ಬ್ಲ್ಯಾಕ್‌ಮೇಲ್ ಪ್ರಕರಣ : ಸ್ವರೂಪ್ ಬ್ಯಾಂಕ್ ಖಾತೆಯಲ್ಲಿ 1.8 ಕೋಟಿ ರೂ.?
Team Udayavani, Aug 20, 2019, 5:56 AM IST
ಉಡುಪಿ: ಬ್ಲ್ಯಾಕ್‌ಮೇಲ್ / ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮಣಿಪಾಲದ ಸ್ವರೂಪ್ ಶೆಟ್ಟಿ (23) ಗೆಳೆಯರಿಗೆ ತನ್ನ ಬ್ಯಾಂಕ್ ಖಾತೆಯಲ್ಲಿ ಒಂದು ಕೋ.ರೂ.ಗಳಿಗೂ ಅಧಿಕ ಹಣ ಜಮೆ ಇರುವ ಪಾಸ್‌ಪುಸ್ತಕವನ್ನು ತೋರಿಸುತ್ತಿದ್ದ. ಇದರಿಂದಾಗಿ ಇವನ ಮೇಲೆ ಗೆಳೆಯರಿಗೆ ವಿಶ್ವಾಸ ಹೆಚ್ಚಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಪಕ್ಕಾ ಶೋಕಿವಾಲಾನಂತೆ ದಿನ ಕಳೆಯುತ್ತಿದ್ದ ಸ್ವರೂಪ್ ಹೊಟೇಲ್‌ಗಳಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದ್ದ. ಸ್ವಂತ ಫ್ಲ್ಯಾಟ್ ಹೊಂದಿದ್ದ ಈತ ಇತ್ತೀಚೆಗಷ್ಟೆ ಮಣಿಪಾಲದ ಹೊಟೇಲೊಂದರಲ್ಲಿ ಕೆಲವು ದಿನ ತಂಗಿದ್ದು,ಬಿಲ್ ಮೊತ್ತ 4.5 ಲ.ರೂ. ದಾಟಿತ್ತು ಎಂದು ತಿಳಿದು ಬಂದಿದೆ.
ಪೊಲೀಸ್ ಹೆಸರು ಬಳಕೆ
“ನನ್ನ ಬೈಕ್ ವ್ಯವಹಾರದ ಬಗ್ಗೆ ನೀವು ಅಪಪ್ರಚಾರ ಮಾಡಿದ್ದರಿಂದ ನಷ್ಟವಾಗಿದೆ. ವ್ಹೀಲ್ಸ್ ಟು ಗೋ ನಿಟ್ಟೆ ಬ್ರಾಂಚ್ ನಿಮ್ಮಿಂದಾಗಿ ಕ್ಲೋಸ್ ಆಗಿದೆ. ಇದು ಪೊಲೀಸರಿಗೂ ಗೊತ್ತಿದೆ. ಅವರು ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಬಂಧಿಸುತ್ತಾರೆ’ ಎಂದು ಹೆದರಿಸುವ ಜತೆಗೆ ಭಾವನಾತ್ಮಕವಾಗಿಯೂ ಗೆಳೆಯರನ್ನು ಖೆಡ್ಡಾಕ್ಕೆ ದೂಡು ತ್ತಿದ್ದ. “ಪೊಲೀಸರ ಜುಟ್ಟು ನನ್ನ ಕೈಯಲ್ಲಿದೆ’ ಎಂದು ಕೂಡ ಅಬ್ಬರಿಸುತ್ತಿದ್ದ. ಪದೇಪದೆ ಅಧಿಕಾರಿಯೋರ್ವರ ಸಹಿತ ಕೆಲವು ಪೊಲೀಸರ ಹೆಸರನ್ನು ಹೇಳುತ್ತಿದ್ದ. ಒಮ್ಮೆ ರೌಡಿ ಜತೆಗೆ ಭೂಗತ ಪಾತಕಿ ಹೆಸರನ್ನು ಕೂಡ ಹೇಳಿ ಹೆದರಿಸಿದ್ದ.
ವೀಕ್‌ನೆಸ್ ಜತೆ ಆಟ
ಗೆಳೆಯರ ಸಣ್ಣ ವೀಕ್‌ನೆಸ್‌ನ ಸುಳಿವು ದೊರೆತರೂ ಸ್ವರೂಪ್ ಅದರೊಂದಿಗೆ ಆಟವಾಡುತ್ತಿದ್ದ. ಅದನ್ನೇ ತನ್ನ ಬ್ಲ್ಯಾಕ್‌ವೆುàಲ್‌ಗೆ ಉಪಯೋಗಿಸಿಕೊಳ್ಳುತ್ತಿದ್ದ. ಗೆಳೆಯ ಗೆಳತಿಯರ ವಿಚಾರಗಳು ಕೂಡ ಆತನ ಬ್ಲ್ಯಾಕ್‌ವೆುàಲ್‌ನ ಭಾಗವಾಗಿತ್ತು. ಗೆಳೆಯರ ಮನೆಯ ಸ್ಥಿತಿ ಗತಿಯನ್ನು ಸೂಕ್ಷ್ಮವಾಗಿ ಅರಿತು ಇಡೀ ಮನೆಯವರೇ ತನ್ನ ವಂಚನಾ ಜಾಲಕ್ಕೆ ಸಿಲುಕುವಂತೆ ಮಾಡಿದ್ದ. ಅನೇಕ ಬಾರಿ ಗೆಳೆಯರ ಹೆತ್ತವರ ಸಮ್ಮುಖ/ಹೆತ್ತವರಿಂದಲೇ ನೇರವಾಗಿ ಹಣ ಪಡೆದಿದ್ದ. ಒಬ್ಬ ಗೆಳೆಯನ ತಾಯಿಯ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಕೂಡ ತಿಳಿದುಕೊಂಡು ಹಣಕ್ಕಾಗಿ ಪೀಡಿಸಿ ಅದರಲ್ಲಿ ಯಶಸ್ವಿಯಾಗಿದ್ದ.
ಲ್ಯಾಪ್‌ಟಾಪ್ ವಂಚನೆ
ಒಬ್ಬ ಯುವಕನಿಗೆ ಆರಂಭದಲ್ಲಿ ಲ್ಯಾಪ್‌ಟಾಪ್ ಕೊಡಿಸುವುದಾಗಿ ಹಣ ಪಡೆದು ಲ್ಯಾಪ್‌ಟಾಪ್ ನೀಡದೆ ವಂಚಿಸಿದ್ದ. ಹಣ ಕೇಳಿದಾಗ ಬೇರೆ ರೀತಿಯ ಬೆದರಿಕೆಗಳನ್ನು ನೀಡುತ್ತಾ ಬಂದ. ಅಂತಿಮವಾಗಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ.
ಅನೇಕ ಕುಟುಂಬಗಳನ್ನೇ ಬೆದರಿಕೆ ತಂತ್ರದ ಮೂಲಕ ತನ್ನ “ನಿಯಂತ್ರಣ’ ದಲ್ಲಿಟ್ಟುಕೊಂಡಿದ್ದರೂ ಯಾರೂ ದೂರು ಕೊಡಲು ಮುಂದಾಗಿರ ಲಿಲ್ಲ. ಕೊನೆಗೆ ಹುಡುಗಿಯೋರ್ವಳ ಮನೆಯವರು ಪೊಲೀಸರ ಮೊರೆ ಹೋಗಿದ್ದರಿಂದ ಸ್ವರೂಪನ ವಂಚನೆ ಹೊರ ಬೀಳ ಲಾರಂಭಿಸಿದವು ಎಂದು ಮೂಲಗಳು ತಿಳಿಸಿವೆ. ವಂಚನೆಗೊಳ ಗಾದ ಯುವಕರು ಮತ್ತು ಅವರ ಹೆತ್ತವರು ಉಡುಪಿ ಎಸ್‌ಪಿ ಬಳಿ ತೆರಳಿ ನ್ಯಾಯ, ರಕ್ಷಣೆ ಕೇಳಿದ್ದಾರೆ.
3 ದಿನಗಳ ಪೊಲೀಸ್ ಕಸ್ಟಡಿ
ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟಿನ ಯುವಕನಿಗೆ ಜೀವ ಬೆದರಿಕೆಯೊಡ್ಡಿ 26 ಲ. ರೂ.ಗಳನ್ನು ಪಡೆದು ವಂಚಿಸಿರುವ ಆರೋಪಿ ಸ್ವರೂಪ್ ಶೆಟ್ಟಿಯನ್ನು ಆ. 19ರಿಂದ 3 ದಿನಗಳ ಕಾಲ ಪಡುಬಿದ್ರಿ ಪೊಲೀಸರು ತಮ್ಮ ವಶಕ್ಕೆ ಪಡೆದು ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.