ಅವಹೇಳನಕಾರಿ ಫೇಸ್ಬುಕ್ ಪೋಸ್ಟ್: ಅನುಪಮಾ ಶೆಣೈ ವಿರುದ್ಧ ದೂರು ದಾಖಲು
Team Udayavani, May 3, 2019, 10:50 AM IST
ಪಡುಬಿದ್ರಿ: ಫೇಸ್ಬುಕ್ನಲ್ಲಿ ಇಸ್ಲಾಂ ಬಗೆಗೆ ಅಪಹಾಸ್ಯ, ಮುಸಲ್ಮಾನರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿರುವುದು ಹಾಗೂ ಮಾಲೇಗಾಂವ್ ಸ್ಫೋಟವನ್ನು ಸಮರ್ಥಿಸಿ ಮುಸ್ಲಿ ಮರು ಭಯೋತ್ಪಾದರೆಂದು ಹೇಳಿ ಕೊಂಡಿದ್ದಾರೆ ಎಂದು ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿರುದ್ಧ ಉಚ್ಚಿಲದ ಭಾಸ್ಕರ ನಗರ ನಿವಾಸಿ ಆಸೀಫ್ ಹನೀಫ್ ಅವರು ಪಡುಬಿದ್ರಿ ಠಾಣೆಯಲ್ಲಿ ಮೇ 1ರಂದು ದೂರು ದಾಖಲಿಸಿದ್ದಾರೆ.
ಈ ಎಲ್ಲ ಪೋಸ್ಟ್ಗಳ ಪ್ರತಿಯೊಂದಿಗೆ ದೂರು ನೀಡಿರುವ ಆಸೀಫ್, ಇತ್ತೀಚೆಗೆ ಮಂಗಳೂರಿನ ಕಾಲೇಜೊಂದರ ಗಲಾಟೆ ಕುರಿತಾಗಿಯೂ ಅನುಪಮಾ ಶೆಣೈ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶ್ರೀಲಂಕಾ ಮಾದರಿಯಲ್ಲಿ ಮಂಗಳೂರಿನಲ್ಲೂ ಮತೀಯ ಗಲಭೆ, ಬಾಂಬ್ ಸ್ಫೋಟಗಳ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಕೋರಿ ಡಿಜಿಗೆ ಬರೆದಿದ್ದ ಪತ್ರದಲ್ಲೂ ಮುಸಲ್ಮಾನರ ನಿಂದನೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.