ಕುಂದಾಪುರ: ಲಾಡ್ಜ್ನಲ್ಲಿ ಜೋಡಿ ಆತ್ಮಹತ್ಯೆ
Team Udayavani, Oct 1, 2018, 10:30 AM IST
ಕುಂದಾಪುರ: ಶಾಸ್ತ್ರೀ ಸರ್ಕಲ್ ಸಮೀಪದ ಖಾಸಗಿ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದ ಶೃಂಗೇರಿ ಮೂಲದ 43 ವರ್ಷದ ವ್ಯಕ್ತಿ ಹಾಗೂ 30ರ ಹರೆಯದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ಸುಮಾರು 11.30ರ ಸುಮಾರಿಗೆ ಬೆಳಕಿಗೆ ಬಂದಿದೆ.
ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದ ಸಿಂಧುವಳ್ಳಿಯ ಗುರುಮೂರ್ತಿ (43) ಹಾಗೂ ಅದೇ ಗ್ರಾಮದ ನೇತ್ರಳ್ಳಿ ನಿವಾಸಿ ರಮೇಶ್ ಮೊಗವೀರ ಅವರ ಪತ್ನಿ ಶಾರದಾ (30) ಆತ್ಮಹತ್ಯೆ ಮಾಡಿಕೊಂಡವರು.
ಬೆಳಗ್ಗೆ 11 ಗಂಟೆಯಾದರೂ ಬಾಗಿಲು ತೆರೆಯದ ಕಾರಣ ಲಾಡ್ಜ್ ಸಿಬಂದಿ ಬಾಗಿಲು ಬಡಿದರು. ಆದರೂ ಪ್ರತಿಕ್ರಿಯೆ ಬಾರದ್ದರಿಂದ ಸಂಶಯಗೊಂಡು ಕಿಟಕಿ ಮೂಲಕ ಇಣುಕಿ ನೋಡಿದಾಗ ಗುರುಮೂರ್ತಿ ಹಾಸಿಗೆಯ ಮೇಲೆ ಹಾಗೂ ಶಾರದಾ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಇಬ್ಬರ ಮನೆಯವರೂ ಶೃಂಗೇರಿಯಿಂದ ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯ ಬಾಗಿಲು ಒಡೆಯಲಾಯಿತು.
ಗುರುಮೂರ್ತಿ ಮನೆಗೆ ಶಾರದಾ ಹಾಗೂ ಅವರ ಪತಿ ರಮೇಶ್ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಈ ವೇಳೆ ಶಾರದಾ ಹಾಗೂ ಗುರುಮೂರ್ತಿ ಮಧ್ಯೆ ಆತ್ಮೀಯತೆ ಬೆಳೆಯಿತು ಎನ್ನಲಾಗಿದೆ. ಅವರಿಬ್ಬರ ಸಂಬಂಧ ಊರಿನವರಿಗೆ ಗೊತ್ತಾಗುತ್ತದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಗುರುಮೂರ್ತಿ ಬೆಂಗಳೂರಿನಲ್ಲಿರುವುದಾಗಿ ಸಂಬಂಧಿಕರಿಗೆ ಫೋನ್ ಮೂಲಕ ತಿಳಿಸಿದ್ದಾರೆ. ಶಾರದಾ ಅವರು ಸೆ. 23ರಂದು ಪುತ್ರಿಯೊಂದಿಗೆ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದು, ಸೆ. 24ರಂದು ಪುತ್ರಿಯ ಟಿಸಿ ತರಲು ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ, ಅಲ್ಲಿಂದ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಇಬ್ಬರೂ ಕೂಡ ಸೆ. 24ರಂದು ಊರಿಂದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಶಾಸ್ತ್ರೀ ಸರ್ಕಲ್ ಸಮೀಪದ ಹೊಟೇಲ್‌ಸೆ. 26ರಂದು ಬಂದ ಅವರು ದಂಪತಿಯೆಂದು ಮಾಹಿತಿ ನೀಡಿ ಕೊಠಡಿ ಪಡೆದಿದ್ದರು. ಸೆ. 29ರಂದು ರಾತ್ರಿ 10 ಗಂಟೆಯ ಬಳಿಕ ರವಿವಾರ ಬೆಳಗ್ಗಿನ ನಡುವೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಎಡಿಶನಲ್ ಎಸ್ಪಿ ಕುಮಾರ ಚಂದ್ರ ಭೇಟಿ ನೀಡಿದರು. ಎಸ್‌ಐ ಹರೀಶ್ ಆರ್. ನಾಯ್ಕ, ಪೊಲೀಸ್ ಸಿಬಂದಿ ಚೇತನ್ ಮತ್ತಿತರರು ಭೇಟಿ ನೀಡಿ, ಮೃತದೇಹವನ್ನು ಹೊರತೆಗೆಯಲು ಸಹಕರಿಸಿದರು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಎರಡೂ ಕಡೆಯವರಿಗೂ ಮೃತದೇಹ ವನ್ನು ಹಸ್ತಾಂತರಿಸಲಾಯಿತು.
ಇಬ್ಬರೂ ವಿವಾಹಿತರು
ಇಬ್ಬರೂ ವಿವಾಹಿತರಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ. ಗುರುಮೂರ್ತಿ ಕೃಷಿಕರಾಗಿದ್ದು 8 ವರ್ಷದ ಹೆಣ್ಣು ಮಗುವಿದ್ದರೆ, ಗೃಹಿಣಿಯಾಗಿರುವ ಶಾರದಾ ಅವರಿಗೆ ರಮೇಶ್ ಅವರೊಂದಿಗೆ 10 ವರ್ಷದ ಹಿಂದೆ ವಿವಾಹವಾಗಿದ್ದು, 8 ವರ್ಷದ ಹೆಣ್ಣು ಮಗುವಿದೆ.
ಪತಿ ವಿರುದ್ಧ ದೂರು
ಕೊಠಡಿಯಲ್ಲಿ ಶಾರದಾ ಬರೆದಿಟ್ಟಿದ್ದ ಡೆತ್‌ನೋಟ್ ಲಭಿಸಿದ್ದು, “ನನ್ನ ಸಾವಿಗೆ ಗಂಡನ ಕಿರುಕುಳವೇ ಕಾರಣ’ ಎಂಬ ಉಲ್ಲೇಖವಿದೆ. ಅದರಂತೆ ಆಕೆಯ ಸಹೋದರ ರಮೇಶ್ ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು, ಪತಿ ರಮೇಶ್ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.