Congress Government: ಸಾಧು-ಸಂತರಿಗೆ ರಕ್ಷಣೆ ಇಲ್ಲ: ಶಾಸಕ ಸುನಿಲ್ ಕುಮಾರ್
Team Udayavani, Dec 1, 2024, 1:21 AM IST
ಮಣಿಪಾಲ: ಕಾಂಗ್ರೆಸ್ ಸರಕಾರದಲ್ಲಿ ಸಾಧು ಸಂತರು, ಹಿಂದೂಗಳಿಗೆ ರಕ್ಷಣೆ ಇಲ್ಲ. ಸರಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ಕೇಸ್ ದಾಖಲಾಗುತ್ತದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ. ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಭಾಷಣದಲ್ಲಿ ಹೇಳಿದ್ದ ತುಣುಕು ಇಟ್ಟುಕೊಂಡು ಕೇಸ್ ಹಾಕಲಾಗಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಹೇಳಿದರು.
ಶನಿವಾರ ಮಣಿಪಾಲದಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಯೋಗಗಳು ಬಂದು ನಕ್ಸಲ್ ಎನ್ಕೌಂಟರ್ ತಪ್ಪು ಅನ್ನುತ್ತದೆ. ನಕ್ಸಲ್ ಪರವಾಗಿ ಮಾತನಾಡುವ ನಗರ ನಕ್ಸಲರ ಬಗ್ಗೆ ಸರಕಾರ ಮೃದು ಧೋರಣೆ ತಾಳುತ್ತದೆ. ಹಿಂದು ಕಾರ್ಯಕರ್ತರ ಮೇಲೆ ಸುಮೊಟೊ ಕೇಸ್ ಹಾಕಲಾಗುತ್ತದೆ. ಸರಕಾರ ತನ್ನ ನಿಲುವಿನಿಂದ ಹೊರಬಂದು ಸಾಧು ಸಂತರಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿದರು.
ಡಿ.4,5ರಂದು ರಾಜ್ಯ ವ್ಯಾಪಿ ಪ್ರತಿಭಟನೆ
ಬಾಂಗ್ಲಾದಲ್ಲಿ ಇಸ್ಕಾನ್ ಮುಖ್ಯಸ್ಥರ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವ ವಿರೋಧಿ ನಡೆ. ಬಾಂಗ್ಲಾ ಇಸ್ಕಾನ್ ಮುಚ್ಚಲು ಹೊರಟಿದೆ. ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.4 ಮತ್ತು 5ರಂದು ಪ್ರತಿಭಟನೆ ನಡೆಸಲಿದ್ದೇವೆ. ಉಡುಪಿಯಲ್ಲಿ ಡಿ. 4ರಂದು ಪ್ರತಿಭಟನೆ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.