ಉಡುಪಿ: 13 ಮಂದಿ ಆಸ್ಪತ್ರೆಗೆ ದಾಖಲು
Team Udayavani, Apr 2, 2020, 7:00 AM IST
ಉಡುಪಿ: ಕೋವಿಡ್ ಸೋಂಕಿನ ಶಂಕೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬುಧವಾರ ಆಸ್ಪತ್ರೆಗಳ ಐಸೊಲೇಶನ್ ವಾರ್ಡುಗಳಲ್ಲಿ 13 ಮಂದಿ ದಾಖಲಾಗಿದ್ದಾರೆ.
ಉಸಿರಾಟದ ಸಮಸ್ಯೆ ಹೊಂದಿರುವ ಓರ್ವ ಪುರುಷ ಸೇರಿದಂತೆ ಮೂವರು; ಕೋವಿಡ್ 19 ಶಂಕಿತ ಒಂಬತ್ತು ಪುರುಷರು ಸೇರಿದಂತೆ ಒಟ್ಟು 10 ಮಂದಿಯ ಸಹಿತ 22 ಮಂದಿ ನಿಗಾದಲ್ಲಿದ್ದಾರೆ.
ಬುಧವಾರ ಒಟ್ಟು ನೋಂದಣಿ ಮಾಡಿಕೊಂಡವರು 29 ಮಂದಿ. ಇದುವರೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 1,766. ಇವರಲ್ಲಿ ಪ್ರಯಾಣ ಮಾಡಿದವರು, ಉಸಿರಾಟದ ಸಮಸ್ಯೆ ಇರುವವರು, ಕೋವಿಡ್ 19 ಸೋಂಕಿತರ ಸಂಪರ್ಕದಲ್ಲಿರುವರು ಇದ್ದಾರೆ.
ಬುಧವಾರ 28 ದಿನಗಳ ನಿಗಾವನ್ನು ಮುಗಿಸಿದವರು 15, ಇದುವರೆಗಿನ ಸಂಖ್ಯೆ 826. 14 ದಿನಗಳ ನಿಗಾ ಮುಗಿಸಿದವರು 83. ಇದುವರೆಗಿನ ಸಂಖ್ಯೆ 665. ಬುಧವಾರ ಮನೆ ಮತ್ತು ಆಸ್ಪತ್ರೆಯ ಕ್ವಾರಂಟೈನ್‌ಗೆ ಯಾರೂ ದಾಖಲಾಗಿಲ್ಲ.
ಇದುವರೆಗೆ ಮನೆ ನಿಗಾದಲ್ಲಿ 1,647 ಮಂದಿ ಇದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಲ್ಲಿ 166 ಮಂದಿ ಇದ್ದಾರೆ. ಇವರಲ್ಲಿ ಹೈರಿಸ್ಕ್ನಲ್ಲಿರುವವರು 75, ಲೋ ರಿಸ್ಕ್ನವರು 91 ಮಂದಿ.
ಐಸೋಲೇಶನ್ ವಾರ್ಡ್ ನಿಂದ ಬುಧವಾರ 11 ಮಂದಿ ಬಿಡುಗಡೆಗೊಂ ಡಿದ್ದು ಇದುವರೆಗೆ 109 ಮಂದಿ ಬಿಡುಗಡೆ ಗೊಂಡಿದ್ದಾರೆ.
ಬುಧವಾರ ಉಸಿರಾಟದ ಸಮಸ್ಯೆ ಇರುವ ಮೂವರು, ಕೋವಿಡ್ 19 ಶಂಕಿತರು ನಾಲ್ವರು, ಕೊರೊನಾ ಸಂಪರ್ಕದ ನಾಲ್ವರು ಒಟ್ಟು 11 ಮಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೆ 171 ಮಂದಿಯ ಗಂಟಲ ಸ್ರಾವದ ಮಾದರಿಗಳನ್ನು ಕಳುಹಿಸಲಾಗಿದೆ. ಇದುವರೆಗೆ 137 ಜನರ ವರದಿ ಬಂದಿದ್ದು ಮೂವರ ವರದಿ ಪಾಸಿಟಿವ್, 134 ಜನರ ವರದಿ ನೆಗೆಟಿವ್ ಆಗಿದೆ. 31 ಮಂದಿಯ ವರದಿ ಬರಬೇಕಾಗಿದೆ.
ಡಾ| ಟಿಎಂಎ ಆಸ್ಪತ್ರೆ: ಕೋವಿಡ್ 19 ಶುಶ್ರೂಷೆ ಆರಂಭ
ಮಣಿಪಾಲ ಮಾಹೆ ವಿ.ವಿ. ಅಧೀನದ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಎ. 1ರಂದು ಕೋವಿಡ್ 19 ಸೋಂಕಿತರಿಗೆ ಪ್ರತ್ಯೇಕ ಶುಶ್ರೂಷೆ ಆರಂಭಗೊಂಡಿದೆ. ಈಗಾಗಲೇ ದೃಢಪಟ್ಟ ಮೂವರು ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಮುಂದೆ ಇದು ಕೋವಿಡ್ 19 ಸೋಂಕಿತರಿಗೆ ಮಾತ್ರ ಚಿಕಿತ್ಸೆ ಕೊಡುವ ಆಸ್ಪತ್ರೆಯಾಗಲಿದ್ದು ಸಾರ್ವಜನಿಕರಿಗೆ ಅವಕಾಶಗಳಿಲ್ಲ. ಇಲ್ಲಿನ ರೋಗಿಗಳನ್ನು ಈಗಾಗಲೇ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೊರೊನಾ ಶಂಕಿತರನ್ನೂ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ.
ಕೊಂಕಣ ರೈಲ್ವೇ 1.8 ಕೋ.ರೂ. ದೇಣಿಗೆ
ಉಡುಪಿ: ಕೋವಿಡ್ 19 ವೈರಸ್ ಸಮಸ್ಯೆ ನೀಗಿಸಲು ಆವಶ್ಯಕ ಸಾಮಗ್ರಿಗಳ ಪೂರೈಕೆಯಲ್ಲಿ ಪಾತ್ರ ವಹಿಸುತ್ತಿರುವ ಕೊಂಕಣ ರೈಲ್ವೇ ನಿಗಮವು ಸೋಂಕು ನಿಯಂತ್ರಣಕ್ಕಾಗಿ ಸಿಎಸ್‌ಆರ್ ನಿಧಿಯಿಂದ 1.06 ಕೋ.ರೂ.ಗಳನ್ನು ಮತ್ತು ಎಲ್ಲ ನೌಕರರ ಒಂದು ದಿನದ ಮೂಲ ವೇತನದಿಂದ 79.5 ಲ.ರೂ.ಗಳನ್ನು ಪ್ರಧಾನಮಂತ್ರಿಗಳ ನಾಗರಿಕ ಸಹಾಯಕ ಮತ್ತು ತುರ್ತು ಪರಿಹಾರ ನಿಧಿಗೆ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.