![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 24, 2021, 12:54 PM IST
ಕಾರ್ಕಳ: ಪುರಸಭೆ ವ್ಯಾಾಪ್ತಿಯ ನಗರದೊಳಗಿನ ಹೊಂಡಗುಂಡಿಗಳಿಂದ ಕೂಡಿದ ರಸ್ತೆ ಅಸ್ತವ್ಯಸ್ಥೆ ಖಂಡಿಸಿ ಬ್ಲಾಕ್ ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್ ವತಿಯಿಂದ ನಗರದ ರಸ್ತೆಯ ಹೊಂಡಗಳಲ್ಲಿ ಬೈಕ್ ರ‍್ಯಾಲಿ ನಡೆಸಿ, ಗೆದ್ದವರಿಗೆ ಟ್ರೋಫಿ, ನೋವು ನಿವಾರಣೆಯ ಮೂವ್ ಮುಲಾಮು ಬಹುಮಾನ ವಿತರಿಸುವ ಮೂಲಕ ವಿನೂತನ ಪ್ರತಿಟನೆ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಹಲವು ಮಂದಿ ಸ್ಪರ್ದೆಯಲ್ಲಿ ಬೈಕ್ ನೊಂದಿಗೆ ಭಾಗವಹಿಸಿದರು. ನಗರದೊಳಗಿನ ರಸ್ತೆಗಳು ತೀವೃ ಹದಗೆಟ್ಟಿದ್ದು ಹೊಂಡಗುಂಡಿಗಳಿಂದ ತುಂಬಿ ನಡೆದು ಹೋಗಲು ಸಾಧ್ಯವಿಲ್ಲದ ಸ್ಥಿತಿ ನಗರದ ಹೃದಯ ಭಾಗ ಮಂಗಳೂರು ಕಡೆ ತೆರಳುವ ರಸ್ತೆ ಹಾಗೂ ಬಂಡಿಮಠದಿಂದ ಸಾಲ್ಮರದವರೆಗೆ ನಿರ್ಮಾಣವಾಗಿದ್ದು, ಹಲವು ಸಮಯಗಳಿಂದ ಈ ಸಮಸ್ಯೆಯಿದ್ದರೂ ಬಿಜೆಪಿ ಆಡಳಿತದ ಪುರಸಭೆ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದೆ ಇರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇದಕ್ಕೆಂದು ಆಡಳಿತಕ್ಕೆ , ಜನಪ್ರತಿನಿಧಿಗಳಿಗೆ ಮುಜುಗರ ತರುವ ರೀತಿಯಲ್ಲಿ ಹೊಂಡದ ರಸ್ತೆಯಲ್ಲಿ ಬೈಕ್ ರ‍್ಯಾಲಿ ಎನ್ನುವ ವಿನೂತನ ಪ್ರತಿಟನೆಯನ್ನು ಹಮ್ಮಿಕೊಂಡು ಸಂಬಂದಿಸಿದವರ ಗಮನ ಸೆಳೆಯುವ ಪ್ರಯತ್ನ ನಡೆಸಿತು. ಪ್ರತಿಟನೆಯಲ್ಲಿ ಬ್ಲಾಕ್, ಕಾಂಗ್ರೆಸ್, ನಗರ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನವರು ಭಾಗವಹಿಸಿದ್ದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.