ಕಾಂಗ್ರೆಸ್‌ನದ್ದು ರಾಜಕೀಯದ ಭಕ್ತಿ, ಹಿಂದುತ್ವ
Team Udayavani, Jan 24, 2018, 12:52 PM IST
ಉಡುಪಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಮತ್ತು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹಿಂದುತ್ವ ಮತ್ತು ದೇವರ ಮೇಲಿನ ಭಕ್ತಿಗೆ ಗುಜರಾತ್‌ನ ಜನ ಪಾಠ ಕಲಿಸಿದ್ದಾರೆ. ಕರ್ನಾಟಕ ದಲ್ಲಿಯೂ ಇದೇ ರೀತಿಯಾಗಲಿದೆ ಎಂದು ಕೇಂದ್ರ ಸಚಿವ, ಕರ್ನಾಟಕ ಬಿಜೆಪಿಯ ಚುನಾವಣಾ ಸಂಚಾಲಕ ಪ್ರಕಾಶ್ ಜಾಬ್ಡೇಕರ್ ಹೇಳಿದರು.
ಜ.23ರಂದು ಉಡುಪಿಯಲ್ಲಿ ಬಿಜೆಪಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್‌ಗಾಂಧಿ ಅವರಿಗೆ ಈಗ ಹಿಂದುತ್ವದ ಮೇಲೆ ಪ್ರೀತಿ, ಭಕ್ತಿ ಮೂಡಿದೆ. ಅವರ ಹೇಳಿಕೆಯ ಅನಂತರ ಸಿದ್ದರಾಮಯ್ಯ ಕೂಡ ತಾನೂ ಓರ್ವ ಹಿಂದೂ ಎನ್ನು
ತ್ತಿದ್ದಾರೆ. ಆದರೆ ಕಾಂಗ್ರೆಸಿಗರ ರಾಜ ಕೀಯ ಉದ್ದೇಶದ ಹಿಂದುತ್ವದ ಪ್ರೀತಿ ಯನ್ನು ಜನ ಅರಿತುಕೊಂಡಿದ್ದಾರೆ ಎಂದು ಅವರು ಹೇಳಿದರು.
ವೋಟ್‌ಬ್ಯಾಂಕ್ ರಾಜ ಕಾರಣ: ಕಾಂಗ್ರೆಸ್ ಪಕ್ಷ ಮತಕ್ಕಾಗಿ ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಉಗ್ರ ಚಟು
ವಟಿಕೆಗಳನ್ನು ನಡೆಸುವ, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವ ಸಂಘಟನೆಗಳ ಮೇಲಿನ ಪ್ರಕರಣ ಗಳನ್ನು ಹಿಂಪಡೆದು ಆ ಸಂಘಟನೆಗಳ ಜತೆಗೆ ಕೈಜೋಡಿಸಿದೆ. ರಾಜ್ಯದಲ್ಲಿ ನಡೆದಿರುವ ಕೊಲೆ ಪ್ರಕರಣಗಳ ತನಿಖೆಯೇ ನಡೆಯುತ್ತಿಲ್ಲ ಎಂದವರು ಆರೋಪಿಸಿದರು.
ಆಗ 15 ರೂ. ಈಗ 100 ರೂ.
ಹೊಸದಿಲ್ಲಿಯಿಂದ 100 ರೂ. ಕಳುಹಿಸಿದರೆ ಅದರಲ್ಲಿ ಜನರಿಗೆ ಸಿಗುವುದು ಕೇವಲ 15 ರೂ. ಮಾತ್ರ ಎಂದು ರಾಜೀವ್ ಗಾಂಧಿಯವರು ಹೇಳುತ್ತಿದ್ದರು. ಇದು ನಿಜ. 85 ರೂ. ಕಾಂಗ್ರೆಸ್‌ನವರ ಪಾಲಾಗುತ್ತಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾದ ಅನಂತರ 100 ರೂ. ಕೂಡ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಈ ರೀತಿ ಸೋರಿಕೆಯಾಗುತ್ತಿದ್ದ 70,000 ಕೋ.ರೂ. ಹಣವನ್ನು ಮೋದಿಯವರು ದೇಶಕ್ಕಾಗಿ ಉಳಿಸಿಕೊಡುತ್ತಿದ್ದಾರೆ ಎಂದು ಜಾಬ್ಡೇಕರ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮಾರ್, ಪಕ್ಷದ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕುಯಿಲಾಡಿ ಸುರೇಶ್ ನಾಯಕ್ ಮತ್ತು ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜಾಬ್ಡೇಕರ್ ಅವರು ಪಕ್ಷದ ಪದಾಧಿಕಾರಿಗಳ ಜತೆಗೆ ಸಂವಾದ ನಡೆಸಿದರು.
ಇಂಟೆಲಿಜೆನ್ಸಿ ವಿರುದ್ಧ ಗರಂ
ಬಿಜೆಪಿ ಪದಾಧಿಕಾರಿಗಳ ಸಭೆಯ ಉದ್ಘಾಟನ ಸಮಾರಂಭದ ಅನಂತರ ಪತ್ರಕರ್ತರು ಸಭೆಯಿಂದ ಹೊರಟರು. ಆದರೆ ಗುಪ್ತಚರ ಪೊಲೀಸರು ಸಭೆಯಲ್ಲಿಯೇ ಉಳಿದಿದ್ದರು. ಇದನ್ನು ಗಮನಿಸಿದ ಪದಾಧಿಕಾರಿಯೋರ್ವರು ಜಾಬ್ಡೇಕರ್ ಅವರ ಗಮನಕ್ಕೆ ತಂದರು. ಆಗ ಜಾಬ್ಡೇಕರ್ ಅವರು ಗುಪ್ತಚರ ಇಲಾಖೆ ಸಿಬಂದಿ ಹಾಗೂ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅನಂತರ ಸಿಬಂದಿ ಹೊರನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.