ಕಾಮಗಾರಿ ಪೂರ್ಣವಾದರೂ ಆರಂಭಗೊಳ್ಳದ ವಕ್ವಾಡಿ ಒಳಚರಂಡಿ ವ್ಯವಸ್ಥೆ!
Team Udayavani, May 15, 2018, 6:45 AM IST
ಕೋಟೇಶ್ವರ: ಗೋಪಾಡಿ ತಿರುವಿನಿಂದ ಚಾರುಕೊಟ್ಟಿಗೆ ತನಕ ರೂ. 7.56 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಒಳಚರಂಡಿ ವ್ಯವಸ್ಥೆಗೆ ಪೂರಕವಾದ ಮಣ್ಣು ತುಂಬಿಸುವ ಕಾಮಗಾರಿ ಆರಂಭಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಮಳೆ ಆರಂಭಗೊಂಡಿರು ವುದರಿಂದ ನೀರಿನ ಹೊರ ಹರಿವಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಒದಗಿಸುವಲ್ಲಿ ಇನ್ನಷ್ಟು ವಿಳಂಬವಾದರೆ ಮುಖ್ಯರಸ್ತೆ ಸಹಿತ ಆಸುಪಾಸಿನ ಮನೆಗಳು, ಜಲಾವೃತಗೊಂಡು ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಗುತ್ತಿಗೆದಾರರು ರಸ್ತೆ ಇಕ್ಕೆಲಗಳಲ್ಲಿ ತುಂಬಿರುವ ಮಣ್ಣನ್ನು ಸಮಾನವಾಗಿ ಸವರಿ ಒಳಚರಂಡಿ ವ್ಯವಸ್ಥೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಾಯವಾದ ಒಳಚರಂಡಿ
ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ ಸಹಿತ ವಿವಿಧ ಗ್ರಾ.ಪಂ. ವ್ಯಾಪ್ತಿ ಗಳಲ್ಲಿನ ಮುಖ್ಯರಸ್ತೆ, ಕೂಡುರಸ್ತೆ ಗಳಲ್ಲಿನ ಒಳಚರಂಡಿ ವ್ಯವಸ್ಥೆ ಮಾಯವಾಗಿರುವುದು ಕಂಡುಬಂದಿದ್ದು ಈ ಮಳೆಗಾಲದೊಳಗೆ ಚರಂಡಿ ವ್ಯವಸ್ಥೆ ಪೂರ್ಣಗೊಳಿಸುವುದರಲ್ಲಿ ಪಂಚಾಯತ್ ಮುತುವರ್ಜಿ ವಹಿಸದಿದ್ದಲ್ಲಿ ಮನೆಗಳು ಜಲಾವೃತಗೊಳ್ಳಲಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.