ಕಿರುತೆರೆಯ ಬಾಗಿಲನೂ ತಟ್ಟಿದ ಕೊರೊನಾ
Team Udayavani, Mar 24, 2020, 12:32 AM IST
ಮಣಿಪಾಲ: ಚಿತ್ರಪ್ರದರ್ಶನಕ್ಕೆ ಮಾತ್ರ ತಟ್ಟಿದ್ದ ಕೋವಿಡ್-19 ಈಗ ಕಿರುತೆರೆ ಉದ್ಯಮಕ್ಕೂ ಏಟು ಕೊಟ್ಟಿದೆ. ಮಾರ್ಚ್ 3ನೇ ವಾರದಿಂದ ಚಿತ್ರೀಕರಣ ಸಂಪೂರ್ಣ ನಿಲ್ಲಿಸಲಾಗಿದೆ. ಪ್ರಸಾರಣ ಕೇಂದ್ರದಿಂದಲೇ ಅಧಿಕೃತ ಮಾಹಿತಿ ಬಂದಿರುವ ಕಾರಣ ಮಾರ್ಚ್ 21ಕ್ಕೆ ಚಿತ್ರೀಕರಣ ಸಂಪೂರ್ಣ ಸ್ಥಗಿತವಾಗಿದ್ದು, ಖಾಸಗಿ ವಾಹಿನಿಗಳ ನಿದೇರ್ಶಕರಿಗೆ ಆತಂಕ ಆರಂಭವಾಗಿದೆ.
ಕೊರೊನಾ ಆಘಾತ ದಿನೇ ದಿನೇ ಹೆಚ್ಚುತ್ತಿದೆ. ಆರಂಭದಲ್ಲೇ ಇಷ್ಟು ಪರಿಣಾಮ ಹೊಂದಿದ್ದು, ಕಡೆಯ ಹಂತದಲ್ಲಿ ಇದು ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಶೂಟಿಂಗ್ ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ.
ಮಾ. 31ರ ವರೆಗೆ ಸಮಸ್ಯೆ ಇಲ್ಲ
ಈಗಾಗಲೇ ಚಿತ್ರೀಕರಣ ಸ್ಥಗಿತಗೊಂಡು ಎರಡು ದಿನಗಳು ಕಳೆದಿದ್ದು, ಇದರಿಂದ ಮುಂಬರುವ ಸಂಚಿಕೆಗಳ ಪ್ರಸಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಆಂದರೆ ಮಾರ್ಚ್ 31ರ ವರೆಗೆ ಪ್ರಸಾರ ಮಾಡುವಷ್ಟು ಸಂಚಿಕೆಗಳನ್ನು ಕನ್ನಡದ ಎಲ್ಲಾ ಖಾಸಗಿ ಟಿವಿ ಮಾಧ್ಯಮಗಳು ಹೊಂದಿದೆ. ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಸಾಮಾನ್ಯವಾಗಿ 15ರಿಂದ 20 ದಿನಗಳಿಗೆ ಸಾಕಾಗುವಷ್ಟು ಸ್ಟೋರಿ ಬ್ಯಾಂಕಿಂಗ್ ಮಾಡಿಕೊಳ್ಳಲಾಗಿರುತ್ತದೆ. ರಿಯಾಲಿಟಿ ಶೋಗಳಿಗೆ ಮಾತ್ರ ಸಮಸ್ಯೆಯಾಗಬಹುದು.
ಪರ್ಯಾಯ ದಾರಿ
ಈ ಹಿಂದೆ ಹಲವಾರು ಧಾರಾವಾಹಿ ತಂಡಗಳು ಶೀರ್ಷಿಕೆ ಹಾಡು ಪ್ರಸಾರದಿಂದ ದೂರ ಉಳಿದಿದ್ದರು. ಆದರೆ ಸಂಚಿಕೆಗಳನ್ನು ಮುಂದಿನ ದಿನಗಳಿಗೆ ಉಳಿಸಿಕೊಳ್ಳಲು ಇದೀಗ ನಾಲ್ಕರಿಂದ ಐದು ನಿಮಿಷದವರಿಗೆ ಶೀರ್ಷಿಕೆ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ. ರೀ ಕೆಪ್ ಸಮಯವನ್ನು 15 ಸೆಕೆಂಡ್‌ಗಳ ಕಾಲ ಹೆಚ್ಚಿಸಲಾಗಿದೆ. ಇದರೊಂದಿಗೆ ಈ ಹಿಂದೆ 20 ನಿಮಿಷಗಳು ಪ್ರಸಾರವಾಗುತ್ತಿದ್ದ ಧಾರವಾಹಿಯನ್ನು ಇದೀಗ 18 ನಿಮಿಷಕ್ಕೆ ಇಳಿಸಲಾಗುತ್ತಿದೆ.ಇದರಿಂದ ಸುಮಾರು 2 ಸಂಚಿಕೆಗಳಷ್ಟು ವೀಡಿಯೋ ಉಳಿತಾಯವಾಗಲಿದೆ.
ಯಾಕೆ ಈ ಕ್ರಮ
ರಿಯಾಲಿಟಿ ಶೋಗಳ ಚಿತ್ರೀಕರಣದಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಸೇರಿರುತ್ತಾರೆ. ಇದು ಕೊರೊನಾ ತಡೆಯಲು ನೀಡಲಾದ ಸೂಚನೆಗಳಿಗೆ ವಿರುದ್ಧವಾಗಿದ್ದು, ಹಾಗಾಗಿ ಚಿತ್ರೀಕರಣವನ್ನು ನಿಲ್ಲಿಸಲೇಬೇಕಾಗಿದೆ. ಶೂಟಿಂಗ್ ನಿಲ್ಲಿಸಿರುವುದರಿಂದ ಸದ್ಯಕ್ಕೆ ಧಾರಾವಾಹಿಗಳು ಸೇರಿದಂತೆ ರಿಯಾಲಿಟಿ ಶೋಗಳ ಪ್ರಸಾರಕ್ಕೆ ತೊಂದರೆಯಾಗುವುದಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹಳೇ ಎಪಿಸೋಡ್‌ಗಳನ್ನು ಮತ್ತೆ ಪ್ರಸಾರ ಮಾಡಬೇಕಾಗುತ್ತದೆ ಎಂಬುದು ಚಾನೆಲ್ ಮುಖ್ಯಸ್ಥರ ಮಾತು.
ರೇಟಿಂಗ್ ಕುಸಿತದ ಆತಂಕ
ಕೋವಿಡ್-19 ಸುದ್ದಿಗಳ ಮೊರೆ ಹೋಗುತ್ತಿರುವ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ವಾಹಿನಿ ವೀಕ್ಷಣೆಯಲ್ಲಿ ನಿರತರಾಗುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಧಾರವಾಹಿಗಳಿಗೆ ಹೊಡೆತ ಬೀಳಲಿದ್ದು ರೇಟಿಂಗ್ ಅಂಕಗಳ ಮೇಲೆ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ರೇಟಿಂಗ್ ಬರದೇ ಇರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಪರಿಣತರು.
31ರ ಅನಂತರ ಕಷ್ಟ
ಸದ್ಯ ಇರುವ ಚಿತ್ರೀಕರಣ ಮಾರ್ಚ್ 31ರ ವರೆಗೆ ಮಾತ್ರ ಹೊಂದಾಣಿಕರಯಾಗಲಿದ್ದು, ಬಳಿಕದ ದಿನಗಲ್ಲಿ ಕಷ್ಟವಾಗಲಿದೆ. ಅದೂ ಅಲ್ಲದೇ ಒಮ್ಮೆ ಚಿತ್ರೀಕರಣಗೊಂಡ ವಿಡಿಯೋ ಸಂಕಲನವಾಗಿ ಧಾರವಾಹಿ ಪ್ರಸಾರಕಾರ ಕೈ ಸೇರಲು 3ರಿಂದ 4 ದಿನಗಳು ಬೇಕಾಗುವುದರಿಂದ ಮಾರ್ಚ್ 31ರ ಒಳಗೆ ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಸಂಚಿಕೆಗಳ ಪ್ರಸಾರಕ್ಕೆ ಕಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.