ಕಾಂಕ್ರೀಟ್‌ಗೆ ಕರಾರು; ಆದರೆ ಆಗಿದ್ದು ಡಾಮರು ಕಾಮಗಾರಿ
ಮೀನುಗಾರಿಕಾ ಬಂದರಿನ ಒಳರಸ್ತೆ
Team Udayavani, Feb 21, 2020, 5:50 AM IST
ಗಂಗೊಳ್ಳಿ: ಕಡಲ್ಕೊರೆತ ತಡೆಗಾಗಿ ಗಂಗೊಳ್ಳಿಯಲ್ಲಿ ಕೈಗೊಂಡ ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಇಲ್ಲಿನ ಮೀನುಗಾರಿಕಾ ಬಂದರಿನ ಒಳ ರಸ್ತೆಗಳಿಗೆ ಅಪಾರ ಹಾನಿಯಾಗಿದ್ದು, ಇದನ್ನು ಕಾಂಕ್ರೀಟಿಕರಣ ಮಾಡಿಕೊಡುವುದಾಗಿ ಡಿಸಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕರಾರು ಆಗಿದ್ದರೂ, ಈಗ ಕಳಪೆ ಡಾಮರೀಕರಣ ಮಾಡಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಮೀನುಗಾರರಿಂದ ವ್ಯಕ್ತವಾಗಿದೆ.
ಗಂಗೊಳ್ಳಿಯಲ್ಲಿನ ಬ್ರೇಕ್ ವಾಟರ್ ಕಾಮಗಾರಿಗೆ ಬೇಕಾದ ಟೆಟ್ರಾಫೈಡ್ ಮತ್ತಿತರ ಘನ ಗಾತ್ರದ ಸರಕುಗಳ ಸಾಗಾಟ ವಾಹನಗಳಿಂದಾಗಿ ಬಂದರಿನೊಳಗಿನ ಎಲ್ಲ ರಸ್ತೆಗಳ ಡಾಮರೆಲ್ಲ ಕಿತ್ತು ಹೋಗಿದೆ. ಈ ಸಂಬಂಧ ಮೀನುಗಾರರು ಅನೇಕ ಸಮಯಗಳಿಂದ ಕರಾರರಿನಂತೆ ಕಾಂಕ್ರೀಟಿಕರಣ ಮಾಡಿಕೊಡಿ ಎನ್ನುವುದಾಗಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರಲ್ಲಿ ಬೇಡಿಕೆ ಇಡುತ್ತಲೇ ಬಂದಿದ್ದರೂ, ಆಗಿರಲಿಲ್ಲ.
ಅಂತೂ – ಇಂತೂ ಎರಡು ವಾರಗಳ ಹಿಂದೆ ಒಳ ರಸ್ತೆಗಳ ದುರಸ್ತಿಗೆ ಗುತ್ತಿಗೆ ಸಂಸ್ಥೆ ಮುಂದಾಗಿತ್ತು. ಈಗ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಮೀನುಗಾರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ರಸ್ತೆ ಕೇವಲ 9 ಅಡಿ ಅಗಲಿ ಇದೆ. ಕನಿಷ್ಠ 12 ಅಡಿ ಅಗಲೀಕರಣವಾಗಬೇಕು.
ಮುಖ್ಯ ರಸ್ತೆಗೂ ಹಾನಿ
ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಕೇವಲ ಬಂದರಿನೊಳಗಿನ ಒಳ ರಸ್ತೆಗಳು ಮಾತ್ರವಲ್ಲದೆ, ಕುಂದಾಪುರ – ಗಂಗೊಳ್ಳಿ ಮುಖ್ಯ ರಸ್ತೆಗೂ ಹಾನಿಯಾಗಿದೆ. ಇದನ್ನು ಕೂಡ ಸರಿಮಾಡಿಕೊಡುವ ಜವಾಬ್ದಾರಿ ಗುತ್ತಿಗೆ ಸಂಸ್ಥೆಯವರದ್ದೆ ಆಗಿದೆ ಎನ್ನುವುದು ಮೀನುಗಾರರ ಆಗ್ರಹವಾಗಿದೆ.
ಕಳಪೆಯಲ್ಲ
ಈ ರಸ್ತೆಯಯು ಹಿಂದೆ ಹೇಗಿತ್ತೋ, ಹಾಗೇ ಮಾಡಿಕೊಟ್ಟಿದ್ದಾರೆ. ಗುತ್ತಿಗೆದಾರರೇ ಸ್ವತಃ ಕೈಯಿಂದ ಹಣ ಹಾಕಿ ಕಾಮಗಾರಿ ನಿರ್ವಹಿಸಿದ್ದಾರೆ. ಅವರಿಗೆ ಕೇಂದ್ರದಿಂದ ಇನ್ನೂ ಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ಇದು ಮುಂದಿನ 2-3 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಇದು ಕಳಪೆಯಲ್ಲ ಎನ್ನುವುದಾಗಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ತಿಳಿಸಿದ್ದಾರೆ.
ಡಿಸಿ ಸಭೆಯಲ್ಲಿ ಏನು ತೀರ್ಮಾನ?
2015 ರಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಆಗಿನ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಮ್ಮುಖದಲ್ಲಿ ಅಧಿಕಾರಿಗಳು, ಮೀನುಗಾರರು, ಗುತ್ತಿಗೆ ಸಂಸ್ಥೆ ಅಧಿಕಾರಿಗಳ ಸಮ್ಮುಖದಲ್ಲಿ ಕುಂದು ಕೊರತೆ ಸಭೆ ನಡೆದಿತ್ತು. ಆ ಸಭೆಯಲ್ಲಿ ಒಂದೋ ಗುತ್ತಿಗೆ ಸಂಸ್ಥೆಯುವರು ಪ್ರತ್ಯೇಕ ರಸ್ತೆ ನಿರ್ಮಿಸಿ ಸರಕು ಸಾಗಾಟ ಮಾಡಬೇಕು ಎನ್ನುವ ಆಗ್ರಹ ಮೀನುಗಾರರಿಂದ ಕೇಳಿ ಬಂದಿತ್ತು. ಸಭೆಯಲ್ಲಿ ಆಗಿನ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಬಂದರಿನೊಳಗೆ ಹಾಳಾದ ರಸ್ತೆಯನ್ನು ಗುತ್ತಿಗೆದಾರರೇ ಕಾಮಗಾರಿ ಮುಗಿದ ಬಳಿಕ ಸಂಪೂರ್ಣ ಕಾಂಕ್ರೀಟಿಕರಣ ಮಾಡಬೇಕು ಎಂದು ಹೇಳಿದ್ದರು. ಇದಲ್ಲದೆ ಪರಿಸರ ರಕ್ಷಣೆಗಾಗಿ ಶೇ.5 ರಷ್ಟು ಅನುದಾನವನ್ನು ವಿನಿಯೋಗಿಸಬೇಕು ಎನ್ನುವುದು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಕಾಂಕ್ರೀಟಿಕರಣವೇ ಆಗಬೇಕು
ಈ ಹಿಂದೆ ಡಿಸಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾಂಕ್ರೀಟಿಕರಣ ಆಗಬೇಕು ಎನ್ನುವ ತೀರ್ಮಾನ ಆಗಿತ್ತು. ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಗಂಗೊಳ್ಳಿಯ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು ಕೂಡ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಕರೆಯಿಸಿ ವಿವರಣೆ ಪಡೆಯಲಾಗುವುದು. ಕರಾರಿನಂತೆ ಕಾಂಕ್ರೀಟಿಕರಣವೇ ಆಗಬೇಕು.
– ಗಣೇಶ್ ಕೆ.,
ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ
ತೀರಾ ಕಳಪೆ ಕಾಮಗಾರಿ
ಈಗ ಮಾಡಿರುವ ಡಾಮರೀಕರಣ ಕಾಮಗಾರಿ ತೀರಾ ಕಳಪೆಯಾಗಿದೆ. ಇಂಜಿನಿಯರ್‌ಗಳೇ ಗುತ್ತಿಗೆ ಸಂಸ್ಥೆಯವರ ಪರ ವಹಿಸಿ ಮಾತನಾಡುತ್ತಿದ್ದಾರೆ. ಬ್ರೇಕ್ ವಾಟರ್ ಕಾಮಗಾರಿಯಿಂದಲೇ ನಮ್ಮ ಬಂದರಿನ ರಸ್ತೆಗಳಿಗೆ ಹಾನಿಯಾಗಿದ್ದು, ಆದರೆ ಈಗ ಅವರೇ ಸ್ವಂತ ಕೈಯಿಂದ ಹಣ ಹಾಕಿ ಕಾಮಗಾರಿ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಈ ಹಿಂದೆ ಕಾಂಕ್ರೀಟಿಕರಣ ಮಾಡಿಕೊಡಲು ಅವರಿಗೆ ಸೂಚಿಸಲಾಗಿತ್ತು. ಆದರೆ ಇವರು ಕೇವಲ ಡಾಮರೀಕರಣ ಮಾತ್ರ ಮಾಡಿದ್ದಾರೆ.
– ರವಿಶಂಕರ್ ಖಾರ್ವಿ, ಮೀನುಗಾರ ಮುಖಂಡರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.