ಸಿದ್ದು ಕಪಿಮುಷ್ಟಿಯಲ್ಲಿ ಕಾಂಗ್ರೆಸ್: ಶೋಭಾ
Team Udayavani, Mar 18, 2018, 7:30 AM IST
ಕಟಪಾಡಿ: ಬಿಜೆಪಿಯನ್ನು ಸರ್ವಸ್ಪರ್ಶಿ ಮತ್ತು ಸರ್ವವ್ಯಾಪಿಯಾಗಿ ಕಟ್ಟುವಲ್ಲಿ ಕಟಪಾಡಿ ಯಲ್ಲಿ ನಡೆಯುತ್ತಿರುವ ಕಮಲ ಜಾತ್ರೆ ಪೂರಕವಾಗಿ ಯಶಸ್ವಿಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶನಿವಾರ ಕಟಪಾಡಿಯ ಕಮಲ ಜಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಸಾಧನೆಯ ವಿಚಾರಗಳನ್ನು ಲೇಸರ್ ಲೈಟ್ ಶೋ, ಮ್ಯಾಜಿಕ್ ಶೋ ಮೊದಲಾದ ಕಾರ್ಯಕ್ರಮಗಳ ಮೂಲಕ ಕಮಲ ಜಾತ್ರೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಸಾರ್ವಜನಿಕರು, ಮಕ್ಕಳು ಹೆಚ್ಚು ಭಾಗವಹಿಸಿದಷ್ಟು ಪಕ್ಷದ ಚಿಹ್ನೆ ಮತ್ತು ಸಾಧನೆಗಳು ವ್ಯಾಪಕ ಪ್ರಚಾರ ವನ್ನು ಪಡೆದುಕೊಳ್ಳಲಿದ್ದು, ಬಿಜೆಪಿಗೆ ಲಾಭವಾಗಲಿದೆ ಎಂದು ಶೋಭಾ ಹೇಳಿದರು.
ಮೊದಲು ಕಾಂಗ್ರೆಸ್ ಸರಕಾರವು 18 ರಾಜ್ಯಗಳಲ್ಲಿ ಆಡಳಿತ ನಡೆಸಿತ್ತು. ದೇಶದಲ್ಲಿ ಮೊದಲ ಬಾರಿಗೆ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುವಷ್ಟರ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪಕ್ಷವನ್ನು ಕಟ್ಟಿದ್ದಾರೆ ಎಂದು ಶೋಭಾ ಹೇಳಿದರು.
ಮೊಲಿ ಟ್ವೀಟ್: ಕಾಂಗ್ರೆಸ್‌ನ ನೈಜ ಪರಿಸ್ಥಿತಿ
ಸಿದ್ದರಾಮಯ್ಯ ಸರಕಾರದ ಕೌಂಟ್‌ಡೌನ್ ಗಂಟೆಗಳ ಲೆಕ್ಕದಲ್ಲಿ ಆರಂಭವಾಗಿದೆ. ಹಳೆ ಕಾಂಗ್ರೆಸಿಗರು ಮತ್ತು ಹೊಸ ಕಾಂಗ್ರೆಸಿಗರ ಸಂಘರ್ಷದಲ್ಲಿ ನಿಜವಾದ ಕಾಂಗ್ರೆಸ್ ಸಿದ್ದರಾಮಯ್ಯ ಕಪಿಮುಷ್ಟಿ ಯಲ್ಲಿ ನಲುಗುತ್ತಿದೆ. ವೀರಪ್ಪ ಮೊಲಿ ಅವರ ಟ್ವೀಟ್ ಕಾಂಗ್ರೆಸ್‌ನ ನಿಜವಾದ ಪರಿಸ್ಥಿತಿಯನ್ನು ಜನತೆಯ ಮುಂದಿಟ್ಟಿದೆ ಎಂದು ಶೋಭಾ ಹೇಳಿದರು.
ರಾಹುಲ್ ದೇಗುಲ ಭೇಟಿ ಗಿಮಿಕ್
ರಾಹುಲ್ ಗಾಂಧಿ ಪ್ರವಾಸದ ಸಂದರ್ಭ ದೇವ ಸ್ಥಾನಗಳಿಗೆ ಭೇಟಿ ನೀಡುವುದು ಚುನಾವಣಾ ಗಿಮಿಕ್. ಸಿದ್ದರಾಮಯ್ಯ ಉಡುಪಿಗೆ ಬಂದಿದ್ದರು, ಶ್ರೀಕೃಷ್ಣ ದರುಶನವಲ್ಲದಿದ್ದರೂ ಕನಕ ದರುಶನ ವನ್ನಾದರೂ ಪಡೆಯಬಹುದಿತ್ತು. ಸರ್ವಾಧಿಕಾರಿ ಸಿದ್ದರಾಮಯ್ಯ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುವ ಶಕ್ತಿ ಹೊಂದಿಲ್ಲ ಎಂದರು.
ಸ್ವಾಮೀಜಿಗಳನ್ನು ಕಣಕ್ಕಿಳಿಸುವ ಚರ್ಚೆ ನಡೆದಿಲ್ಲ
ಜಿಲ್ಲೆಯಲ್ಲಿ ಎಲ್ಲ ಐದು ಸ್ಥಾನಗಳನ್ನು ಗೆಲ್ಲುವತ್ತ ಪಕ್ಷ ವನ್ನು ಸಿದ್ಧಗೊಳಿಸುವ ಕೆಲಸ ಆಗುತ್ತಿದೆ. ಯಾವುದೇ ಸ್ವಾಮೀಜಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿಲ್ಲ. ಗೆಲ್ಲುವ ಅಭ್ಯರ್ಥಿಗೆ ಮಾತ್ರ ಬಿಜೆಪಿ ಟಿಕೆಟ್ ಎಂದು ಶೋಭಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಪ್ರಮುಖರಾದ ಕಿರಣ್ ಕುಮಾರ್ ಬೈಲೂರು, ಸುರೇಶ್ ಶೆಟ್ಟಿ ಗುರ್ಮೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸಂಧ್ಯಾ ರಮೇಶ್, ಶೀಲಾ ಕೆ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ಯಾಮಲಾ ಕುಂದರ್, ಕಟಪಾಡಿ ಶಂಕರ ಪೂಜಾರಿ, ಶಿಲ್ಪಾ ಜಿ. ಸುವರ್ಣ, ನಯನಾ ಗಣೇಶ್, ಪ್ರವೀಣ್ ಪೂಜಾರಿ, ಕೇಸರಿ ಯುವರಾಜ್, ವೀಣಾ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಪವಿತ್ರಾ ಶೆಟ್ಟಿ, ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.