ಕೊರೊನಾ ವೈರಸ್‌ನಿಂದ ಸಾರ್ವಜನಿಕರು ರಕ್ಷಣೆ ಪಡೆಯುವುದು ಹೇಗೆ ? ಇಲ್ಲಿದೆ ಇಲಾಖೆ ಸೂಚನೆ
Team Udayavani, Mar 5, 2020, 7:30 PM IST
ಉಡುಪಿ: ಕೊರೊನಾ ವೈರಸ್‌ನಿಂದ ಸಾರ್ವಜನಿಕರು ಹೇಗೆ ಸುರಕ್ಷಿತವಾಗಿರಬೇಕೆಂದು ಆರೋಗ್ಯ ಸಚಿವಾಲಯ ತುರ್ತು ಅಧಿಸೂಚನೆ ಹೊರಡಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೋಂಕಿಗೆ ಒಳಗಾದ ಅನಂತರ ಯಾವುದೇ ಚಿಕಿತ್ಸೆ ಇಲ್ಲ. ಇದನ್ನು ತಡೆಗಟ್ಟಲು ಗಂಟಲನ್ನು ಸದಾಕಾಲ ತೇವವಾಗಿರಿಸಿಕೊಳ್ಳಬೇಕು, ಸದಾ ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬೇಕು. ವೈರಾಣು ನೀರಿನ ಮೂಲಕ ಹೊಟ್ಟೆಗೆ ಹೋದ ಬಳಿಕ ಯಾವುದೇ ತೊಂದರೆ ಇರುವುದಿಲ್ಲ.
ಗಂಟಲ ಪೊರೆಯು ಒಣಗಿದ ಅನಂತರ ವೈರಸ್ 10 ನಿಮಿಷಗಳಲ್ಲಿ ದೇಹವನ್ನು ಸೇರಿ ಆಕ್ರಮಣ ಮಾಡುವ ಕಾರಣ ನೀರು ಕುಡಿಯುತ್ತಿರಬೇಕು.
ಮುಖವಾಡಕ್ಕೆ ಹೆಚ್ಚಿದ ಬೇಡಿಕೆ
ವಯಸ್ಕರು 50-80 ಸಿಸಿ ಬೆಚ್ಚಗಿನ ನೀರನ್ನು ಮತ್ತು ಮಕ್ಕಳು 30-50 ಸಿಸಿ ಬೆಚ್ಚಗಿನ ನೀರನ್ನು ಕುಡಿಯಬೇಕು. ಮಾರ್ಚ್ ಅಂತ್ಯದವರೆಗೆ ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಪ್ರಯಾಣಿಸುವ ಅಗತ್ಯವಿದ್ದರೆ ಮುಖವಾಡ ಧರಿಸಿ ಪ್ರಯಾಣಿಸಿ ಎಂದು ಕರೆ ಕೊಡಲಾಗಿದೆ. ಮುಖವಾಡಕ್ಕೂ ಹೆಚ್ಚಿನ ಬೇಡಿಕೆಯಿದ್ದು ಇದರ ಪೂರೈಕೆಯೂ ಬೇಡಿಕೆಯಷ್ಟು ಇಲ್ಲದೇ ಪರದಾಡುವಂತಾಗಿದೆ. ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಮುಖವಾಡ ಧರಿಸಿ ಬರಲು ಹೇಳಲಾಗಿದೆ.
ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದನ್ನು ತಪ್ಪಿಸಿ. ಸಿ ವಿಟಮಿನ್ ಇರುವ ಆಹಾರವನ್ನು ಉಪಯೋಗಿಸಿ ಎಂದು ಸಲಹೆ ನೀಡಲಾಗಿದೆ.
ರೋಗ ಲಕ್ಷಣಗಳು
– ಅಧಿಕ ಜ್ವರ ಇರುತ್ತದೆ. ಜ್ವರವು ಪದೇ ಪದೇ ಪುನರಾವರ್ತಿಸುತ್ತದೆ.
– ಜ್ವರದ ಅನಂತರ ದೀರ್ಘಕಾಲದ ಕೆಮ್ಮು ಬರುತ್ತದೆ.
– ಮಕ್ಕಳು ಬೇಗನೆ ಈ ರೋಗಕ್ಕೆ ಪೀಡಿತರಾಗುತ್ತಾರೆ.
– ವಯಸ್ಕರಿಗೆ ಸಾಮಾನ್ಯವಾಗಿ ಆತಂಕ, ತಲೆನೋವು ಮತ್ತು ಮುಖ್ಯವಾಗಿ ಉಸಿರಾಟ ಸಂಬಂಧಿತ ತೊಂದರೆ ಕಾಣಿಸಿಕೊಳ್ಳುತ್ತದೆ.
– ಇದು ಹೆಚ್ಚು ಸಾಂಕ್ರಾಮಿಕವಾಗಿದ್ದು ಬಹುಬೇಗನೆ ಇನ್ನೊಬ್ಬರಿಗೆ ಹರಡುತ್ತದೆ.
ಅಮೃತಬಳ್ಳಿ, ಪಪ್ಪಾಯ ಸೇವಿಸಿ
ಕೊರೊನಾ ವೈರಸ್‌ನಿಂದ ಪಾರಾಗಲು ನೈಸರ್ಗಿಕ ಔಷಧಗಳನ್ನು ಸೇವಿಸಿ ಎಂಬ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೃತಬಳ್ಳಿ, ಹಣ್ಣಾಗದ ಪಪ್ಪಾಯಿ ಹೋಳುಗಳನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಅದಕ್ಕೆ ನಾಲ್ಕು ಪಟ್ಟು ನೀರು ಹಾಕಬೇಕು. ನಾಲ್ಕು ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ, ಕಾಳು ಮೆಣಸು, ವಾಮ (ಓಂಕಾಳು) ಹಾಕಿ ಕುದಿಸಬೇಕು. 1/4 ಅಂಶಕ್ಕೆ ಇಳಿಸಿ ಇದನ್ನು ಸೇವಿಸಬೇಕು ಎಂದು ತಿಳಿಸಲಾಗಿದೆ.
ಇದರ ಕುರಿತು ಉದ್ಯಾವರ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಜಾನಪದ ಔಷಧಿ ಸಂಶೋಧನ ವಿಭಾಗದ ಮುಖ್ಯಸ್ಥೆ ಡಾ| ಚೈತ್ರಾ ಹೆಬ್ಟಾರ್ ಅವರ ಪ್ರತಿಕ್ರಿಯೆ ಕೇಳಿದಾಗ “ಸದ್ಯ ಕೊರೊನಾ ಕುರಿತು ಯಾವುದೇ ಸಂಶೋಧನೆಯಾಗಿಲ್ಲ. ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳೂ ಆ್ಯಂಟಿ ವೈರಲ್ ಅಂಶಗಳನ್ನು ಮತ್ತು ಜ್ವರಹರ ಗುಣಗಳನ್ನು ಹೊಂದಿವೆ. ಕೊರೊನಾ ಶ್ವಾಸಕೋಶಕ್ಕೆ ಸಂಬಂಧಿಸಿ ಹರಡುತ್ತಿರುವ ಜ್ವರ. ಈ ಔಷಧೀಯ ಗುಣಗಳುಳ್ಳ ಕಷಾಯವನ್ನು ಸೇವಿಸಿದರೆ ಶ್ವಾಸಕೋಶ ಶುದ್ಧಿಯಾಗುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.