ಉಡುಪಿ ಜಿಲ್ಲೆಯಲ್ಲಿ ಚರ್ಮಗಂಟು ಸೋಂಕು ದೃಢಪಟ್ಟಿಲ್ಲ: ಪಶು ಸಂಗೋಪನೆ ಇಲಾಖೆ ಸ್ಪಷ್ಟನೆ
ಹಾಲು ಕುಡಿದರೆ ರೋಗ ಬರುವುದಿಲ್ಲ
Team Udayavani, Oct 16, 2022, 10:35 AM IST
ಉಡುಪಿ/ಕುಂದಾಪುರ: ರಾಜ್ಯದ ಇತರ ಜಿಲ್ಲೆಗಳಲ್ಲಿ ಜಾನುವಾರುಗಳ ಚರ್ಮಗಂಟು (ಲುಂಪಿ ಸ್ಕಿನ್) ಸೋಂಕು ವ್ಯಾಪಕವಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಈ ಸೋಂಕು ದೃಢಪಟ್ಟಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಸ್ಪಷ್ಟಪಡಿಸಿದೆಯಾದರೂ ಸಾಮಾಜಿಕ ಜಾಲತಾಣ ಗಳಲ್ಲಿ ಬೇರೆ ಬೇರೆ ವದಂತಿಗಳು ಹಬ್ಬುತ್ತಿರುವುದರಿಂದ ಜಿಲ್ಲೆಯ ಹೈನುಗಾರರಲ್ಲಿಯೂ ಆತಂಕ ಉಲ್ಬಣಿಸಿದೆ. ಆದ್ದರಿಂದ ಪಶುವೈದ್ಯರನ್ನು ಸಂಪರ್ಕಿಸಿ ಮಾಹಿತಿ ನೀಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ.
“ಮತ್ತೆ ಲುಂಪಿ ಚರ್ಮ ಸೋಂಕಿನ ಆತಂಕ’ ಎಂದು ಉದಯವಾಣಿ ಸೆ. 29ರಂದು ವಿಸ್ತೃತ ವರದಿ ಪ್ರಕಟಿಸಿದ್ದು, ವರದಿ ಆಧಾರದಲ್ಲಿ ಮುಖ್ಯಮಂತ್ರಿ ಕಚೇರಿ ಅಧೀನ ಕಾರ್ಯದರ್ಶಿಗಳಿಂದ ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ಬಂದಿದೆ. ಹಸುಗಳ ಲುಂಪಿ ಕಾಯಿಲೆಯು ಮನುಷ್ಯರಿಗಾಗಲಿ, ನಾಯಿ ಮತ್ತಿತರ ಪ್ರಾಣಿಗಳಿಗಾಗಲಿ ಹರಡುವುದಿಲ್ಲ. ಅಂತೆಯೇ ಸೋಂಕು ಬಾಧಿತ ಹಸುವಿನ ಹಾಲನ್ನು ಕುಡಿಯುವುದರಿಂದಲೂ ರೋಗ ಬರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೈನುಗಾರರು ಇದನ್ನು ಪಾಲಿಸಿ
ಜಾನುವಾರುಗಳನ್ನು ಹಿಂಡಿನಲ್ಲಿ ಮೇಯಿಸುವುದು ಮತ್ತು ಹೊರಗಿನ ಜಾನುವಾರುಗಳನ್ನು ತಂದು ಹಿಂಡಿನಲ್ಲಿ ಬಿಡುವ ಕೆಲಸ ಮಾಡಬಾರದು. ಹಟ್ಟಿ ಹಾಗೂ ಜಾನುವಾರುಗಳನ್ನು ಶುಚಿಯಾಗಿಡಬೇಕು. ಕೊಟ್ಟಿಗೆಯಲ್ಲಿ ಹೊಗೆ, ಬೇವಿನೆಣ್ಣೆ ಹಾಕಿ ಉಣ್ಣಿ, ಸೊಳ್ಳೆ, ನೊಣಗಳು ಬಾರದಂತೆ ನೋಡಿಕೊಳ್ಳಬೇಕು. ಹಟ್ಟಿಯನ್ನು ಫಿನಾಯಿಲ್ / ಸೋಡಿಯಂ ಹೈಪೊಕ್ಲೊರೈಟ್ ಅಥವಾ ಪೆನಿಲ್ ದ್ರಾವಣದಲ್ಲಿ ಚೆನ್ನಾಗಿ ತೊಳೆಯಬೇಕು. ರೋಗಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು. ಕೃತಕ ಗರ್ಭಧಾರಣೆಗೆ ರೋಗಪೀಡಿತ ಹೋರಿಗಳ ವೀರ್ಯ ಉಪಯೋಗಿಸಬಾರದು. ಅಕಸ್ಮಾತ್ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕವಾಗಿ ಹೂಳಬೇಕು. ಗುಳ್ಳೆಗಳಾಗಿ ಒಡೆದರೆ ಅದಕ್ಕೆ ಅರಶಿನ, ಬೇವಿನ ಸೊಪ್ಪನ್ನು ಮೊಸರಿನಲ್ಲಿ ಮಿಶ್ರಣ ಮಾಡಿ ಹಚ್ಚಿ ಮುಂಜಾಗ್ರತೆ ಕೈಗೊಳ್ಳುವ ಕ್ರಮ ಕೆಲವೆಡೆ ಮಾಡಲಾಗುತ್ತಿದೆ. ಗುಳ್ಳೆ ವಾಸಿಯಾಗಲು 15 ದಿನಗಳ ಅವಧಿ ಬೇಕಾಗುತ್ತದೆ. ರೋಗಪೀಡಿತ ಜಾನುವಾರನ್ನು ಪ್ರತ್ಯೇಕವಾಗಿಟ್ಟರೆ ಹರಡುವ ಸಾಧ್ಯತೆ ಕಡಿಮೆ.
ಕಾಯಿಲೆಯ ಲಕ್ಷಣ
ನೀರು, ಆಹಾರ, ಸೊಳ್ಳೆ, ಉಣ್ಣೆಗಳ ಮೂಲಕ ಬಾಧಿಸುತ್ತದೆ. ಬಾಧಿತ ಜಾನುವಾರುಗಳು ಮೇವು ತಿನ್ನುವುದಿಲ್ಲ, ವಿಪರೀತ ಜ್ವರ, ಕಣ್ಣಿನಿಂದ ನೀರು, ಮೂಗು ಬಾಯಿಗಳಿಂದ ದ್ರವ ಸುರಿಯುತ್ತದೆ. ಚರ್ಮದ ಮೇಲೆ 1ರಿಂದ 5ಸೆಂ.ಮೀ. ಗುಳ್ಳೆಗಳೇಳುತ್ತವೆ; ಬಳಿಕ ಒಡೆದು ಕೀವು ಹೊರ ಬರುತ್ತದೆ. ಚಿಕಿತ್ಸೆ ನೀಡದಿದ್ದಲ್ಲಿ ಗಾಯದಲ್ಲಿ ಹುಳಗಳಾಗಿ ಜಾನುವಾರು ಶಕ್ತಿಹೀನವಾಗುತ್ತದೆ. ಜೀವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ಚರ್ಮಗಂಟು ಕಾಯಿಲೆ ಬಗ್ಗೆ ಹೈನುಗಾರರು ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಸೋಂಕು ದೃಢಪಟ್ಟಿಲ್ಲ. ಇಲಾಖೆ ಮಟ್ಟದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕಾಯಿಲೆಯನ್ನು ಸುಲಭದಲ್ಲಿ ಹತೋಟಿಗೆ ತರಬಹುದು. ಕೇವಲ ಶೇ. 2ರಷ್ಟು ಮಾತ್ರ ಮಾರಣಾಂತಿಕ. ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಲಸಿಕೆ, ಔಷಧಕ್ಕೆ ಆದೇಶಿಸಿದ್ದು 10 ಸಾವಿರ ಲಸಿಕೆ ಸರಬರಾಜು ಆಗಿದೆ.
– ಡಾ| ಶಂಕರ್ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ, ಉಡುಪಿ ಜಿಲ್ಲೆ
ಇದನ್ನೂ ಓದಿ : ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ನಟ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ, ಚಾಲಕನಿಗೆ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.