ಕರಾವಳಿ ಭಾಗದ ಅಪರಾಧ ಸುದ್ದಿಗಳು
Team Udayavani, Apr 9, 2019, 6:01 AM IST
ಮಣಿಪಾಲ:ಎರಡು ವಾರಗಳಿಂದ ಅನಾಥ ಸ್ಥಿತಿಯಲ್ಲಿದ್ದ ಸ್ಕೂಟರ್ ಪೊಲೀಸ್ ವಶಕ್ಕೆ
ಉಡುಪಿ: ಮಣಿಪಾಲದ ಎಂಐಟಿ ಬಸ್ ನಿಲ್ದಾಣದ ಸಮೀಪದಲ್ಲಿ ಸುಮಾರು 16 ದಿನಗಳಿಂದ ನಿಲುಗಡೆಯಾಗಿದ್ದ ಕೆಂಪು ಬಣ್ಣದ ಸ್ಕೂಟರನ್ನು ಎ. 8ರಂದು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೆ.ಎ.19 ಜೆ. 8539 ನಂಬ ರಿನ ಈ ಸ್ಕೂಟರನ್ನು ಇಲ್ಲಿ ಯಾರು ನಿಲುಗಡೆ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಮೂರು ದಿನಗಳ ಹಿಂದೆ ಸ್ಕೂಟರನ್ನು ಸಾರ್ವಜನಿಕರೊಬ್ಬರು ಕಾಂಕ್ರೀಟ್ ರಸ್ತೆಯಿಂದ ಪಕ್ಕದ ಮಣ್ಣಿನ ರಸ್ತೆಯಲ್ಲಿ ನಿಲ್ಲಿಸಿರು. ವಾಹನದ ಬಗ್ಗೆ ಮಣಿಪಾಲ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗೋಳ್ತ ಮಜಲು: ರೈಲಿನಡಿಗೆ ಬಿದ್ದು ಸಾವು
ಬಂಟ್ವಾಳ: ಗೋಳ್ತಮಜಲು ಗ್ರಾಮದ ಮೈರದ ದಿ| ವೆಂಕಪ್ಪ ಗೌಡ ಅವರ ಮಗ ಪುರಂದರ (28) ಅವ ರು ಕಲ್ಲಡ್ಕ ಸಮೀಪದ ಗೋಳ್ತಮಜಲಿನ ಮದಕ್ಕದಲ್ಲಿ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಆಮ್ನಿ ಢಿಕ್ಕಿ: ಗಾಯ
ಮಂಗಳೂರು: ಅಡ್ಯಾರಿನ ಹೆದ್ದಾರಿಯಲ್ಲಿ ಎ. 7ರಂದು ರಾತ್ರಿ ಆಮ್ನಿ ಢಿಕ್ಕಿ ಹೊಡೆದು ಪಾದಚಾರಿ ಬಿ. ಮಹಮ್ಮದ್ ಗಾಯ ಗೊಂಡಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಟ್ಕಾ: ಬಂಧನ
ಮಲ್ಪೆ: ತೆಂಕನಿಡಿಯೂರು ಲಕ್ಷಿ ನಗರದ ಬಸ್ ನಿಲ್ದಾಣದ ಬಳಿಯ ಮಟ್ಕಾ ಅಡ್ಡೆಗೆ ಮಲ್ಪೆ ಠಾಣಾಧಿಕಾರಿ ಮಧು ದಾಳಿ ನಡೆಸಿ ಕೃಷ್ಣ ಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ್ದ 700 ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.
ಗೂಡ್ಸ್ ರೈಲು ಢಿಕ್ಕಿ : ಅಪರಿಚಿತ ಸಾವು
ಮಂಗಳೂರು: ಗೂಡ್ಸ್ ರೈಲು ಢಿಕ್ಕಿ ಹೊಡೆದು ಸುಮಾರು 40 ವರ್ಷದ ಅಪರಿಚಿತ ಮೃತಪಟ್ಟ ಘಟನೆ ತೊಕ್ಕೊಟ್ಟು -ಉಳ್ಳಾಲ ಮಧ್ಯೆ ರೈಲು ಮಾರ್ಗದಲ್ಲಿ ಸೋಮವಾರ ಸಂಭವಿಸಿದೆ. ವ್ಯಕ್ತಿ ಸುಮಾರು 5.5 ಅಡಿ ಎತ್ತರವಿದ್ದು ಕಪ್ಪುಬಣ್ಣದ ಪ್ಯಾಂಟ್ ಹಾಗೂ ತಿಳಿನೀಲಿ ಬಣ್ಣದ ಶರ್ಟ್ ಧರಿಸಿದ್ದಾರೆ. ಎಣ್ಣೆ ಕಪ್ಪು ಶರೀರ ಹೊಂದಿದ್ದಾರೆ. ಮೃತದೇಹವನ್ನು ವೆನಾÉಕ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈತನ ಬಗ್ಗೆ ಮಾಹಿತಿ ಇದ್ದಲ್ಲಿ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
ಅಗ್ರಹಾರ: ಮನೆಯೊಳಗೆ ಬಿದ್ದು ಸಾವು
ಕಾಪು: ಚಿಕ್ಕಪ್ಪನ ಮನೆಗೆ ಬಂದಿದ್ದ ಅವಿವಾಹಿತ ವ್ಯಕ್ತಿಯೋರ್ವ ಕಟಪಾಡಿ ಅಗ್ರಹಾರದ ಮನ್ಸೂರ್ ಅಲಿ ಅವರ ಮನೆಯ ಶೌಚಾಲಯದ ಬಳಿ ಬಿದ್ದು ಮೃತಪಟ್ಟಿರು ವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಉಡುಪಿ ನಾಯರ್‌ಕೆರೆ ಮೈಕ್ರೋ ಸ್ಟೇಷನ್ ಬಳಿ ನಿವಾಸಿ ಆರೀಫ್ (43) ಮೃತ ವ್ಯಕ್ತಿ. ಮನೆಯವರು ಮೂಲ್ಕಿಯ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಸಂದರ್ಭ ಎ. 4ರಿಂದ ಎ. 8ರ ನಡುವೆ ಬಿದ್ದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟ: ಠಾಣೆಯಿಂದ ತಪ್ಪಿಸಿಕೊಂಡಾತ ಸೆರೆ
ಕೋಟ: ಅಕ್ರಮ ಮರಳುಗಾರಿಕೆ ಪ್ರಕರಣದಲ್ಲಿ ಸೆರೆ ಯಾಗಿ ಮಾ. 20ರಂದು ಕೋಟ ಠಾಣೆಯಿಂದ ಪರಾರಿಯಾಗಿದ್ದ ಟೆಂಪೋ ಚಾಲಕ ಮಂಜುನಾಥನನ್ನು ಸೋಮವಾರ ಶಿರಾಲಕೊಪ್ಪದಲ್ಲಿ ಬಂಧಿಸಲಾಗಿದೆ.
ಯುವಕ ನಾಪತ್ತೆ: 10 ತಿಂಗಳ ಬಳಿಕ ದೂರು
ಮೂಡುಬಿದಿರೆ: ಮಂಗಳೂರಿಗೆ ಕ್ಯಾಟ ರಿಂಗ್ ಕೆಲಸಕ್ಕೆಂದು ತೆರಳಿದ್ದ ಯುವಕನೋರ್ವ 10 ತಿಂಗಳಿಂದ ನಾಪ ತ್ತೆ ಯಾಗಿರುವ ಬಗ್ಗೆ ಮೂಡು ಬಿದಿರೆ ಠಾಣೆಯಲ್ಲಿ ವಿಳಂಬ ವಾಗಿ ದೂರು ದಾಖಲಾಗಿದೆ.ಕಲ್ಲಮುಂಡ್ಕೂರು ಬರ್ಕೆಬೆಟ್ಟು ನಿವಾಸಿ ಆ್ಯಂಡ್ರೋ ಪಿಂಟೋ ಅವರ ಪುತ್ರ ಆಂತೋನಿ ಪಿಂಟೋ (21) ನಾಪತ್ತೆಯಾದಾತ.ಸುಳಿವು ಸಿಕ್ಕಲ್ಲಿ ಮೂಡುಬಿದಿರೆ ಠಾಣೆ (08258-236333)ಅನ್ನು ಸಂಪರ್ಕಿಸಲು ಕೋರಲಾಗಿದೆ.
ಬಿಜೈ: ಅಪರಿಚಿತ ಮಹಿಳೆ ಪತ್ತೆ
ಮಂಗಳೂರು: ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ ಸುಮಾರು 26 ವರ್ಷ ಪ್ರಾಯದ ಅಪರಿಚಿತ ಮಹಿಳೆ ಪತ್ತೆಯಾಗಿದ್ದಾಳೆ.ತನ್ನ ಗಂಡನ ಹೆಸರು ಮಂಜುನಾಥ ಎಂಬುದಾಗಿ ತಿಳಿಸಿರುವ ಈಕೆ ಸರಿ ಯಾದ ವಿಳಾಸ ತಿಳಿಸಿಲ್ಲ.ಈಕೆಯ ಮಾಹಿತಿ ಇದ್ದರೆ ಬರ್ಕೆ ಠಾಣೆಯನ್ನು ಸಂಪರ್ಕಿಸಬಹುದು.
ಶವದ ಗುರುತು ಪತ್ತೆಗೆ ಮನವಿ
ಮಂಗಳೂರು: ನಗರದ ಗೂಡ್ಸ್ ಶೆಡ್ ರಸ್ತೆಯ ಸೀ ಪ್ಯಾಲೇಸ್ ಹೊಟೇಲ್ ಬಳಿ ರಸ್ತೆ ಬದಿ ಮಾ.25ರಂದು ಪತ್ತೆಯಾಗಿದ್ದ ಸುಮಾರು 40- 45 ವರ್ಷ ಪ್ರಾಯದ ಗಂಡಸಿನ ಶವದ ಗುರುತು ಪತ್ತೆಯಾಗಿಲ್ಲ.ವಾರಸುದಾರರು ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.