ಬಡ ಕುಟುಂಬಕ್ಕೆ ಬೇಕಿದೆ ಸಹೃದಯಿಗಳ ಸಹಕಾರ
Team Udayavani, Mar 29, 2018, 6:15 AM IST
ಅಜೆಕಾರು: ಗಂಡ, ಹೆಂಡತಿ ಓರ್ವ ಮಗಳು ಕೂಡಿರುವ ಪುಟ್ಟ ಸಂಸಾರ. ಬಡತನವಿದ್ದರೂ ಶ್ರಮವಹಿಸಿ ದುಡಿಯುತ್ತಿದ್ದರಿಂದ ಜೀವನ ನೆಮ್ಮದಿಯಿಂದ ಸಾಗುತ್ತಿತ್ತು. ಆದರೆ ಕುಟುಂಬದ ಯಜಮಾನ ಪಾರ್ಶ್ವವಾಯು ಪೀಡಿತನಾದರೆ ಪತ್ನಿಗೆ ಗೆ ಬ್ರೆçನ್ ಟ್ಯೂಮರ್ ಕಾಯಿಲೆ ಇದ್ದು, ಸಂಸಾರದ ಹೊಣೆ ಮಗಳ ಮೇಲಿದೆ.
ಹಿರ್ಗಾನ ಗ್ರಾಮ ನೆಲ್ಲಿಕಟ್ಟೆ ಬ್ರಹ್ಮನಗರದ 5 ಸೆಂಟ್ಸ್ ನಿವಾಸಿ ತುಕ್ಕ ಪಾಣಾರ ಕುಟುಂಬದ ಕಣ್ಣೀರ ಕಥೆಯಿದು. ಕಳೆದ 2 ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ ತನ್ನ ಎಡಭಾಗದ ಕೈಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿರುವ ತುಕ್ಕ ಪಾಣಾರ ಒಂದೆಡೆಯಾದರೆ ಕಳೆದ ಒಂದೂವರೆ ವರ್ಷಗಳಿಂದ ಬ್ರೈನ್ ಟ್ಯೂಮರ್ ಕಾಯಿಲೆಗೆ ತುತ್ತಾಗಿರುವ ಪತ್ನಿ ಸುಗುಣಾ ಇನ್ನೊಂದೆಡೆ. ಇವರಿಬ್ಬರ ಆರೈಕೆಯ ಹೊಣೆ ಮಗಳು ಗೀತಾರದ್ದು.
ಮನೆ ಸಮೀಪದ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಗೀತಾರವರು ತಂದೆ ತಾಯಿಯ ಆರೈಕೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಇವರ ದುಡಿಮೆಯ ಹಣ ಇಬ್ಬರ ಔಷಧಕ್ಕೆ ಸಾಕಾಗದೆ ಚಿಂತಾಕ್ರಾಂತರಾಗಿದ್ದಾರೆ. ತುಕ್ಕ ಪಾಣಾರರವರು ಮನೆ ಸಮೀಪವೇ ಚಿಕ್ಕ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರೆ ಪತ್ನಿ ಸುಗುಣಾ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿದ್ದರು. ಆದರೆ ಈಗ ಖಾಯಿಲೆಗೆ ತುತ್ತಾಗಿರುವುದರಿಂದ ಮಗಳು ಗೀತಾರವರ ದುಡಿಮೆಯೇ ಇಡೀ ಕುಟುಂಬಕ್ಕೆ ಆಸರೆಯಾಗಿದೆ.
ತುಕ್ಕ ಪಾಣಾರರವರಿಗೆ ಈ ವರೆಗೆ ಸುಮಾರು 5 ಲಕ್ಷ ರೂ. ಖರ್ಚಾಗಿದ್ದರೆ ಸುಗುಣಾರವರಿಗೆ ಸುಮಾರು ರೂ. 3ಲಕ್ಷದಷ್ಟು ಖರ್ಚಾಗಿದೆ. ಈಗಲೂ ಸಹ ತುಕ್ಕ ಪಾಣಾರರಿಗೆ ಪ್ರತೀ ತಿಂಗಳು ಔಷಧಕ್ಕೆ ಖರ್ಚು 4ರಿಂದ 5 ಸಾವಿರ ರೂಪಾಯಿ ಬಂದರೆ ಅವರ ಪತ್ನಿ ಸುಗುಣ ಅವರಿಗೆ ಪ್ರತೀ ತಿಂಗಳು ಸಿಟಿ ಸ್ಕ್ಯಾನಿಂಗ್ ಸಹಿತ ಔಷಧಕ್ಕೆ 10 ಸಾವಿರ ರೂ. ವರೆಗೆ ಖರ್ಚು ಬರುತ್ತಿದೆ.
ಗೀತಾರವರು ಸುಮಾರು 2.50 ಲಕ್ಷ ರೂ.ನಷ್ಟು ಈಗಾಗಲೇ ಸಾಲ ಮಾಡಿದ್ದು ಮುಂದೆ ತಂದೆ ತಾಯಿಗೆ ಔಷಧ ಖರ್ಚು ಹೇಗೆ ಭರಿಸುವುದು ಎಂಬ ಚಿಂತೆಯಲ್ಲಿದ್ದಾರೆ.
ತುಕ್ಕ ಪಾಣಾರರವರಿಗೆ ಉದ್ಯಾವರದ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದರೆ, ಸುಗುಣಾರವರಿಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಹಾಯ ನೀಡುವಿರಾದರೆ
ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಈ ಕುಟುಂಬವು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದೆ. ನೆರವಾಗುವವರು ಗೀತಾರವರ ಕರ್ನಾಟಕ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆ ನಂಬ್ರ 4042500101765501ಕ್ಕೆ ನೀಡಬಹುದು. ಐಎಫ್ಎಸ್‌ಸಿ ಕೋಡ್ – ಕೆಎಆರ್‌ಬಿ 0000404 ಮತ್ತು ಎಂಐಸಿಆರ್ ಕೋಡ್ – 575052027
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.