ನಿರ್ಮಾಣ ಹಂತದ ಗೃಹ ಖರೀದಿ ಜಿಎಸ್‌ಟಿ ವಿಶೇಷ ಇಳಿಕೆ
Team Udayavani, Feb 26, 2019, 1:00 AM IST
ಮಣಿಪಾಲ: ಕೇಂದ್ರ ಸರಕಾರವು ನಿರ್ಮಾಣ ಹಂತದ ಮನೆಗಳ/ಫ್ಲ್ಯಾಟ್‌ಗಳ ಖರೀದಿಗೆ ಸಂಬಂಧಿಸಿದಂತೆ ಜಿಎಸ್‌ಟಿಯಲ್ಲಿ ವಿಶೇಷ ಕಡಿತ ಮಾಡಿರುವುದು ಸ್ವಂತ ಮನೆ ಹೊಂದಬೇಕೆಂಬ ಲಕ್ಷಾಂತರ ಮಂದಿಗೆ ಹೊಸ ಭರವಸೆ ಮೂಡಿಸಿದೆ.
ಜತೆಗೆ ಸ್ವಲ್ಪ ಮಂದಗತಿಯಲ್ಲಿದ್ದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಕೊಂಚ ಚೈತನ್ಯ ತುಂಬುವ ಸಾಧ್ಯತೆ ಇದೆ. ಸರಕಾರದ ಲೆಕ್ಕಾಚಾರದ ಪ್ರಕಾರ ಜಿಎಸ್‌ಟಿ ಶೇ. 12 ರಿಂದ 5ಕ್ಕೆ ಇಳಿಸಲಾಗಿದೆ. ವಿಶೇಷವಾಗಿ ಮೆಟ್ರೋ ಮತ್ತು ನಾನ್ ಮೆಟ್ರೋ ನಗರಗಳಲ್ಲಿ 45 ಲಕ್ಷ ರೂ. ಒಳಗಿನ ಮನೆಗಳ ಖರೀದಿಗೆ ಶೇ. 8ರಿಂದ ಶೇ. 1ಕ್ಕೆ ಇಳಿಸಲಾಗಿದೆ. ಹಾಗಾಗಿ ಉಡುಪಿ ಮತ್ತು ಮಂಗಳೂರು ನಗರಗಳಲ್ಲಿ 90 ಚದರ ಮೀಟರ್ ಅಂದರೆ 968 ಚದರ ಅಡಿ (ಚ.ಅ.) ಕಾಪೆìಟ್ ಏರಿಯಾದ ಫ್ಲ್ಯಾಟ್‌ಗಳನ್ನು ಶೇ. 1ರ ಜಿಎಸ್‌ಟಿ ದರದಲ್ಲಿ ಖರೀದಿಸಬಹುದು. ಇದರಿಂದ ವಸತಿ ಸಂಕೀರ್ಣಗಳ ನಿರ್ಮಾಣದ ಸಂಖ್ಯೆ, ಉದ್ಯೋಗಾವಕಾಶ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ.
ನೋಂದಣಿ ಹೊರೆ ಇಳಿದೀತೇ?
ನೋಂದಣಿ ಮೌಲ್ಯಕ್ಕೆ ಸರಿಯಾಗಿ ಶೇ. 6.72 ನೋಂದಣಿ ಶುಲ್ಕ ಮತ್ತು ಸ್ಟಾಂಪ್ ಶುಲ್ಕ ತೆರಬೇಕು. ಅಂದರೆ 968 ಚ. ಅಡಿ ಫ್ಲ್ಯಾಟ್ ಗೆ 3 ಸಾವಿರ ರೂ. ನೋಂದಣಿ ಮೌಲ್ಯದಂತೆ, ಶೇ. 6.72ರಂತೆ 1,95,148 ನೋಂದಣಿ ಶುಲ್ಕ ಮತ್ತು ಸ್ಟಾಂಪ್ ಡ್ನೂಟಿ ತೆರಬೇಕು. ಈ ಶುಲ್ಕದಲ್ಲೂ ಕಡಿತ ಮಾಡಿದ್ದಲ್ಲಿ ಇನ್ನಷ್ಟು ಒಳ್ಳೆಯದಾಗಬಹು ದೆಂಬುದು ಗ್ರಾಹಕರೊಬ್ಬರ ಅಭಿಪ್ರಾಯ.
ಬಿಲ್ಡರ್‌ಗಳಿಗೆ ಐಟಿಸಿ ಇಲ್ಲ
ಕಟ್ಟಡ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಬಿಲ್ಡರ್‌ಗಳಿಗೆ ಸಿಗುತ್ತಿದ್ದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಕಚ್ಚಾ ವಸ್ತುಗಳ ಮೇಲಿನ ಜಮೆ) ಹೊಸ ನಿಯಮಾವಳಿಯಿಂದ ಸಿಗದು. ಹೊಸ ಜಿಎಸ್‌ಟಿ ದರವನ್ನಷ್ಟೇ ಪಡೆದು ಕಟ್ಟಲು ಸಾಧ್ಯವಾಗುವುದರಿಂದ ಇನ್‌ಪುಟ್ ಕ್ರೆಡಿಟ್ ಬಿಲ್ಡರ್‌ಗಳ ಕೈ ತಪ್ಪಲಿದೆ. ಆದರೆ ಗ್ರಾಹಕರಿಗೆ ಇದರಿಂದ ನಷ್ಟವಾಗದು.
ಅತೀ ಹೆಚ್ಚು ಖರೀದಿ
2007-2015ರಲ್ಲಿ ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 2 ಸಾವಿರ, ದ.ಕ. ದಲ್ಲಿ 5 ಸಾವಿರದವರೆಗೆ ಫ್ಲ್ಯಾಟ್‌ಗಳು ಮಾರಾಟವಾಗುತ್ತಿದ್ದವು. ಆದರೆ ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಸುಮಾರು 1 ಸಾವಿರ, ದ.ಕ.ದಲ್ಲಿ 1.5 ಸಾವಿರಕ್ಕಿಳಿದಿದೆ ಎನ್ನುತ್ತವೆ ರಿಯಲ್ ಎಸ್ಟೇಟ್ ಕ್ಷೇತ್ರದ ಮೂಲಗಳು.
ಎನ್‌ಆರ್‌ಐ ನಿರಾಸಕ್ತಿ
ಫ್ಲ್ಯಾಟ್ ಖರೀದಿಯಲ್ಲಿ ಸ್ಥಳೀಯ ರದು ಶೇ. 50ರಷ್ಟು ಪಾಲಿದ್ದರೆ,ಉಳಿದದ್ದು ಎನ್‌ಆರ್‌ಐಗಳದ್ದು. ಹಲವು ಕಾರಣಗಳಿಗೆ ಸ್ಥಳೀಯರು ನಿರಾಸಕ್ತಿ ತಳೆದರೆ, ತೈಲದರ ವೈಪರೀತ್ಯದಿಂದ ಎನ್‌ಆರ್‌ಐಗಳೂ ಮನೆ ಕೊಳ್ಳುವತ್ತ, ಕ್ಷೇತ್ರದಲ್ಲಿ ಹೂಡಿಕೆಯತ್ತ ಆಸಕ್ತಿ ಕಳೆದುಕೊಂಡರು. ಹಾಗಾಗಿ ವಹಿವಾಟು ಕುಸಿದಿದ್ದು, ಹಣ ಹೂಡಿಕೆಯೂ ಶೇ. 10 ಕ್ಕೆ ಕುಸಿದಿದೆ.
ಜಿಎಸ್‌ಟಿ ಇಳಿಕೆಯಾದ ಕಾರಣ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ನೋಂದಣಿ ಮೌಲ್ಯ ಹಾಗೂ ಶುಲ್ಕದಲ್ಲೂ ಸರಕಾರ ಕಡಿತ ಮಾಡಿದರೆ ಇನ್ನಷ್ಟು ಪ್ರಯೋಜನವಾಗಲಿದೆ. ಭೂಮಿಯ ನೋಂದಣಿ ಮೌಲ್ಯದಲ್ಲಿ ತೀವ್ರ ಏರಿಕೆ ಮಾಡಿದ್ದೂ ಖರೀದಿಗೆ ಕೊಂಚ ಹಿನ್ನಡೆ ಒದಗಿಸಿತು.
-ಜೆರ್ರಿ ವಿನ್ಸೆಂಟ್ ಡಯಾಸ್, ಜಿಲ್ಲಾಧ್ಯಕ್ಷರು, ಕ್ರೆಡಾೖ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.