ಗೊಂದಲಕ್ಕೆ ಒಳಗಾಗುತ್ತಿರುವ ಸವಾರರು: ಮಣಿಪಾಲಕ್ಕೆ ಬೇಕು ವೈಜ್ಞಾನಿಕ ಸರ್ಕಲ್‌ಗಳು
ಸರ್ಕಲ್‌ಗಳಿಲ್ಲದೆ ರಸ್ತೆ ಸುರಕ್ಷತೆಗೂ ಅಡ್ಡಿ
Team Udayavani, Sep 17, 2022, 2:56 PM IST
ಉಡುಪಿ: ಉಡುಪಿ ನಗರದಂತೆ ಮಣಿಪಾಲ ಭಾಗದಲ್ಲಿಯೂ ವಾಹನ ದಟ್ಟಣೆ ದಿನೇದಿನೆ ಹೆಚ್ಚುತ್ತಿದೆ. ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಪ್ರಮುಖ ಸ್ಥಳಗಳಲ್ಲಿ ವೃತ್ತ(ಸರ್ಕಲ್) ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ.
ಕೈಗಾರಿಕೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಸರುವಾಸಿಯಾದ ಮಣಿಪಾಲಕ್ಕೆ ಜನರು ವಿವಿಧೆಡೆಗಳಿಂದ ಆಗಮಿಸುತ್ತಿದ್ದಾರೆ. ಮಣಿಪಾಲದ ಟೈಗರ್ ಸರ್ಕಲ್ ಬಳಿ ಪ್ರಸ್ತುತ ಅಳವಡಿಸಲಾದ ಸಿಗ್ನಲ್‌ನಿಂದ ದಟ್ಟಣೆ ಕಂಡುಬಂದರೆ ಒಳ ರಸ್ತೆಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಉದ್ಭವಿಸತೊಡಗಿದೆ.
ಟೈಗರ್ ಸರ್ಕಲ್
ಮಣಿಪಾಲದ ಟೈಗರ್ ಸರ್ಕಲ್ ಹೆಸರಿಗಷ್ಟೇ ಇದೆ. ಈ ಹಿಂದಿನ ಸರ್ಕಲ್ ತೆರವುಗೊಳಿಸಿದ ಬಳಿಕ ಸಿಗ್ನಲ್
ವ್ಯವಸ್ಥೆ ಮಾತ್ರ ಮಾಡಲಾಗಿದ್ದು, ಪ್ರಚಾರ ಜಾಹೀರಾತಿಗೆ ಮೀಸಲಿಟ್ಟಂತಿದೆ. ಈ ಭಾಗದಲ್ಲಿ ವೈಜ್ಞಾನಿಕ ರೀತಿಯ ಸರ್ಕಲ್‌ನಿರ್ಮಿಸಿದರೆ ಟ್ರಾಫಿ ಕ್ ದಟ್ಟಣೆಯೂ ಕಡಿಮೆಯಾಗಲಿದೆ, ಸಿಗ್ನಲ್ ವ್ಯವಸ್ಥೆಯೂ ಬೇಕೆಂದಿಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಆರ್‌ಎಸ್‌ಬಿ ಭವನ
ಮಣಿಪಾಲದ ಕೈಗಾರಿಕಾ ಪ್ರದೇಶ, ಎಂಐಟಿ, ಟ್ರೀ ಪಾರ್ಕ್, ಹೆರಿಟೇಜ್ ವಿಲೇಜ್ ಸಂಪರ್ಕಕ್ಕೆ ಆರ್‌ಎಸ್‌ಬಿ ಸರ್ಕಲ್ ಮೂಲಕವೇ ಹಾದು ಹೋಗಬೇಕಿದೆ. ಹಗಲು ಹಾಗೂ ರಾತ್ರಿ ವೇಳೆ ವಾಹನಗಳು ಅತೀ ವೇಗದಿಂದ ಆಗಮಿಸುತ್ತಿವೆ. ಈ ಭಾಗದಲ್ಲಿ ಯಾವುದೇ ಸರ್ಕಲ್‌ಗಳಿಲ್ಲದ ಕಾರಣ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಆರ್‌ಎಸ್‌ಬಿ ಬಳಿ ಸರ್ಕಲ್ ನಿರ್ಮಿಸಿ ಸೂಚನ ಫಲಕಗಳನ್ನು ಅಳವಡಿಕೆ ಮಾಡಿದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಸಣ್ಣ ಕೈಗಾರಿಕಾ ಪ್ರದೇಶ
ಆರ್‌ಎಸ್‌ಬಿ ಭವನದಿಂದ ಮುಂದೆ ತೆರಳಿದಾಗ ಸಿಗುವ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಒಂದು ರಸ್ತೆ ಅಲೆವೂರು ಹಾಗೂ ಮತ್ತೂಂದು ರಸ್ತೆ ಕೈಗಾರಿಕ ವಲಯದತ್ತ ತೆರಳುತ್ತದೆ. ಈ ಭಾಗದ ರಸ್ತೆಗಳಲ್ಲಿ ಹೊಂಡ-ಗುಂಡಿಗಳು ಬಿದ್ದಿರುವ ಕಾರಣ ಪ್ರಸ್ತುತ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತವೆ. ಶೀಘ್ರದಲ್ಲಿ ಈ ರಸ್ತೆ ದುರಸ್ತಿ ಕಾಣಲಿದ್ದು, ಈ ಸಂದರ್ಭ ಇಲ್ಲೊಂದು ಸರ್ಕಲ್ ನಿರ್ಮಿಸಿದರೆ ಅನುಕೂಲವಾಗಬಹುದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಸರ್ಕಲ್ ಅತ್ಯಗತ್ಯ
ಮಣಿಪಾಲ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. ಆದರೆ ಟ್ರಾμಕ್ ನಿರ್ವಹಣೆ ಸಹಿತ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಗರದ ಆಯ್ದ ಕಡೆಗಳಲ್ಲಿ ಸರ್ಕಲ್ ನಿರ್ಮಿಸುವ ಬಗ್ಗೆ ಸ್ಥಳೀಯಾಡಳಿತ ಹಾಗೂ ಇಲಾಖೆ ಗಮನಹರಿಸುವ ಅಗತ್ಯವಿದೆ.
-ಸುಧೀರ್ ನಾಯಕ್, ಸ್ಥಳೀಯ ನಿವಾಸಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.