ಮಲ್ಪೆ: ದಲಿತರ ಸಹಕಾರಿ ಸಂಘ ಸ್ಥಾಪಿಸಲು ಸಮಾಲೋಚನ ಸಭೆ
Team Udayavani, Aug 2, 2017, 6:35 AM IST
ಮಲ್ಪೆ: ಕಾರ್ಪೊರೇಟರ್ ಹಿಡಿತದಲ್ಲಿ ತತ್ತರಿಸುತ್ತಿರುವ ದಲಿತ ಸಮಾಜವನ್ನು ಆರ್ಥಿಕವಾಗಿ ಬಲಗೊಳಿಸಿ ತನ್ನ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡುವ ವಿಶಾಲ ದೃಷ್ಟಿಕೋನದಿಂದ ಕರಾವಳಿ ದಲಿತ ಮೀನುಗಾರರ ಸಹಕಾರಿ ಸಂಘ ಸ್ಥಾಪಿಸುವ ಬಗ್ಗೆ ಸಮಾಲೋಚನಾ ಸಭೆಯು ಜು. 29 ಮಲ್ಪೆ ಲಯನ್ಸ್ ಭವನದಲ್ಲಿ ನಡೆಯಿತು.
ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ ಸಮಾಜದಲ್ಲಿ ಶೋಷಿಸಲ್ಪಟ್ಟ ಸಮುದಾಯ ಆರ್ಥಿಕವಾಗಿ ಸಬಲೀಕರಣವಾಗಲು ಸಹಕಾರಿ ಕ್ಷೇತ್ರ ಬಹಳ ಮಹತ್ವದ ಪಾತ್ರವಹಿಸುತ್ತದೆ. ಈ ಮೂಲಕ ಸಾಮಾಜಿಕ ಅಭಿವೃದ್ಧಿಗೂ ಕಾರಣವಾಗುತ್ತದೆ ಎಂದ ಅವರು ಸಹಕಾರಿ ಸಂಘ ಸ್ಥಾಪಿಸಲು ಬೇಕಾದ ಸಂಪನ್ಮೂಲಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್. ರಮೇಶ್ ಮಾತನಾಡಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದಲಿತರು ಬಲಗೊಳ್ಳದೆ ಸಾಮಾಜಿಕ ಬದಲಾವಣೆ ಅಸಾಧ್ಯ. ದಲಿತರ ಸಹಕಾರಿ ಸಂಘಕ್ಕೆ ತಮ್ಮ ಇಲಾಖೆಯಿಂದ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದೇವರಾಜ್ ದೇಶದ ವಿವಿಧ ರಾಜ್ಯದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣವಾದ ಹಲವಾರು ನಿದರ್ಶನ ಕೊಟ್ಟು ಮಲ್ಪೆಯ ದಲಿತರ ಈ ಸಹಕಾರಿ ಸಂಘ ರಾಜ್ಯದ ದಲಿತರ ಸ್ಥಿತಿಗತಿಯ ಬದಲಾವಣೆಗೆ ಕಾರಣವಾಗಲಿ ಎಂದರು.
ಎಸ್‌ಡಿಸಿಸಿ ಬ್ಯಾಂಕಿನ ಕಿನ್ನಿಮೂಲ್ಕಿ ಶಾಖೆ ಹಿರಿಯ ಪ್ರಬಂಧಕ ಸುನಿಲ್ ಲಕ್ಷ್ಮೀನಗರ, ಪಡುಬಿದ್ರಿ ಶಾಖೆಯ ವ್ಯವಸ್ಥಾಪಕ ಸುಧಾಕರ್ ಕಾಂಚನ್ ಬಾಪುತೋಟ, ಮಹಾಲಕೀÒ$¾ ಬ್ಯಾಂಕಿನ ನಿವೃತ್ತ ಅಧಿಕಾರಿ ಪದ್ಮನಾಭ ಬಂಗೇರ ಕಲ್ಮಾಡಿ, ಸಹಕಾರಿ ಸಂಘದ ನಿಬಂಧಕ ಸುಧೀರ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಭಾಸ್ಕರ್, ದಲಿತ ಮುಖಂಡ ಸುಂದರ ಕಪ್ಪೆಟ್ಟು, ರಮೇಶ್ ಪಾಲ್, ದಲಿತ ಮುಖಂಡರಾದ ಹರೀಶ್ ಸಾಲ್ಯಾನ್ ನೆರ್ಗಿ, ಸುರೇಶ್ ಪಾಲನ್, ಪ್ರಸಾದ್ ಮಲ್ಪೆ, ಕುಮಾರ್ ತೊಟ್ಟಂ, ಶಶಿಕಲಾ ತೊಟ್ಟಂ, ಸಂಧ್ಯಾ ನೆರ್ಗಿ ಗೀತಾ ಮಹಾಬಲ, ಪೂರ್ಣಿಮಾ ಬಲರಾಮನಗರ, ಹರೀಶ್ ತಟ್ಟಂ, ಉಡುಪಿ ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ವಾಸು ಮಾಸ್ತರ್, ವಸಂತ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು. ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರ ಪರಿಕಲ್ಪನೆಯಲ್ಲಿ ಆಯೋಜಿಸಿದ ಈ ಸಭೆಯಲ್ಲಿ ಸುಮಾರು 500ಕ್ಕೂ ಹೆಚ್ಚು ದಲಿತ ಯುವಕ ಯುವತಿಯರು ಭಾಗವಹಿಸಿದ್ದರು.
ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವಾನ್‌ದಾಸ್ ಸ್ವಾಗತಿಸಿದರು. ನಗರಸಭಾ ಸದಸ್ಯ ಗಣೇಶ್ ನೆರ್ಗಿ ಕಾರ್ಯಕ್ರಮ ನಿರೂಪಿಸಿದರು. ಕವಿತಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.