ಅಡುಗೆ ಅನಿಲ ಪರಿಶೀಲನೆ ಗೊಂದಲ: ಸರಕಾರದ ಸೂಚನೆ ಇಲ್ಲದಿದ್ದರೂ ಪರಿಶೀಲನೆ
ಪರೀಕ್ಷೆ ನಡೆಸದೇ ಹಣ ವಸೂಲಿ ಆರೋಪ
Team Udayavani, Dec 28, 2022, 6:50 AM IST
ಕುಂದಾಪುರ: ಅಡುಗೆ ಅನಿಲ ಗ್ರಾಹಕರ ಮನೆಗೆ ತೆರಳಿ ವಿವಿಧ ತಂಡದವರು ತಪಾಸಣೆ ನಡೆಸುತ್ತಿದ್ದು ಮಾಹಿತಿ ಇಲ್ಲದೆ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ವಿತರಕ ಸಂಸ್ಥೆಗಳ ಆದೇಶದಂತೆ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ಎಲ್ಲ ಮಾಹಿತಿಗಳನ್ನೂ ವಿತರಕ ಸಂಸ್ಥೆಗೆ ಕಳುಹಿಸಲಾಗುತ್ತದೆ. ಪಡೆದ ಹಣಕ್ಕೆ ರಶೀದಿ ನೀಡಲಾಗುತ್ತದೆ. ದೂರುಗಳಿದ್ದರೆ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ಗೊಂದಲ ಅನಗತ್ಯ ಎಂದು ವಿತರಕರು ಹೇಳುತ್ತಾರೆ.
ಶುಲ್ಕ ಎಷ್ಟು?
ಅನಿಲ ವಿತರಕ ಕಂಪೆನಿಗಳ ಪರವಾಗಿ ಸಿಬಂದಿ ಗ್ರಾಹಕರ ಮನೆಗೆ ತೆರಳಿ ಅನಿಲದ ಸಂಪರ್ಕ, ಪೈಪ್, ಸ್ಟವ್, ಅನಿಲ ಜಾಡಿ ಇರಿಸಿದ ಸ್ಥಳ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ. ಚೆಕ್‌ಲಿಸ್ಟ್‌ಗೆ ಗ್ರಾಹಕರ ಸಹಿ ಪಡೆದು ತಪಾಸಣೆ ಶುಲ್ಕವೆಂದು 236 ರೂ. ವಸೂಲಿ ಮಾಡುತ್ತಿದ್ದಾರೆ. ಪೈಪ್ ಬದಲಿಸಿದರೆ ಪ್ರತ್ಯೇಕ 190 ರೂ. ಕೊಡಬೇಕು. ಒಟ್ಟು 426 ರೂ. ಆಗುತ್ತದೆ.
ಗೊಂದಲ
ಅನಿಲ ಸಂಪರ್ಕದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಶುಲ್ಕ ಪಡೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕೆಲವರು ಪಡೆದ ಹಣಕ್ಕೆ ರಸೀದಿ ನೀಡಿಲ್ಲ ಎಂದೂ ಆಪಾದಿಸುತ್ತಿದ್ದಾರೆ. ಪರೀಕ್ಷೆಯೇ ನಡೆಸದೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಅಪವಾದವೂ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಮೊತ್ತ ದುಬಾರಿಯೇ. 5 ವರ್ಷಗಳಿಗೊಮ್ಮೆ ತಪಾಸಣೆ ಎನ್ನುತ್ತಾರಾದರೂ 2020ರಲ್ಲಿ ತಪಾಸಣೆ ನಡೆಸಿದ್ದು, ಎರಡೇ ವರ್ಷದಲ್ಲಿ ಮತ್ತೂಮ್ಮೆ ತಪಾಸಣೆ ನೆಪದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದೂ ಕೆಲವು ಗ್ರಾಹಕರು ಆರೋಪಿಸುತ್ತಿದ್ದಾರೆ.
ಜಾಲತಾಣದಲ್ಲಿ
ಇದರಲ್ಲೇನೋ ಗೋಲ್‌ಮಾಲ್ ಇದೆ ಎಂಬ ಯೋಚನೆಯಲ್ಲಿ ಕೆಲವು ಗ್ರಾಹಕರು ಮನೆಗೆ ಬಂದ ಸಿಬಂದಿಯ ಫೋಟೋ ತೆಗೆದು ಜಾಲತಾಣದಲ್ಲಿ ಹಾಕಿ “ಇಂತಹವರು ಬಂದರೆ ಅಡುಗೆ ಅನಿಲ ಸಂಪರ್ಕ ತಪಾಸಣೆ ಮಾಡಿಸಿಕೊಳ್ಳಬೇಡಿ’ ಎಂದು ಬರೆದು ಪ್ರಸಾರ ಮಾಡುತ್ತಿದ್ದಾರೆ. ಗ್ರಾಹಕರು ಅಡುಗೆ ಅನಿಲ ವಿತರಕ ಸಂಸ್ಥೆಗಳನ್ನು ಸಂಪರ್ಕಿಸಿದರೆ “ಇದು ಕಡ್ಡಾಯವಾಗಿ ಮಾಡಿಸಬೇಕಾದ ತಪಾಸಣೆ’ ಎಂಬ ಉತ್ತರ ಬರುತ್ತದೆ.
ವಿಮೆ ಸೌಲಭ್ಯ
ಅಡುಗೆ ಅನಿಲ ಸಂಪರ್ಕ ಪಡೆದ ಕೂಡಲೇ ಪ್ರತೀ ಗ್ರಾಹಕರೂ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಗ್ರಾಹಕರ ತಪ್ಪುಗಳ ಹೊರತಾಗಿ ಅನಿಲ ವಿತರಕ ಸಂಸ್ಥೆಯವರ ತಪ್ಪಿನಿಂದ ಅನಾಹುತಗಳು ಸಂಭವಿಸಿದರೆ ಅದಕ್ಕೆ ವಿಮಾ ಸೌಲಭ್ಯ ಇರುತ್ತದೆ. ಹಾಗೆಂದು ತಪಾಸಣೆಗೂ ವಿಮೆಗೂ ನೇರ ಸಂಬಂಧ ಇಲ್ಲ, ತಪಾಸಣೆ ಮಾಡಿದರಷ್ಟೇ ವಿಮೆ ವ್ಯಾಪ್ತಿಗೆ ಒಳಪಡುವುದು ಎಂಬ ನಿಯಮವೇನೂ ಇಲ್ಲ ಎನ್ನುತ್ತಾರೆ ವಿತರಕರು.
ಅಡುಗೆ ಅನಿಲ ಗ್ರಾಹಕರು ಪ್ರತಿಯೊಬ್ಬರೂ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ. ಅದಕ್ಕಾಗಿ 5 ವರ್ಷಗಳಿಗೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಸಿಲಿಂಡರ್ ಸ್ಫೋಟದಂತಹ ಯಾವುದೇ ಅಪಘಾತದಲ್ಲಿ ವಿಮೆ ಪರಿಹಾರದ ಸಂದರ್ಭ ಬಂದಾಗ “ಪರಿಶೀಲನೆ ನಡೆಸದೇ ಗ್ರಾಹಕರ ನಿರ್ಲಕ್ಷ್ಯ’ ಎಂದು ಪ್ರತಿಪಾದನೆ ಆದರೆ, ವಿಮೆ ದೊರೆಯದಿದ್ದರೆ ತೊಂದರೆಯಾಗುತ್ತದೆ. ಆದರೂ ತಪಾಸಣೆ ಐಚ್ಛಿಕ. ಗ್ರಾಹಕರು ಪರಿಶೀಲನೆ ಬೇಡ ಎಂದು ಘೋಷಣಾಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ.
– ಹಸೀಬ್ ಕೆ., ಅಸಿಸ್ಟೆಂಟ್ ಮ್ಯಾನೇಜರ್, ಮಾರಾಟ ವಿಭಾಗ ಎಲ್‌ಪಿಜಿ, ಮಂಗಳೂರು ವಲಯ
ತಪಾಸಣೆಗೆ ಸಂಬಂಧಿಸಿದ ಒಳಿತು, ಕೆಡುಕುಗಳ ಕುರಿತು
ಗ್ರಾಹಕರಿಗೆ ಸ್ಪಷ್ಟ ತಿಳಿವಳಿಕೆ ನೀಡಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು. ಇದನ್ನು ನಮ್ಮ ಆಹಾರ ನಿರೀಕ್ಷಕರ ಮೂಲಕ ತಿಳಿಸಲು ಕ್ರಮ ಕೈಗೊಳ್ಳುತ್ತೇನೆ. – ಕೂರ್ಮಾ ರಾವ್, ಉಡುಪಿ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.