ವಿದ್ಯಾರ್ಥಿಯಾಗಿರುವಾಗಲೇ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟವರು ಸೊರಕೆ : ಐವನ್ ಡಿಸೋಜ
Team Udayavani, May 1, 2023, 4:10 PM IST
ಕಾಪು: ವಿದ್ಯಾರ್ಥಿ ಜೀವನದಲ್ಲೇ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಕೊಟ್ಟ ಏಕೈಕ ರಾಜಕಾರಣಿ ಇದ್ರೆ ಅದು ವಿನಯ ಕುಮಾರ್ ಸೊರಕೆ ಅಂತಾ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜ ಸೇವಕರಂದರೆ ಸಮಾಜದ ಜೊತೆ ಇರಬೇಕು. ತನ್ನ ಸಮಾಜ ಸೇವೆಯ ಕಾರ್ಯದಲ್ಲಿ ವಿನಯತೆಯಿಂದ ವಿನಯವಂತರಾಗಿ ಕಳೆದ ಚುನಾವಣೆಯಲ್ಲಿ 5 ವರ್ಷಗಳ ಕಾಲ ಸೋಲಿಸಿ ರಜೆ ಕೊಟ್ಟರೂ ನಿಮ್ಮ ಜೊತೆ ಇದ್ದು ನಿಮ್ಮ ಸಮಸ್ಯ ಗೆ ಹೋರಾಟಕ್ಕೆ ಧ್ವನಿಯಾದವರು ವಿನಯ ಕುಮಾರ್ ಸೊರಕೆಯವರು ಮಾತ್ರ.
ಮತದಾನ ಮಾಡುವ ಸಂದರ್ಭ ಮತದಾರರಿಗೆ ಅಂಜಿಕೆ, ಅಳುಕು ಇರಬಾರದು. ಈ ಬಾರಿ ವಿನಯ ಕುಮಾರ್ ಸೊರಕೆಯವರಿಗೆ ಮತ ನೀಡಿ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಅಂತಾ ಐವನ್ ಡಿಸೋಜ ಹೇಳಿದ್ದಾರೆ.
ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಮಾತನಾಡಿ ತಿನ್ನೋ ಉಪ್ಪಿಗೂ ಕೂಡಾ ಜಿ ಎಸ್ ಟಿ ಯನ್ನು ಹಾಕಿ ಬಡವರನ್ನು ಮತ್ತೆ ಬಡತನಕ್ಕೆ ದೂಡಿದ ಬಿಜೆಪಿ ಸರ್ಕಾರ ಇದೀಗ ಅಭಿವೃದ್ಧಿ ಯ ಮಂತ್ರ ಜಪಿಸಿ ಜನರನ್ನು ಮರಳು ಮಾಡುವ ಕಾರ್ಯಕ್ಕೆ ಕೈ ಹಾಕಿದೆ.
ಆಧಾರ್ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಮೂಲಕ 13 ಸಾವಿರ ಕೋಟಿ ರೂ ಗುಳುಂ ಮಾಡಲಾಗಿದೆ. ಬಿಜೆಪಿಗೆ ವಿನಯ ಕುಮಾರ್ ಸೊರಕೆಯವರನ್ನು ದೂಷಿಸಲು ಯಾವುದೇ ಕಾರಣಗಳು ಸಿಗ್ತಾ ಇಲ್ಲ.
ಧರಿಸುವ ಬಟ್ಟೆಯಷ್ಟು ಶುಭ್ರವಾಗಿದೆ ಅವರ ವ್ಯಕ್ತಿತ್ವ. ಜನರ ವಿಶ್ವಾಸಕ್ಕೆ ನಂಬಿಕೆಗೆ ಬೆಲೆ ಕೊಡುವ ರಾಜಕಾರಣಿ. ಕಾಪುವಿನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿದೆ.ಊರಿನ ಅಭಿವೃದ್ಧಿ ಗೆ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಸೊರಕೆಯವರು. ಪಕ್ಷದ ಆಂತರಿಕ ಕಾರಣಕ್ಕಾಗಿ ಮಂತ್ರಿ ಸ್ಥಾನ ಹೋದ್ರು ಬೇಸರ ಪಡಿಸದೆ ಕಾಪು ತಾಲೂಕು ಆಗಲೇಬೇಕು ಅಂತಾ ಅನುದಾನ ತಂದವರು.ಪ್ರಾಂಜಲ ಮನಸ್ಸಿನಿಂದ ಪ್ರೀತಿಯಿಂದ ಮಮತೆಯಿಂದ ಸೊರಕೆಯವರ ಪರ ಕಾರ್ಯಕರ್ತರಯ ಕೆಲಸ ಮಾಡಬೇಕಿದೆ. ಸೊರಕೆಯವರ ವಿರೋಚಿತ ಗೆಲುವಿಗಾಗಿ ಕಟಿಬದ್ಧರಾಗಿ ಎಲ್ಲಾ ಸೇರಿ ಹಗಲಿರುಳು ದುಡಿಯಬೇಕು.
ಸೋತ ಮೇಲೂ ಅತಿ ಹೆಚ್ಚು ಜನ ಸಂಪರ್ಕವನ್ನು ಇಟ್ಟುಕೊಂಡ ಸೊರಕೆಯವರನ್ನು ಕಾಪುವಿನಜನ ಕಾಪಾಡಿಕೊಳ್ತಾರೆ. ಅನ್ನೋ ನಂಬಿಕೆ ಇದೆ ಅಂತಾ ಸುಧೀರ್ ಕುಮಾರ್ ಮರೋಳಿ ಹೇಳಿದ್ದಾರೆ.
ಕಾಪು ಕಾಂಗ್ರೆಸ್ ಆಭ್ಯರ್ಥಿ ವಿನಯ್ ಕುಮಾರ್ ಸೊರಕೆ ಮಾತನಾಡಿ ಕಾರ್ಮಿಕರ ಮೇಲೆ ಜಿ ಎಸ್ ಟಿ ತೆರಿಗೆ ಮೂಲಕ ಕಾರ್ಮಿಕರನ್ನು ಬೀದಿಗೆ ತಂದಿದ್ದಾರೆ. ಕಾಪುವಿನ ಪ್ರಣಾಳಿಕೆಯಲ್ಲಿ ಕಾರ್ಮಿಕರಿಗೂ ಹೆಚ್ಚಿನ ಮಹತ್ವ ಕೊಟ್ಟಿದ್ಧೀವಿ. ಮತದಾರರ ಮನವೊಲಿಸಿ ಕಾಂಗ್ರೆಸ್ ಕಾರ್ಯಕ್ರಮ ದ ಬಗ್ಗೆ ತಿಳಿಸಿ ಪ್ರತಿಯೊಬ್ಬರೂ ಅಭ್ಯರ್ಥಿ ಯಾಗಿ ಕೆಲಸ ಮಾಡಬೇಕು ಅಂತಾ ಸೊರಕೆ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಕೋಟ್ಯಾನ್, ನವೀನ ಚಂದ್ರ ಶೆಟ್ಟಿ,ನವೀನ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್, ರಮೀಜ್, ವಿಶ್ವಾಸ್ ಅಮೀನ್, ಜಿತೇಂದ್ರ ಫುಟಾರ್ಡೊ,ಶೇಖರ ಹೆಜ್ಮಾಡಿ, ಕರುಣಾಕರ ಪೂಜಾರಿ, ಸುಧೀರ್ ಕರ್ಕೇರ, ಯಶವಂತ್,ಅಖಿಲೇಶ್ ಕೋಟ್ಯಾನ್,ದೇವಿ ಪ್ರಸಾದ್ ಶೆಟ್ಟಿ, ಶರ್ಪುದ್ದೀನ್ ಶೇಖ್, ದೀಪಕ್ ಕುಮಾರ್ ಎರ್ಮಾಳ್,ಸುಕುಮಾರ್, ಅಜೀಜ್, ರಮೀಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.