ಮಲ್ಲಾರು: ತಾಯಿ – ಮಗ ನಾಪತ್ತೆ; ದೂರು ದಾಖಲು
Team Udayavani, Jun 4, 2022, 5:17 PM IST
ಕಾಪು: ಮಲ್ಲಾರು ಗ್ರಾಮದ ಪಕೀರಣಕಟ್ಟೆ ನಿವಾಸಿ ತಾಯಿ ಮತ್ತು ಮಗು ಜೂ. 1ರಿಂದ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಪಕೀರಣಕಟ್ಟೆ ಮಯ್ಯುದ್ದೀನ್ ಜುಮಾ ಮಸೀದಿ ಬಳಿಯ ನಿವಾಸಿ ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ರಿಜ್ವಾನ್ ಅಹಮದ್ ಅವರ ಪತ್ನಿ ರೈಸಾ ತಬಸ್ಸುಂ (26) ಮತ್ತು 2 ವರ್ಷ 10 ತಿಂಗಳು ಪ್ರಾಯದ ಮಗ ಇಜಾನ್ ಅಹ್ಮದ್ ಕಾಣೆಯಾಗಿದ್ದಾರೆ.
ಜೂ. 1ರಂದು ಬೆಳಗ್ಗೆ ರೈಸಾ ತಬಸ್ಸುಂ ಅವರು ತಾನು ಮಲ್ಲಾರಿನಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಸ್ವಲ್ವ ದಿವಸ ಬಿಟ್ಟು ಬರುವುದಾಗಿ ಅತ್ತೆ ಬಳಿ ತಿಳಿಸಿದ್ದು ಬಳಿಕ ಮಗನ ಸಹಿತವಾಗಿ ಮನೆಯಿಂದ ತೆರಳಿದ್ದಳು.
ಜೂ. 2ರಂದು ರೈಸಾ ತಬಸ್ಸುಂ ಅವರ ತಾಯಿ ದೂರವಾಣಿ ಕರೆ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ, ಅವಳಿಗೆ ಸ್ವಲ್ಪ ಮೊಬೈಲ್ ಕೊಡಿ ಎಂದು ತಿಳಿಸಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ರೈಸಾ ತಬಸ್ಸುಂ ಅವರ ಅತ್ತೆ ಮುಮ್ತಾಜ್ ತನ್ನ ಸೊಸೆ ಮೊಮ್ಮಗನೊಂದಿಗೆ ತಾಯಿ ಮನೆಗೂ ಹೋಗದೆ, ಮರಳಿ ಅತ್ತೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.