ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಮತಯಾಚನೆ
ಮಲ್ಪೆ ಬಂದರಿನ ಅಭಿವೃದ್ಧಿ, ಮೂಲಭೂತ ಸೌಕರ್ಯದ ಈಡೇರಿಕೆಗೆ ಬದ್ದ
Team Udayavani, May 3, 2023, 2:51 PM IST
ಮಲ್ಪೆ: ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಅವರು ಮಂಗಳವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮತಪ್ರಚಾರ ನಡೆಸಿ, ಮತಯಾಚನೆಗೈದರು.
ಮೀನುಗಾರರಿಗೆ ಮೋಸ
ಈ ಸಂದರ್ಭದಲ್ಲಿ ಮೀನುಗಾರರೊಂದಿಗೆ ಮಾತನಾಡಿದ ಪ್ರಸಾದ್‌ರಾಜ್ ಕಾಂಚನ್ ಅವರು ಮೀನುಗಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಕೆಲವೊಂದು ಸೌಲಭ್ಯಗಳು ಇನೂ °ಕೂಡ ಸಿಗದೇ ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಮಲ್ಪೆ ಬಂದರಿನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಸರಕಾರದಿಂದ ಮಂಜೂರಾದ ಕೆಲವೊಂದು ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಆದರೆ ಬಿಜೆಪಿ ಸರಕಾರ ಮಾತ್ರ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಿ ಅದನ್ನು ಅನುಷ್ಟಾನಗೊಳಿಸದೆ ಮೀನುಗಾರರಿಗೆ ಮೋಸ ಮಾಡುತ್ತಿದೆ ಎಂದರು.
ಮೀನುಗಾರ ಮಹಿಳೆಯರು ಇಂದು ಬಂದರಿನಲ್ಲಿ ಚುನವಣಾ ಪ್ರಚಾರದಲ್ಲಿ ನನಗೆ ಒಳ್ಳೆಯ ಸಹಕಾರ ನೀಡಿದ್ದಾರೆ. ಅವರ ಸಂಕಷ್ಟ, ಬೇಡಿಕೆಯನ್ನು ನನ್ನ ಬಳಿ ತಿಳಿಸಿದ್ದಾರೆ, ನಾನು ಶಾಸಕನಾಗಿ ಆಯ್ಕೆಯಾದರೆ ಮುಂದಿನ ದಿನಗಳಲ್ಲಿ ಅವರ ಎಲ್ಲ ಬೇಡಿಕೆಗಳನ್ನು ಪೂರೈಸುವುದಾಗಿ ತಿಳಿಸಿದರು.
ನ್ಯಾಯಯುತ ಬೇಡಿಕೆಗಳು
ಮೀನುಗಾರಿಕೆಯಿಂದ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಲಕ್ಷಾಂತರ ಜನರಿಗೆ ಉದ್ಯೋಗ, ಹಾಗೂ ಸತ್ವ ಭರಿತ ಆಹಾರ ನೀಡುತ್ತಿದರು. ಸರಕಾರ ಮೀನುಗಾರರ ಬಗ್ಗೆ ನಿರ್ಲಕ್ಷéಧೋರಣೆಯನ್ನು ತೋರಿಸುತ್ತದೆ. ಅವರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲ. ಮುಖ್ಯವಾಗಿ ಬಂದರುಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ನೀರು, ಹೈಜಿನಿಕ್ ಟಾಯ್ಲೆಟ್, ಸಮರ್ಪಕ ಒಳಚರಂಡಿ, ಶುಚಿತ್ವ ಆಗಬೇಕಿದೆ. ನಾಡದೋಣಿ ಮೀನುಗಾರರಿಗೆ ಮಾಸಿಕ ಸೀಮೆ ಎಣ್ಣೆ ಹೆಚ್ಚಳ ಮತ್ತು ಪ್ರತ್ಯೇಕ ಧಕ್ಕೆ ನಿರ್ಮಾಣ, ದುರ್ಮರಣ ಹೊಂದಿದ ಮೀನುಗಾರರ ಬಾಕಿಯಿರುವ ಸಂಕಷ್ಟ ಪರಿಹಾರ ನಿಧಿಯನ್ನು ಆದಷ್ಟು ಶೀಘ್ರದಲ್ಲಿ ಒದಗಿಸಿಕೊಡುವುದು ಮತ್ತು ಮೀನುಗಾರಿಕೆಯ ತುರ್ತು ಸಂದರ್ಭದಲ್ಲಿ ಅವಘಡ ಸಂಭವಿಸಿದಾಗ ಸುರಕ್ಷಾ ಬೋಟ್ ಮತ್ತು ಸೀ ಅಂಬುಲೆನ್ಸ್ ಅನ್ನು ಒದಗಿಸುವ ಕೆಲಸ ಅವಶ್ಯವಾಗಿ ಆಗಬೇಕಾಗಿದೆ. ಶಾಸಕನಾಗಿ ಆಯ್ಕೆಗೊಂಡಲ್ಲಿ ಈ ಎಲ್ಲವನ್ನೂ ಆತೀ ಶೀಘ್ರದಲ್ಲಿ ಮಾಡುವ ಉದೇªಶ ನನ್ನದಾಗಿದೆ ಎಂದು ಪ್ರಸಾದ್‌ರಾಜ್ ಹೇಳಿದರು.
ಉಡುಪಿ ಸ್ವತ್ಛ ಸುಂದರ ನಗರದ ಕನಸು
ಉಡುಪಿಯನ್ನು ಎಲ್ಲ ಸೌಲಭ್ಯದೊಂದಿಗೆ ಸ್ವಚ್ಛ, ಸುಂದರ, ಹಸುರು ನಗರವಾಗಿಸುವುದು ನನ್ನ ಕನಸು. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ. ದೇಶದಲ್ಲಿ ಯಾವುದೇ ನಗರವನ್ನು ನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ಕಲುಷಿತವಾಗಿದೆ. ಶುದ್ದ ನೀರು, ಪರಿಶುದ್ದವಾದ ವಾತಾವರಣ ಇಲ್ಲ. ಇದು ಮಕ್ಕಳು ಬೆಳೆಯುವಾಗ ಇದು ತುಂಬ ಅವಶ್ಯಕವಾದ ವಿಚಾರ. ಹಾಗಾಗಿ ಮುಂದಿನ 50 ವರ್ಷಕ್ಕೆ ಯೋಜನೆಯನ್ನು ಹಾಕಬೇಕಾಗಿದೆ. ಇಲ್ಲಿರುವ ಡ್ರೈನೇಜ್, ಕೊಳಚೆ ನೀರನ್ನು ಸಮುದ್ರಕ್ಕೆ ಬಿಡುವ ವ್ಯವಸ್ಥೆ ಅದನ್ನೆಲ್ಲ ನಾವು ಮೊದಲು ಸರಿಪಡಿಸಬೇಕಾಗಿದೆ.
ಬಿಜೆಪಿ ದುಡ್ಡಿದ್ದರವರಿಗೆ ಮಾತ್ರ
ಬಿಜೆಪಿ ಸರಕಾರ ಶ್ರೀಮಂತರಿಗೆ ಮಾತ್ರ ಮಣಿ ಹಾಕುತ್ತದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ದುಡ್ಡಿದ್ದವರು ಇನ್ನೂ ಕೂಡ ಬಿಜೆಪಿ ಸರಕಾರವೇ ಬರಲಿ ಎಂದು ಹೇಳುತ್ತಿದ್ದಾರೆ. ಆದರೆ ನಾವು ಬಡವರು ಎಲ್ಲಿಗೆ ಹೋಗಬೇಕು. ಎಲ್ಲದಕ್ಕೂ ಬೆಲೆ ಏರಿಕೆ ಮಾಡಿದ್ದಾರೆ. ದಿನ ನಿತ್ಯದ ಮನೆ ಸಾಮಾಗ್ರಿಅಕ್ಕಿ, ಗ್ಯಾಸ್, ಕರೆಂಟ್ ಬಿಲ್ ಹೆಚ್ಚು ಹೆಚ್ಚು ಮಾಡುತ್ತಲೇ ಇದ್ದಾರೆ. ಬಂಗಾರ ಬೆಲೆ ಹೆಚ್ಚಳದಿಂದ ಇಂದು ಹೆಣ್ಣು ಮಕ್ಕಳಿಗೆ ಮದುವೆ ಮಾಡದ ಪರಿಸ್ಥಿತಿ ಇದೆ ಎಂದು ಮೀನುಗಾರ ಮಹಿಳೆಯರು ತಮ್ಮ ಆಳಲನ್ನು ತೋಡಿಕೊಂಡರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಉಸ್ತುವಾರಿ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ಗಣೇಶ್ ನೆರ್ಗಿ, ಕೇಶವ ಎಂ. ಕೋಟ್ಯಾನ್, ಪದ್ಮನಾಭ್ ಸಾಲ್ಯಾನ್, ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಪ್ರವೀಣ್ ಜಿ. ಕೊಡವೂರು, ಚಂದ್ರಕಾಂತ್ ಪುತ್ರನ್, ಸತೀಶ್ ಕೊಡವೂರು, ಸುದರ್ಶನ್ ಪಡುಕರೆ, ಅಶೋಕ್ ಸುವರ್ಣ ಪಡುಕರೆ, ಸತೀಶ್ ಕುಂದರ್ ಕಲ್ಮಾಡಿ, ಆನಂದ ಕಾಂಚನ್ ಮೊದಲಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.