ತರಕಾರಿ ವ್ಯಾಪಾರಿಗಳ ನಡುವೆ ಜಗಳ; ದೂರು, ಪ್ರತಿದೂರು ದಾಖಲು
Team Udayavani, Sep 11, 2022, 11:44 PM IST
ಕಾರ್ಕಳ: ವ್ಯಾಪಾರಕ್ಕೆ ಸಂಬಂಧಿಸಿ ತರಕಾರಿ ಅಂಗಡಿ ಮಾಲಕರ ಮಧ್ಯೆ ಜಗಳ ನಡೆದಿದ್ದು, ಘಟನೆಗೆ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆ. 10 ರಂದು ದೂರು, ಪ್ರತಿದೂರು ದಾಖಲಾಗಿದೆ.
ಕಾರ್ಕಳ ತಾಲೂಕು ನೂರಾಳ್ಬೆಟ್ಟುವಿನ ಹೆಬ್ಟಾರು ಬೆಟ್ಟು ನಿವಾಸಿ ಜಿನೇಶ್ ಅವರು ಬಜಗೋಳಿ ಮಾರ್ಕೆಟ್ ಪ್ರಾಂಗಣದಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದು, ಎದುರಿನ ಅಂಗಡಿಯ ಪ್ರಸನ್ನ ಅವರು ಮಧ್ಯಾಹ್ನ ಜಿನೇಶ್ ಅವರ ಅಂಗಡಿಗೆ ಬಂದು ಎರಡು ಕಟ್ಟು ಸ್ಪ್ರಿಂಗ್ ಆನಿಯನ್ ಬೇಕೆಂದು ಖರೀದಿಸಿದ್ದರು. ಇದಕ್ಕೆ 40 ರೂ. ಹಣ ಕೇಳಿದಾಗ ನಿರಾಕರಿಸಿ, ಸ್ಪ್ರಿಂಗ್ ಆನಿಯನ್ ಅನ್ನು ಅಲ್ಲೇ ಎಸೆದು ಕ್ರೇಟ್ನಲ್ಲಿದ್ದ ಚೂರಿಯಿಂದ ಜಿನೇಶ್ ಅವರ ಬೆನ್ನಿಗೆ ಇರಿದು ಗಾಯಗೊಳಿಸಿದ್ದಾರೆ. ಬಳಿಕ ಬೆದರಿಕೆ ಒಡ್ಡಿದ್ದಾರೆ ಎಂದು ಜಿನೇಶ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಸನ್ನ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಿದೂರು: ಪ್ರತಿಮಾ ಹಾಗೂ ಪ್ರಸನ್ನ ಅವರು ಜಿನೇಶ್ ಅವರ ಅಂಗಡಿಗೆ ಹೋಗಿದ್ದಾಗ ಹಣದ ವಿಚಾರದಲ್ಲಿ ಜಗಳವಾಗಿದ್ದು, ಅಂಗಡಿ ಮಾಲಕ ಜಿನೇಶ್ ಏಕಾಏಕಿ ತನ್ನ ಗಂಡ ಪ್ರಸನ್ನ ಅವರನ್ನು ನೆಲಕ್ಕೆ ದೂಡಿ ಹಾಕಿ ಕುತ್ತಿಗೆ ಹಿಡಿದು ತಲೆ, ಎದೆಗೆ ಹಲ್ಲೆ ನಡೆಸಿದ್ದು, ತಡೆಯಲು ಹೋದ ತನ್ನನ್ನು ದೂಡಿ ಜೀವ ಬೆದರಿಕೆ ಒಡ್ಡಿದ್ದಾಗಿ ಪ್ರತಿಮಾ ಅವರು ಜಿನೇಶ್ ವಿರುದ್ಧ ಪ್ರತಿದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.