ಕೋವಿಡ್-19 ಐಸಿಯು ರೋಗಿ ಪ್ರಮಾಣ ಶೂನ್ಯ ಸಾಧನೆ; ಕಾರ್ಕಳ ತಾ| ಆಸ್ಪತ್ರೆ ರಾಜ್ಯಕ್ಕೆ ಮಾದರಿ
ಕಾರ್ಕಳ ತಾ| ಆಸ್ಪತ್ರೆ ರಾಜ್ಯಕ್ಕೆ ಮಾದರಿ
Team Udayavani, Nov 14, 2020, 5:30 AM IST
ಕಾರ್ಕಳ: ಕೋವಿಡ್-19 ಸೋಂಕು ರೋಗವನ್ನು ಸೋಲಿಸುವ ಹೋರಾಟದಲ್ಲಿ ಕಾರ್ಕಳ ತಾಲೂಕು ದಾಪುಗಾಲಿಟ್ಟಿದೆ. ಶೂನ್ಯ ರೋಗಿ ಮೂಲಕ ರಾಜ್ಯದಲ್ಲೆ ಮಾದರಿ ತಾಲೂಕು ಆಗಿ ಹೊರಹೊಮ್ಮಿದೆ. ತಾಲೂಕಿನ ಕೋವಿಡ್-19 ಐಸಿಯು ಸೆಂಟರ್‌ನಲ್ಲಿದ್ದ ಇಬ್ಬರು ರೋಗಿ ಗಳು ಬುಧವಾರ ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಕೋವಿಡ್-19 ಐಸಿಯು ಸೆಂಟರ್ ಶೂನ್ಯ ರೋಗಿಗಳನ್ನು ಹೊಂದಿದ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುವಾರ ಐಸಿಯುಗೆ ಯಾವುದೇ ರೋಗಿ ದಾಖಲಾಗಿಲ್ಲ.
990 ಮಂದಿಗೆ ಚಿಕಿತ್ಸೆ
ಮೇ 25ರಂದು ಕೋವಿಡ್ ಆಸ್ಪತ್ರೆಯನ್ನು ತಾ| ನಲ್ಲಿ ತೆರೆಯಲಾಗಿತ್ತು. ಇಷ್ಟರವರೆಗೆ 990 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ ಐಸಿಯುಗೆ ದಾಖಲಾದ 137 ಮಂದಿ ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿದ್ದಾರೆ. ನ.11ರಂದು ಐಸಿಯುನಲ್ಲಿದ್ದ ಇಬ್ಬರು ರೋಗಿಗಳು ಬಿಡುಗಡೆಗೊಂಡಿದ್ದು, ಓರ್ವ ರೋಗಿಯನ್ನು ಸಾಮಾನ್ಯ ವಾರ್ಡ್‌ಗೆ ವರ್ಗಾಯಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ.
ತಾಲೂಕಿನ ವೈದ್ಯ-ಸಿಬಂದಿ ಕರ್ತವ್ಯ ಪ್ರಜ್ಞೆ, ಸೇವಾ ಬದ್ಧತೆ, ಜನರಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಚಿಕಿತ್ಸೆಗೆ ಸಿಗು
ತ್ತಿರುವ ಸ್ಪಂದನೆಯಂಥ ಕಾರಣಗಳಿಂದಾಗಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕಾರ್ಕಳ ಈಗ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ರೋಗದ ಕುರಿತು ಜಾಗೃತಿ, ತ್ವರಿತ- ಹೆಚ್ಚು ಸಂಖ್ಯೆಯ ಪರೀಕ್ಷೆ, ಸೋಂಕಿತರು ಪತ್ತೆಯಾಗುತ್ತಲೇ ತುರ್ತುಚಿಕಿತ್ಸೆ ನೀಡುವ ಕ್ರಮಗಳಿಂದಾಗಿ ತಾ|ನಲ್ಲಿ ಸೋಂಕು ವ್ಯಾಪಕ ಹರಡುವಿಕೆ ತಡೆಯುವಲ್ಲಿ ಸಹಕಾರಿಯಾಗಿದೆ.
ಸೋಂಕು ವ್ಯಾಪಕವಾಗಿ ಹಬ್ಬಿದ
ಸಂದರ್ಭ ಒತ್ತಡಗಳ ಮಧ್ಯೆಯೂ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ತಾಲೂಕಿಗೆ 2,000 ಮಂದಿ ಹೊರರಾಜ್ಯ ಹಾಗೂ 35 ಸಾವಿರ ಮಂದಿ ಅನ್ಯ ಜಿಲ್ಲೆಗಳಿಂದ ಬಂದವರಿಗೆ 36 ಕ್ವಾರಂಟೈನ್ ಕೇಂದ್ರಗಳನ್ನು ತೆರೆದು ಗಂಟಲ ದ್ರವ ಪರೀಕ್ಷೆ ನಡೆಸಿ, ಸೋಂಕು ನಿಯಂತ್ರಿಸುವ ಮೂಲಕ ಪುಟ್ಟ ಹಳ್ಳಿ ಗಮನ ಸೆಳೆದಿತ್ತು. ಸೋಂಕಿತರು ಪತ್ತೆಯಾಗುತ್ತಲೇ ತುರ್ತು ಚಿಕಿತ್ಸೆ ನೀಡುವ ಜತೆಗೆ ಪ್ರಥಮ-ದ್ವಿತೀಯ ಸಂಪರ್ಕಿತರನ್ನು ಗುರುತಿಸಿ, ಪರೀಕ್ಷಿಸಿ, ಚಿಕಿತ್ಸೆ ನೀಡುವ ಕೆಲಸ ವ್ಯವಸ್ಥಿತವಾಗಿ ನಡೆದಿತ್ತು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳು, ಸರಕಾರದ ಮಾರ್ಗಸೂಚಿ ಜತೆಗೆ ಶಾಸಕರ ಮುತುವರ್ಜಿ, ಜನಪ್ರತಿನಿಧಿಗಳ ಸಹಕಾರದಿಂದ ಸೋಂಕು ವೇಗವಾಗಿ ನಿಯಂತ್ರಣಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.
ಆಸ್ಪತ್ರೆಗೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿತ್ತು, ವೈದ್ಯರು, ಸಿಬಂದಿ ಸಹಿತ ವಾರಿಯರ್ಸ್ ತಂಡ ಉತ್ತಮವಾಗಿ ಕಾರ್ಯವೆಸಗಿದ್ದರು. ಕ್ಷೇತ್ರದ ಸಂಘ ಸಂಸ್ಥೆ, ಜನತೆ ಸಹಕರಿಸಿದ ಪರಿಣಾಮ ಐಸಿಯು ರೋಗಿಗಳ ಸಂಖ್ಯೆ ಶೂನ್ಯ ಹಂತಕ್ಕೆ ತಲುಪಲು ಕಾರಣವಾಗಿದೆ.
-ವಿ. ಸುನೀಲ್ ಕುಮಾರ್, ಶಾಸಕರು
ವೈದ್ಯರು ಮತ್ತು ಎಲ್ಲ ಸಿಬಂದಿಗಳ ಸಾಮೂಹಿಕ ಕಾರ್ಯ ನಿರ್ವಹಣೆಯಿಂದ ತಾಲೂಕಿನಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿ ಆಗಿದೆ. ಐಸಿಯುನಲ್ಲಿ ರೋಗಿಗಳ ಸಂಖ್ಯೆ ಶೂನ್ಯಕ್ಕೆ ತಲುಪಿದೆ ಎನ್ನುವ ಸಮಾಧಾನಕರ ಅಂಶದ ನಡುವೆ ಇನ್ನೂ ಹೆಚ್ಚಿನ ಮುಂಜಾಗ್ರತೆ ಅಗತ್ಯವಿದೆ.
-ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.