಘ ಸಂಸ್ಥೆಗಳು ನೂರಾರು ಮನವಿ ನೀಡಿದರು ಸಹ ಹೆದ್ದಾರಿ ಪ್ರಾಧಿಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದು ಇಲಾಖೆಯ ಬೇಜವಬ್ದಾರಿ ಹಾಗೂ ನಿರ್ಲಕ್ಷವನ್ನು ಬಿಂಬಿಸಿದೆ. ನೂರಾರು ಅಪಘಾತಗಳಿಂದ ಸಾವಿರಾರು ಜನರು ಕಳೆದ ಆರೇಳು ವರ್ಷಗಳಿಂದ ಪ್ರಾಣ ಕಳೆದುಕೊಂಡು ಪ್ರತಿನಿತ್ಯದ ಅಗತ್ಯಕ್ಕಾಗಿ ಅವಲಂಬಿಸುವ ಹೆದ್ದಾರಿ ವಿಚಾರದಲ್ಲಿ ಈ ರೀತಿಯ ಧೋರಣೆ ಕರಾವಳಿಗರನ್ನು ರೊಚ್ಚಿಗೆಬ್ಬಿಸಿದೆ.

ಬೈಂದೂರು ವ್ಯಾಪ್ತಿಯಲ್ಲಿ ಈಗಾಗಲೇ ಮಂಜೂ ರಾಗಿರುವ ಯಾವುದೇ ಸರ್ವಿಸ್‌ ರಸ್ತೆಗಳನ್ನು ತಾಂತ್ರಿಕ ಮಂಜೂರಾತಿ ನೆಪವೊಡ್ಡಿ ಇದುವರೆಗೆ ಆರಂಭಿಸಿಲ್ಲ. ಮಾತ್ರವಲ್ಲದೆ ಬೈಂದೂರು ಹೊಸ ಬಸ್‌ ನಿಲ್ದಾಣ, ಕೊಲ್ಲೂರು ಕ್ರಾಸ್‌ಗಳು ಅಪಘಾತದ ತಾಣಗಳಾಗಿ ಮಾರ್ಪಟ್ಟಿದೆ. ಅವೈಜ್ಞಾನನಿಕ ಕಾಮಗಾರಿ ವಿರುದ್ದ ಸಾರ್ವಜನಿಕರಿಂದ ಟೋಲ್‌ಚಲೊ, ಪಾದಯಾತ್ರೆ ಪ್ರತಿಭಟನೆ ನಡೆದರು ಸಹ ಅಧಿಕಾರಿಗಳು, ಜನಪ್ರತಿನಿಧಿಗಳು ತುಟಿ ಬಿಚ್ಚಲಿಲ್ಲ. ಹೀಗಾಗಿ ಹೆದ್ದಾರಿ ಹೋರಾಟ ಸಮಿತಿ ಮುಂದಾಳತ್ವದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದತೆ ಆರಂಭಗೊಂಡಿದೆ. ಜಿಲ್ಲಾಧಿಕಾರಿಗಳಿಗೆ, ಸಂಸದರು ಹಾಗೂ ಹೆದ್ದಾರಿ ಅಧಿಕಾರಿಗಳು ಮತ್ತು ಕೇಂದ್ರ ಹೆದ್ದಾರಿ ಸಚಿವರು ಮತ್ತು ಪ್ರಧಾನಿಗಳಿಗೆ ಕಾರ್ಡ್‌ ಹಾಗೂ ಟ್ವೀಟ್‌ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.

ಗಂಭೀರವಾಗಿ ಪರಿಗಣಿಸಿ
ಸಂಸದರು ಮುಖ್ಯಮಂತ್ರಿಗಳ ಪುತ್ರರಾಗಿದ್ದಾರೆ. ಮಾತ್ರವಲ್ಲದೆ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಸರಕಾರದ ಅಧೀನದಲ್ಲಿದೆ. ಬೈಂದೂರು ಕ್ಷೇತ್ರದಲ್ಲಿ ಸಂಸದರಿಗೆ ಅತ್ಯಧಿಕ ಬಹುಮತ ಕೂಡ ದೊರಕಿದೆ. ಒಂದೊಮ್ಮೆ ಹೆದ್ದಾರಿ ಸಮಸ್ಯೆ ಪರಿಹರಿಸದೆ ಟೋಲ್‌ ಆರಂಭಿಸಿದರೆ ಬೈಂದೂರು ಕ್ಷೇತ್ರದ ಜನರಿಗೆ ಸಂಸದರಿಂದ ಆದ ಅನ್ಯಾಯ ಎನ್ನುವುದು ಹೆದ್ದಾರಿ ಹೋರಾಟ ಸಮಿತಿ ಸದಸ್ಯರ ಅಭಿಪ್ರಾಯವಾಗಿದೆ ಹಾಗೂ ಹಕ್ಕುಗಳಿಗಾಗಿ ಜನಸಾಮಾನ್ಯರು ಪರದಾಡ ಬೇಕಾದ ಪರಿಸ್ಥಿತಿ ಉಂಟಾಗಿದೆ.

ಒಟ್ಟಾರೆಯಾಗಿ ಕ್ಷೇತ್ರದ ಪ್ರತಿಯೊಬ್ಬರು ಅತ್ಯಾವಶ್ಯಕವಾದ ಚತುಷ್ಪಥ ರಸ್ತೆ ಅವ್ಯವಸ್ಥೆ ಸರಿಪಡಿಸುವ ಮೂಲಕ ಬೈಂದೂರು ಮಾದರಿ ಕ್ಷೇತ್ರವನ್ನಾಗಿ ಕನಸು ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಸಾಕಾರಗೊಳ್ಳಬೇಕಾಗಿದೆ.

ಅನುಮತಿ ಬಂದಿಲ್ಲ
ಟೋಲ್‌ ಆರಂಭ ಕುರಿತಂತೆ ಈಗಾಗಲೇ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಹೆದ್ದಾರಿ ಪ್ರಾಧಿಕಾರದ ನಿಯಮದಲ್ಲಿ ಕಾಮಗಾರಿ ಪೂರೈಸಲಾಗುತ್ತಿದೆ. ಇದುವರೆಗೆ ಅಧಿಕೃತ ಅನುಮತಿ ಬಂದಿಲ್ಲ. ಸ್ಥಳೀಯ ರಿಯಾಯಿತಿ ಹಾಗೂ ಸ್ಥಳೀಯ ಬೇಡಿಕೆಗಳಿಗೆ ಪ್ರಾಧಿಕಾರ ಅನುಮತಿ ನೀಡಬೇಕಿದೆ. ಭೂ ಒತ್ತುವರಿ ಆಗದ ಕಡೆ ಬಿಟ್ಟು ಉಳಿದ ಕಡೆ ಕಾಮಗಾರಿ ಪೂರ್ಣಗೊಂಡಿದೆ.
-ಮೋಹನ್‌ ಜೋಶ್‌, ಸಿ.ಜಿ.ಎಂ., ಐಆರ್‌ಬಿ ಕಂಪೆನಿ ಹೊನ್ನಾವರ

ಶಿರೂರು ಗಢಿ ಭಾಗದಲ್ಲಿ ಆರಂಭವಾದ ಐ.ಆರ್‌.ಬಿ ಕಂಪೆನಿಯ ಟೋಲ್‌ಗೇಟ್‌ ಆರಂಭಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಅನುಮತಿ ನೀಡಬೇಕೋ ಅಥವಾ ಉಡುಪಿ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕು ಎನ್ನುವ ಗೊಂದಲ ಕೂಡ ಇದೆ. ಕಾರಣವೆಂದರೆ ಟೋಲ್‌ ಇರುವ ಒಂದು ಪಾಶ್ವ ಉತ್ತರ ಕನ್ನಡ ಹಾಗೂ ಇನ್ನೊಂದು ಪಾಶ್ವ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದೆ. ಎರಡು ಜಿಲ್ಲೆಯ ಗಡಿಭಾಗದ ಜನರಿಗೂ ಸಮಸ್ಯೆಯಾಗುವ ಲಕ್ಷಣಗಳಿವೆ.ಇದರ ಜತೆಗೆ ಪ್ರಮುಖ ಊರುಗಳಿಗೆ ಅಳವಡಿಸಬೇಕಾದ ಮಾರ್ಗ ಸೂಚಿಗಳನ್ನು ಅಳವಡಿಸಿಲ್ಲ.ಮಾತ್ರವಲ್ಲದೆ ಟೋಲ್‌ ಪ್ಲಾಜಾದಲ್ಲೂ ಕೂಡ ಶಿರೂರು ಅನ್ನುವ ಬದಲು ಶಿರೂರ ಎಂದು ತಪ್ಪು ಮುದ್ರಿಸಲಾಗಿದೆ.ಇದೆಲ್ಲದರ ಜೊತೆ ಟೋಲ್‌ಗೇಟ್‌ ಬಳಿ ಸುಂಕ ಸಂಗ್ರಹಿಸುವ ಎಲ್ಲ ಸಿದ್ಧ‌ªತೆಗಳು ನಡೆದಿದ್ದು ತೆರೆಮರೆಯಲ್ಲಿ ಸ್ಥಳೀಯರನ್ನು ಓಲೈಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದೊಮ್ಮೆ ಹೆದ್ದಾರಿ ಸಮಸ್ಯೆ ಸರಿಪಡಿಸದೆ ಸ್ಥಳೀಯರಿಗೆ ಟೋಲ್‌ ರಿಯಾಯಿತಿ ನೀಡದೆ ಸುಂಕ ಸಂಗ್ರಹಕ್ಕೆ ಮುಂದಾದರೆ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಾ.ಪಂ. ಸದಸ್ಯ ಹಾಗೂ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ಸದಸ್ಯರಾದ ಪುಷ್ಪರಾಜ್‌ ಶೆಟ್ಟಿ ತಿಳಿಸಿದ್ದಾರೆ.

-ಅರುಣ ಕುಮಾರ್‌ ಶಿರೂರು

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KND-Amber-greece

Whale: ಅಂಬರ್‌ ಗ್ರೀಸ್‌ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.