ಸಜೀಪಪಡು ಗ್ರಾ.ಪಂ.ಹೊಸ ಕಟ್ಟಡದ ಗೊಂದಲ

ಮಳೆ ಅಡ್ಡಿ: ಅಧಿಕಾರಿಗಳ ಹೇಳಿಕೆ; ಗುತ್ತಿಗೆದಾರರ ವಿಳಂಬ: ಆಡಳಿತ ಮಂಡಳಿ ಆರೋಪ

Team Udayavani, Nov 12, 2019, 5:43 AM IST

0711KS9A-PH

ಬಂಟ್ವಾಳ: ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರಕಾರವು ಹೊಸ ಗ್ರಾಮ ಪಂಚಾಯತ್‌ಗಳನ್ನು ಅಸ್ತಿತ್ವಕ್ಕೆ ತಂದಿದ್ದು, ಅದರಂತೆ ಬಂಟ್ವಾಳ ತಾಲೂಕಿನಲ್ಲಿ 12 ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಪ್ರಸ್ತುತ ಹೊಸ ಗ್ರಾಮ ಪಂಚಾಯತ್‌ಗಳ ಕಟ್ಟಡದ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಸಜೀಪಪಡು ಗ್ರಾ.ಪಂ.ನ ಹೊಸ ಕಟ್ಟಡದ ಕುರಿತು ಗೊಂದಲ ಸೃಷ್ಟಿಯಾಗಿದೆ.

ಗ್ರಾ.ಪಂ. ವ್ಯಾಪ್ತಿಯ ಚೇಳೂರಿನಲ್ಲಿ ನೂತನ ಕಟ್ಟಡಕ್ಕೆ ಸ್ಥಳ ಸಮತಟ್ಟು ಮಾಡಿ, ಕಾಮಗಾರಿಯನ್ನೂ ಆರಂಭಿಸಲಾಗಿದೆ. ಗುಡ್ಡವನ್ನು ಸಮತಟ್ಟು ಮಾಡಿರುವುದರಿಂದ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದರೆ, ಗ್ರಾ.ಪಂ. ಆಡಳಿತ ಮಂಡಳಿ ಮಾತ್ರ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದೆ.

6 ಕಟ್ಟಡ ಪೂರ್ತಿ
ತಾಲೂಕಿನ 12 ಹೊಸ ಗ್ರಾ.ಪಂ.ಗಳ ಪೈಕಿ 6 ಗ್ರಾ.ಪಂ.ಗಳ ಕಟ್ಟಡಗಳು ಈಗಾಗಲೇ ಪೂರ್ತಿಗೊಂಡಿದ್ದು, 6 ಗ್ರಾ.ಪಂ.ಗಳ ಕಟ್ಟಡಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ ಸಜೀಪಪಡು ಗ್ರಾ.ಪಂ.ನ ನೂತನ ಕಟ್ಟಡದ ಅಡಿಪಾಯ ಕಾಮಗಾರಿಯೂ ಇನ್ನೂ ಆರಂಭಗೊಂಡಿಲ್ಲ!

ಗ್ರಾ.ಪಂ.ನಿಂದ ದೂರು
ಸಜೀಪಪಡು ಗ್ರಾಮ ಪಂಚಾಯತ್‌ನ ನೂತನ ಕಟ್ಟಡಕ್ಕೆ ಸರಕಾರದಿಂದ 10 ಲಕ್ಷ ರೂ. ಮಂಜೂರುಗೊಂಡಿದೆ. ಈ ಕುರಿತು ಕಳೆದ ಫೆಬ್ರವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಕೂಡ ನಡೆದಿದೆ.

ಎರಡೆರಡು ಬಾರಿ ತೊಂದರೆ?
ಪ್ರಸ್ತುತ ಗ್ರಾ.ಪಂ.ನ ನೂತನ ಕಟ್ಟಡದ ಸ್ಥಳವನ್ನು ಸಮತಟ್ಟು ಮಾಡಿ, ಪಿಲ್ಲರ್‌ ಏರಿಸುವುದಕ್ಕೆ ಹೊಂಡಗಳನ್ನು ಮಾಡಲಾಗಿದೆ. ಆದರೆ ವಿಪರೀತ ಮಳೆಯ ಪರಿಣಾಮ ಹೊಂಡಕ್ಕೆ ಮಣ್ಣು ಬಿದ್ದಿದ್ದು, ಗುತ್ತಿಗೆದಾರರು ಎರಡೆರಡು ಬಾರಿ ಹೊಂಡ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ ತಾವು ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲೂ ಹೊಂಡದಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು. ಹೀಗಾಗಿ ಮಳೆ ಪೂರ್ತಿ ನಿಲ್ಲದೆ ಗುತ್ತಿಗೆದಾರರು ಕೂಡ ಕಾಮಗಾರಿ ಮುಂದುವರಿಸುವುದಕ್ಕೆ ಧೈರ್ಯ ತೋರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಮರು ಟೆಂಡರ್‌ಗೆ ಸಮಯ ಅವಕಾಶ
ಮಳೆಯಿಂದ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಂದ ವೇಗವಾಗಿ ಕಾಮಗಾರಿ ನಡೆಸಲು ಪ್ರಯತ್ನಿಸಬಹುದು. ಆದರೆ ಪ್ರಸ್ತುತ ಗ್ರಾ.ಪಂ.ನ ಜನಪ್ರತಿನಿಧಿಗಳು ಗುತ್ತಿಗೆದಾರರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬೇಡಿಕೆಯಂತೆ ಮರು ಟೆಂಡರ್‌ ಪ್ರಕ್ರಿಯೆ ನಡೆಸಿದರೆ ಅದಕ್ಕೂ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗಬಹುದು.
– ತಾರಾನಾಥ್‌ ಸಾಲ್ಯಾನ್‌ಎಇಇ, ಪಂ. ಎಂ.
ಉಪವಿಭಾಗ, ಬಂಟ್ವಾಳ

 ಮಳೆಯಿಂದ ತೊಂದರೆ
ಚೇಳೂರು ಪ್ರದೇಶದಲ್ಲಿ ಗುಡ್ಡವನ್ನು ಅಗೆದು ಸಮತಟ್ಟು ಮಾಡಿರುವುದರಿಂದ ಮಳೆಯಿಂದ ಕಾಮಗಾರಿ ನಡೆಸುವುದಕ್ಕೆ ಕೊಂಚ ತೊಂದರೆಯಾಗಿದೆ. ಬಿಸಿಲು ಬಂದು ಪೂರ್ತಿ ಒಣಗಿದ ಬಳಿಕ ಕಾಮಗಾರಿ ಮುಂದುವರಿಸಬೇಕಿದೆ.
– ಶ್ವೇತಾ ಕೆ.ವಿ.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

 ಹೊಸ ಕಟ್ಟಡದ ಆಸೆ
ಹೊಸದಾಗಿ ಬಂದಿರುವ ಗ್ರಾ.ಪಂ.ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು, ನಮ್ಮ ಅವಧಿ ಮುಗಿಯುವುದಕ್ಕೆ ಮೊದಲು ಹೊಸ ಕಟ್ಟಡವನ್ನು ಉದ್ಘಾಟಿಸಬೇಕೆಂಬ ಆಸೆ. ಆದರೆ ಹಾಲಿ ಕಾಮಗಾರಿಯ ವೇಗವನ್ನು ಕಂಡರೆ ಹಾಲಿ ಆಡಳಿತ ಮಂಡಳಿ ಮುಗಿಯುವುದಕ್ಕಿಂತ ಮುಂಚೆ ಕಾಮಗಾರಿ ಮುಗಿಸುವ ಲಕ್ಷಣಗಳು ಕಂಡುಬರುತ್ತಿಲ್ಲ.
– ಹೆನ್ರಿ ಡಿ’ಸೋಜಾ
ಉಪಾಧ್ಯಕ್ಷರು,
ಸಜೀಪಪಡು ಗ್ರಾ.ಪಂ.

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.